Friday, January 24, 2025
ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯರಾಜ್ಯಸುದ್ದಿ

ಎರಡನೇ ಬಾರಿ ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ ಕಣಕ್ಕೆ..! ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಕಂಡು ಕಂಗಾಲಾದ ಆಳಿದುಳಿದ ಕೈ ನಾಯಕರು ; 50 ರಿಂದ 60 ಸಾವಿರ ಮತಗಳ ಅಂತರದಲ್ಲಿ ಭಾರಿ ಗೆಲುವಿನ ನಿರೀಕ್ಷೆ ಹುಟ್ಟಿಸಿದ ಕಾರ್ಯಕರ್ತರ ಸಂಭ್ರಮ – ಕಹಳೆ ನ್ಯೂಸ್

ಬೆಳ್ತಂಗಡಿ : ಸುಳ್ಯ -ಪುತ್ತೂರು- ಬೆಳ್ತಂಗಡಿ ಒಂದೇ ವಿಧಾನಸಭಾ ಕ್ಷೇತ್ರವಾಗಿದ್ದ ಕಾಲದಲ್ಲಿ ಸುಳ್ಯದ ಬಾಳಗೋಡು ವೆಂಕಟರಮಣ ಗೌಡ ಬೆಳ್ತಂಗಡಿಯ ಮೊದಲ ಶಾಸಕರು. ಪ್ರತ್ಯೇಕ ಕ್ಷೇತ್ರವಾದ ನಂತರ 1957ರಲ್ಲಿ ನಡೆದ ಚುನಾವಣೆಯಲ್ಲಿ ಧರ್ಮಸ್ಥಳ ದೇವಸ್ಥಾನದ ಧರ್ಮಾಧಿಕಾರಿಯಾಗಿದ್ದ ರತ್ನವರ್ಮ ಹೆಗ್ಗಡೆ 1957ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾದರು. 1962ರಲ್ಲಿ ಕಾಂಗ್ರೆಸ್ ರತ್ನವರ್ಮ ಹೆಗ್ಗಡೆಯವರನ್ನು ಕಾಪು ಕೇತ್ರದಲ್ಲಿ ಕಣಕ್ಕಿಳಿಸಿ, ಬಂಟ್ವಾಳದ ಕೊಂಕಣಿ ಸಮುದಾಯದ ವೈಕುಂಠ ಬಾಳಿಗರಿಗೆ ಅವಕಾಶ ಕೊಟ್ಟಿತ್ತು. 1962 ಮತ್ತು 1967ರಲ್ಲಿ ಎರಡು ಬಾರಿ ಶಾಸಕರಾಗಿದ್ದ ಬಾಳಿಗರು ವಿಧಾನಸಭೆಯ ಸ್ಪೀಕರ್ ಸಹ ಆಗಿದ್ದರು. ಸುಳ್ಯದ ಸುಬ್ರಹ್ಮಣ್ಯ ಗೌಡ 1972ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

1978ರಲ್ಲಿ ಸ್ಥಳೀಯ ಒಕ್ಕಲಿಗ ಸಮುದಾಯದ ಗಂಗಾಧರ ಗೌಡ 31,255 ಮತ ಪಡೆದು ಆಯ್ಕೆಯಾಗಿದ್ದರು. ಗುಂಡೂರಾವ್ ಸರ್ಕಾರದಲ್ಲಿ ಯುವಜನ ಮತ್ತು ಕ್ರೀಡಾ ಮಂತ್ರಿಯೂ ಆಗಿದ್ದ ಗೌಡರು 1983ರಲ್ಲಿ ಬಿಜೆಪಿಯ ವಸಂತ ಬಂಗೇರ ಎದುರು ಸೋತರು. 1985ರಲ್ಲಿ ಮತ್ತೆ ಬಿಜೆಪಿಯಿಂದ ಆಖಾಡಕ್ಕಿಳಿದಿದ್ದ ವಸಂತ ಬಂಗೇರ ಕಾಂಗ್ರೆಸ್‌ನ ಲೋಕೇಶ್ವರಿ ವಿನಯಚಂದ್ರ ವಿರುದ್ಧ 6,330 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಸಂಘ ಪರಿವಾರದ ಅಸಮಾಧಾನದಿಂದಾಗಿ ವಸಂತ ಬಂಗೇರರಿಗೆ 1989ರಲ್ಲಿ ಬಿಜೆಪಿ ಟಿಕೆಟ್ ಸಿಗಲಿಲ್ಲ. ಬದಲಿಗೆ ಅವರ ಸೋದರ ಪ್ರಭಾಕರ ಬಂಗೇರರಿಗೆ ಟಿಕೆಟ್‌ನೀಡಿತ್ತು. ಆದರೆ ಅವರು ಅಂದು ಪಡೆದದ್ದು ಕೇವಲ 8,225 ಮತಗಳಷ್ಟೆ. ಪಕ್ಷೇತರನಾಗಿ ಹೋರಾಟಕ್ಕಿಳಿದಿದ್ದ ವಸಂತ ಬಂಗೇರ 39,754 ಮತಗಳನ್ನು ಪಡೆದಿದ್ದರು. ಸೋದರರ ಜಗಳದಲ್ಲಿ ಕಾಂಗ್ರೆಸ್‌ನ ಗಂಗಾಧರ ಗೌಡರು ತೀರಾ ಸಣ್ಣ ಅಂತರದ (1,210) ಗೆಲುವು ಕಂಡರು. 1994ರ ಚುನಾವಣೆಯಲ್ಲಿ ಅಣ್ಣ-ತಮ್ಮ ಮತ್ತೆ ಮುಖಾಮುಖಿಯಾಗಿದ್ದರು.

ಜೆಡಿಎಸ್ ಹುರಿಯಾಳಾಗಿದ್ದ ವಸಂತ ಬಂಗೇರ 39,871 ಮತಗಳನ್ನು ಪಡೆದು ನಿಕಟ ಸ್ಪರ್ಧಿ ಬಿಜೆಪಿಯ ಪ್ರಭಾಕರ ಬಂಗೇರರನ್ನು (32,433) ಸೋಲಿಸಿದರು. ದೇವೇಗೌಡರ ಆಪ್ತರಾಗಿದ್ದ ಬಂಗೇರರಿಗೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸ್ಥಾನವೂ ಒಲಿದಿತ್ತು. 1999 ಮತ್ತು 2004ರಲ್ಲಿ

ಬಿಜೆಪಿಯ ಪ್ರಭಾಕರ ಬಂಗೇರ ಗೆಲ್ಲುವ ಮೂಲಕ ಬಿಜೆಪಿ ಭದ್ರವಾಗಿ ನೆಲೆಯೂರಿತು. 2004ರಲ್ಲಿ ಕಾಂಗ್ರೆಸ್ ಬಿಲ್ಲವ ಸಮುದಾಯದ ಹರೀಶ್‌ಕುಮಾರ್‌ ಅವರನ್ನು ಕಣಕ್ಕಿಳಿಸಿತ್ತು.ಹರೀಶ್‌ಕುಮಾರ್‌ಗೂ ಗೆಲ್ಲಲಾಗಲಿಲ್ಲ. ಈ ನಡುವೆ ಜೆಡಿಎಸ್‌ನಲ್ಲಿದ್ದ ವಸಂತ ಬಂಗೇರ ಆಸ್ಕರ್ ಫರ್ನಾಂಡಿಸ್ ಹಾಗು ಜನಾರ್ದನ ಪೂಜಾರಿಯವರ ನೆರವಿನಿಂದ ಕಾಂಗ್ರೆಸ್ ಸೇರಿದ್ದರು. 2008ರಲ್ಲಿ ಕಾಂಗ್ರೆಸ್ ಹುರಿಯಾಳಾಗಿದ್ದ ವಸಂತ ಬಂಗೇರ ಬಿಜೆಪಿಯ ಪ್ರಭಾಕರ ಬಂಗೇರರನ್ನು 16,103 ಮತಗಳಿಂದ ಸೋಲಿಸಿದರು. 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದ ಗಂಗಾಧರ ಗೌಡ ಆ ಬಳಿಕ ತನ್ನ ಮಗ ರಂಜನ್ ಗೌಡರಿಗೆ 2013ರ ಚುನಾವಣೆಯಲ್ಲಿ ಟಿಕೆಟ್ ಕೊಡುವ ಷರತ್ತು ವಿಧಿಸಿ ಬಿಜೆಪಿ ಸೇರಿದ್ದರು.

ಅಂದು ಬಿಜೆಪಿಯನ್ನು ಸಂಘಟಿಸಿದ್ದ ರಂಜನ್ ಗೌಡರಿಗೆ ಬಿಜೆಪಿಯ ಟಿಕೆಟ್ ಏನೋ ಸಿಕ್ಕಿತು. ಆದರೆ ಕಾಂಗ್ರೆಸ್‌ನ ವಸಂತ ಬಂಗೇರ ಎದುರು ದೊಡ್ಡ ಅಂತರದಿಂದ (15,741) ಪರಾಭವಗೊಂಡರು. ಆದರೆ 2018ರ ಚುನಾವಣೆಯಲ್ಲಿ ಬಿಜೆಪಿಯ ಹಿಂದುತ್ವದ ಅಬ್ಬರದಲ್ಲಿ ಹರೀಶ್ ಪೂಂಜಾರ ಎದುರು 22,974 ಮತಗಳ ಅಂತರದಲ್ಲಿ ಹಾಲಿ ಶಾಸಕರಾಗಿದ್ದ ವಸಂತ ಬಂಗೇರ ಸೋಲಬೇಕಾಯಿತು.

ಹರೀಶ್ ಪೂಂಜಾ ಯುಗ :

2018ರ ಚುನಾವಣೆಯಲ್ಲಿ 22,974 ಮತಗಳ ಅಂತರದಲ್ಲಿ ವಸಂತ ಬಂಗೇರರನ್ನು ಸೋಲಿಸಿ, ಭರ್ಜರಿ ಜಯ ಭೇರಿ ಭಾರಿಸಿದ್ದ, ಪೂಂಜರು ನಂತರ 5 ವರ್ಷ ಮಾಡಿದ ಸಾಧನೆ ಅದು ಭಗೀರಥ ಪ್ರಯತ್ನ. ಬೆಳ್ತಂಗಡಿ ತಾಲೂಕಿನ ಮೂಲೆ ಮೂಲೆಗಳಲ್ಲಿ ಪಕ್ಷ ಸಂಘಟಿಸಿ, ಬಡವರ ಕಣ್ಣೀರು ಒರೆಸಿ, ರಾಜ್ಯದಲ್ಲೇ ಅತೀ ಹೆಚ್ಚು ಅನುದಾನವನ್ನು ಬೆಳ್ತಂಗಡಿ ತಂದು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಶಾಸಕ ಪೂಂಜ ಕಾರ್ಯವೈಖರಿ ಕಾರ್ಯಕರ್ತರ ಮನಮೆಚ್ಚಿದೆ.

ಇಂದು ಮತ್ತೆ ಎರಡನೇ ಭಾರಿಗೆ ಹರೀಶ್ ಪೂಂಜ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಬೆಳ್ತಂಗಡಿ ತುಂಬೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪೂಂಜ ಮತ್ತೊಮ್ಮೆ ಎಂಬ ಫೋಟೋಗಳು ಹರಿದಾಡುತ್ತಿವೆ. ಒಟ್ಟಿನಲ್ಲಿ ಹರೀಶ್ ಪೂಂಜ ಅಭಿವೃದ್ಧಿ ಮಂತ್ರ ಹಿಂದುತ್ವದ ಪರ ಗಟ್ಟಿ ನಿಲುವು, ಕಾರ್ಯಕರ್ತರ ಜೊತೆಗಿನ ಉತ್ತಮ ಸಂಬಂಧ, ಕ್ಷೇತ್ರದಲ್ಲಿ ಗಳಿಸಿದ ಅಪಾರ ಪ್ರೀತಿ ಹಾಗೂ ಜನಮನ್ನಣೆ ಕೈ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪರಿಣಾಮ ಅವರು ಕೈ ಕೈ ಹಿಚುಕುವಂತಾಗಿದೆ.

50 ರಿಂದ 60 ಸಾವಿರ ಮತಗಳ ಅಂತರದಲ್ಲಿ ಈ ಭಾರಿ ಪೂಂಜ ಗೆಲ್ಲುವ ಎಲ್ಲಾ ಸಾಧ್ಯತೆ ಕಂಡು ಬರುತ್ತಿದೆ.