Saturday, January 25, 2025
ಸುದ್ದಿ

ವಿವಿಧ ಸಮಾಜ ಘಾತಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಬೈಂದೂರಿನ ರವಿಚಂದ್ರ ಹಾಗೂ ಆತ್ರಾಡಿಯ ಸೈಫುದ್ದೀನ್‌ ಬಂಧನ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಮಾಜ ಘಾತಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಬೈಂದೂರಿನ ರವಿಚಂದ್ರ ಹಾಗೂ ಆತ್ರಾಡಿಯ ಸೈಫುದ್ದೀನ್‌ನನ್ನು ಬಂಧಿಸಲಾಗಿದೆ. ಇಬ್ಬರನ್ನೂ ಕ್ರಮವಾಗಿ ಕಲಬುರಗಿ, ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ರವಿಚಂದ್ರ ಬೈಂದೂರು ಠಾಣೆ ಹಾಗೂ ಹಿರಿಯಡ್ಕ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ. ಈತ 1996ರಿಂದ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದು, ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಹಿರಿಯಡ್ಕ ಠಾಣೆಗಳಲ್ಲಿ ಅಪರಾಧ ಕೃತ್ಯ ಎಸಗಿದ್ದಲ್ಲದೆ ದ.ಕ., ಕಾರವಾರ ಹಾಗೂ ಶಿವಮೊಗ್ಗ ಜಿಲ್ಲೆಯ ಠಾಣೆಗಳಲ್ಲಿಯೂ ಸಹ ಆತನ ವಿರುದ್ಧ ಹಲ್ಲೆ, ದೊಂಬಿ, ಸುಲಿಗೆ, ಕೊಲೆಗೆ ಪ್ರಯತ್ನ, ಅಪಹರಣ, ಕೋಮು ಗಲಭೆ ಸಹಿತ 21ಪ್ರಕರಣಗಳು ದಾಖಲಾಗಿವೆ. ಆತ 65 ಮಂದಿ ಸಹಚರರ ಬಣವನ್ನೂ ಹೊಂದಿದ್ದಾನೆ.
ಆತ್ರಾಡಿಯ ಸೈಫುದ್ದೀನ್ ಹಿರಿಯಡ್ಕ ಹಾಗೂ ಉಡುಪಿ ನಗರ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ. 1995ರಿಂದ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದು, ಉಡುಪಿ ನಗರ, ಹಿರಿಯಡ್ಕ, ಮಣಿಪಾಲ ಮತ್ತು ಕುಂದಾಪುರ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ದೊಂಬಿ, ಹಲ್ಲೆ, ವಂಚನೆ ಸಹಿತ 19ಪ್ರಕರಣಗಳು ದಾಖಲಾಗಿವೆ. ಈತ ಕೂಡ 34ಸಹಚರರ ಬಣವನ್ನು ಹೊಂದಿದ್ದಾನೆ.
ಜಿಲ್ಲಾಧಿಕಾರಿ ವರದಿ ಮೇರೆಗೆ ಕ್ರಮ ಇವರಿಬ್ಬರೂ ತಮ್ಮ ಕೃತ್ಯಗಳಿಂದ ಸಮಾಜದ ಸ್ವಾಸ್ಥ್ಯ ಕದಡುವ ವ್ಯಕ್ತಿಗಳಾಗಿದ್ದು, ವಿಧಾನಸಭಾ ಚುನಾವಣೆ ಸಂದರ್ಭ ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಗೂಂಡಾ ಕಾಯ್ದೆಯಡಿ ಕ್ರಮ ಜರಗಿಸುವ ಜಿಲ್ಲಾಧಿಕಾರಿ ಮತ್ತು ಜಿಲ್ಲೆ ದಂಡಾಧಿಕಾರಿಯವರಿಗೆ ಸಲ್ಲಿಸಿದ ವರದಿಯ ಮೇರೆಗೆ ಕ್ರಮ ಜರಗಿಸಿ ಬಂಧಿಸಲಾಗಿದೆ.