Saturday, January 25, 2025
ಸುದ್ದಿ

ಪೆರ್ನೆ ಬಿಳಿಯೂರು ಗ್ರಾಮದ ಬಳಪ್ಪು ನಿವಾಸಿಗಳ ನೀರಿನ ಸಮಸ್ಯೆಗೆ ಮುಕ್ತಿ : ಮನೆ ಮನೆಗೆ ಗಂಗೆ ಯೋಜನೆಯ ಮೂಲಕ ಬೊರ್ ವೆಲ್ ಹಾಕಿಸಿದ ಪಂಚಾಯತ್ – ಕಹಳೆ ನ್ಯೂಸ್

ಹಲವು ತಿಂಗಳುಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ಪೆರ್ನೆ ಬಿಳಿಯೂರು ಗ್ರಾಮದ ನಿವಾಸಿಗಳಿಗೆ ಮನೆ ಮನೆಗೆ ಗಂಗೆ ಯೋಜನೆಯ ಮೂಲಕ ಬೋರ್ವೆಲ್ ಹಾಕಿಸಿ ನೀರಿನ ಸಮಸ್ಯೆಗೆ ಮುಕ್ತಿ ನೀಡಲಾಗಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ಚಾಳ ತಾಲೂಕಿನ ಪೆರ್ನೆ ಬಿಳಿಯೂರು ಗ್ರಾಮದ ಬಲಪ್ಪು, ನೀರೊಳ್ಬೆ, ನಿವಾಸಿಗಳಿಗೆ ಕಳೆದ ಕೆಲ ತಿಂಗಳುಗಳಿಂದ ನೀರಿನ ಸಮಸ್ಯೆ ಅತಿಯಾಗಿ ಕಾಡಿತ್ತು. ಈ ಹಿಂದೆ ನೀರಿನ ವ್ಯವಸ್ಧೆಗಾಗಿ ಪಂಚಾಯತ್ ನಿಂದ ಹಾಕಲಾಗಿದ್ದ ಬೋರ್ ವೆಲ್ ನಲ್ಲಿ ನೀರು ಬಾರದ ಹಿನ್ನಲೆಯಲ್ಲಿ ಇಲ್ಲಿನ ನಿವಾಸಿಗಳು ಒಂದಾಗಿ ವಾಡ್೯ ಮೆಂಬರ್ ನವೀನ್ ಕುಮಾರ್‌ ಪದಬರಿ ಇವರಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು‌.

ಊರಿನ ಜನರ ಮನವಿಗೆ ಸಕಾಲದಲ್ಲಿ ಸ್ಪಂದಿಸಿದ ಪೆರ್ನೆ ಗ್ರಾಮ ಪಂಚಾಯತ್ ಪಿಡಿಓ, ಕಾರ್ಯದರ್ಶಿ ಹಾಗೂ ವಾಡ್೯ ಮೆಂಬರ್ ನವೀನ್ ಕುಮಾರ್ ಪದಬರಿಯವರು ಮನೆಮನೆಗೆ ಗಂಗೆ ಯೋಜನೆಯ ಮೂಲಕ ಇದೀಗ ಹೊಸ ಬೋರ್ವೆಲ್ ಹಾಕಿಸಿ,ಇಲ್ಲಿನ ನಿವಾಸಿಗಳು ನೀರಿಗಾಗಿ ಎದುರಿಸುತ್ತಿದ್ದ ಸಮಸ್ಯೆಯನ್ನು ದೂರಮಾಡಿದ್ದಾರೆ.