Recent Posts

Sunday, January 19, 2025
ಸುದ್ದಿ

ಮಹತೋಭಾರ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ : 3ನೇ ದಿನದಂದು ಮೇಳೈಸಿದ ಸಾಂಸ್ಕೃತಿಕ ಕಾರ್ಯಕ್ರಮ ಶಿವಾರ್ಪಣಂ-ಕಹಳೆ ನ್ಯೂಸ್

ಪುತ್ತೂರು : ಮಹತೋಭಾರ ಮಹಾಲಿಂಗೇಶ್ವರ ಜಾತ್ರೋತ್ಸವದ ಕಾರ್ಯಕ್ರಮ 3ನೇ ದಿನ ದಿನಾಂಕ 12-4-2023 ಓಂ ಕಾರ ಶಂಖನಾದ ದೊಂದಿಗೆ ಪ್ರಾರಂಭವಾಯಿತು ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ವೀಣಾ ಆಚಾರ್ಯ ಬಿಕೆ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಶಂಖನಾದಗೈದವರು

ಶ್ರೀಮತಿಯರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ಲಕ್ಷ್ಮಿ ವಿ ಜಿ ಭಟ್, ಮಾಲಾ ಕೇಶವ ಭಟ್ ನಂತರ ಡಾಕ್ಟರ್ ಶ್ರುತಿ ಕಾಂತಾಜೆ ಪುಟಾಣಿ ಸಿಯಾ ಇವರ ಸುಮಧುರ ಕಂಠದಲ್ಲಿ ಭಕ್ತಿ ಗಾನಸುಧೆ ಬಹಳ ಸುಂದರವಾಗಿ ಮೂಡಿಬಂದಿತು. ಎರಡನೇ ಕಾರ್ಯಕ್ರಮ ಶಿವಗಾಮಿ ನಾಟ್ಯಾಲಯ ಬನ್ನೂರು ಇಲ್ಲಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು. ನಂತರ ಉಕ್ಷಿಪ್ತ ನೃತ್ಯಕಲಾ ಶಾಲೆ
ಮಂಗಳೂರು ಇಲ್ಲಿನ ವಿದ್ಯಾರ್ಥಿಗಳಿಂದ ಭಕ್ತಿ ಪ್ರಧಾನ ನೃತ್ಯ ಪ್ರದರ್ಶಿಸಲ್ಪಟ್ಟಿತು. ನಾಲ್ಕನೇ ಕಾರ್ಯಕ್ರಮ ಗಾನ ನೃತ್ಯ ಅಕಾಡೆಮಿ ಮಂಗಳೂರು ಇದರ ಸದಸ್ಯರಿಂದ ಸಮಗಾನಲೋಲ ಶಿವನ ಕುರಿತಾದ ನೃತ್ಯ ಹೀಗೆ ಪ್ರತಿಯೊಂದು ನೃತ್ಯಕ್ಕೂ ಅತ್ಯಂತ ಸುಂದರವಾದ ವಿವರಣೆಯೊಂದಿಗೆ ಶುದ್ಧ ಭರತನಾಟ್ಯ ಶೈಲಿಯ ನೃತ್ಯ ನೋಡುಗರನ್ನು ಮುದಗೊಳಿಸಿತು ಕೊನೆಯದಾಗಿ ಮಹಿಳಾ ಯಕ್ಷಗಾನ ತಂಡ ಬಾಲವನ ಪುತ್ತೂರು ಇದರ ಸದಸ್ಯರಿಂದ ಕದಂಬ ಕೌಶಿಕೆ ಎನ್ನುವ ಯಕ್ಷಗಾನ ಬಯಲಾಟ ಅತ್ಯಂತ ಸೊಗಸಾಗಿ ಮೂಡಿಬಂದು ಪ್ರೇಕ್ಷಕರನ್ನು ರಂಜಿಸಿತು ಇಂದಿನ ಈ ಎಲ್ಲಾ ಕಾರ್ಯಕ್ರಮಗಳ ನಿರ್ವಾಹಕರು ವಿದ್ವಾನ್ ದೀಪಕ್ ಕುಮಾರ್, ಗೋಪಾಲಕೃಷ್ಣ ಎಂ (ಈಶ