Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಬೆಳ್ಳಾರೆಯ ಉದ್ಯಮಿ ನವೀನ್ ಗೌಡನ ಕಳ್ಳಾಟ ಬಯಲು : ಕಳವಾದ ಪತ್ನಿಯ ಚಿನ್ನದ ಸರ ಇನ್ನೋರ್ವ ವಿವಾಹಿತ ಮಹಿಳೆಯ ಕುತ್ತಿಗೆಯಲ್ಲಿ ಪತ್ತೆ..!!! ಪತ್ನಿಗೆ ಕೈಕೊಟ್ಟು ಜಾಲಿ ಮೂಡಿನಲ್ಲಿ ಮಹಿಳೆಯೊಂದಿಗೆ ನವೀನ್ ಚೆಲ್ಲಾಟ – ಕಹಳೆ ನ್ಯೂಸ್

ಪುತ್ತೂರು: ಚಿಲ್ತಡ್ಕ ಅವರ ಪುತ್ರಿ ಸ್ಪಂದನಾ ಕಾಮಧೇನು ಅವರ ಕಳ್ಳತನವಾಗಿದ್ದ ಚಿನ್ನದ ಸರ ಸುಳ್ಯ ಸಮೀಪದ ಅಡ್ಕಾರ್‌ನ ಮಹಿಳೆಯೋರ್ವರ ಕುತ್ತಿಗೆಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ಹಿಂದೆ ಉದ್ಯಮಿ‌ ನವೀನ್ ರವರ ಕಳ್ಳಾಟ ಬಯಲಾಗಿದೆ ಎನ್ನಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಪಂದನಾ ಅವರಿಂದ ಕಳುವಾಗಿದ್ದ ಚಿನ್ನಕ್ಕೆ ಸಂಬಂಧಪಟ್ಟ ಫೋಟೋ ಇದೀಗ ಪೊಲೀಸರಿಗೆ ಲಭಿಸಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಳೆದ ಹಲವು ತಿಂಗಳ ಹಿಂದೆ ಚಿನ್ನ ಕಳ್ಳತನದ ಬಗ್ಗೆ ಪ್ರಕರಣ ದಾಖಲಾಗಿತ್ತು. ಕಳವಾದ ಆ ಚಿನ್ನ ಅಡ್ಕಾರ್‌ನ ಮಹಿಳೆಗೆ ನವೀನ್ ಗೌಡ ರವರೇ ಉಡುಗೊರೆಯಾಗಿ ನೀಡಿದ್ದಾರೆಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಅಡ್ಕಾರಿನ ಮಹಿಳೆ ಕೂಡಾ ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

ನವೀನ್ ಗೌಡನ ಜೊತೆಗೆ ಕಳ್ಳತನ ಆಗಿದ್ದ ಚಿನ್ನವನ್ನು ಹಾಕಿಕೊಂಡು ಸಿಕ್ಕಿ ಬಿದ್ದ ಮಹಿಳೆ ಬಹಳ ಕಾಲದಿಂದ ಒಟ್ಟಾಗಿ ಸುತ್ತಾಟ ನಡೆಸುತ್ತಿದ್ದು, ಕಳೆದ ಮಾ.8 ರಂದು ಇವರಿಬ್ಬರು ಕೇರಳದ ಬೇಕಲ್‌ನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಒಟ್ಟಾಗಿ ಇದ್ದರು. ಇದಕ್ಕಿಂತ ಮುಂಚೆ ಅವರಿಬ್ಬರು ಕದ್ದುಮುಚ್ಚಿ ದಿನಾ ಭೇಟಿಯಾಗುತ್ತಿದ್ದರು ಎನ್ನಲಾಗುತ್ತಿದೆ.

ಮಹಿಳೆ ಸುಳ್ಯದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ. ಇವರಿಬ್ಬರು ಕಳೆದ ಕೆಲ ಸಮಯದ ಹಿಂದೆ ಬೇಕಲ್‌ನ ಖಾಸಗಿ ರೆಸಾರ್ಟ್‌ನಲ್ಲಿರುವ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಅಲ್ಲಿ ವಿಚಾರಣೆ ನಡೆಸಿದಾಗ, ಇವರಿಬ್ಬರು ಜೊತೆಗಿದ್ದ ಕುರಿತು ಸಿಸಿ ಟಿವಿ ಫೂಟೇಜ್ ಕೂಡಾ ಲಭ್ಯವಾಗಿದೆ. ಈ ರೆಸ್ಟೋರೆಂಟ್‌ನಲ್ಲಿ ಮಹಿಳೆ ತನ್ನ ಗಂಡನ ಆಧಾರ್ ಕಾರ್ಡ್, ರೂಮ್ ಬುಕ್ ಮಾಡಲು ದಾಖಲೆ ನೀಡಿದ್ದರು ಎನ್ನಲಾಗಿದೆ.

ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ನೆಕ್ಲೆಸ್‌ನ ಫೋಟೋ, ಪೊಲೀಸರಿಗೆ ಸಿಕ್ಕಿದ್ದು, ಈ ಬಗ್ಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಉದ್ಯಮಿ ನವೀನ್ ಗೌಡ ಹಲವಾರು ಮಹಿಳೆಯರ ಜೊತೆಗೆ ತಿರುಗಾಟ ನಡೆಸುತ್ತಿರುವುದು ಮಾತ್ರವಲ್ಲದೇ ಆತನ ಜೊತೆಗಿರುವ ಅನೇಕ ಪೋಟೋಗಳು ಕೂಡ ಇದೀಗ ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ‌ ಎನ್ನಲಾಗಿದೆ. ಮಹಿಳೆಯರ ಜೊತೆಗೆ ಅಶ್ಲೀಲವಾಗಿ ಮೆಸೇಜ್ ಮಾಡಿರುವುದು ಕೂಡ ಪತ್ತೆಯಾಗಿದೆ ಎಂಬ ಮಾಹಿತಿ ಇದ್ದು, ಪೊಲೀಸರು ನವೀನ್ ಗೌಡ ಹಾಗೂ ಮಹಿಳೆಗಾಗಿ ಶೋಧ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ..