Recent Posts

Monday, January 20, 2025
ರಾಜಕೀಯರಾಜ್ಯಸುದ್ದಿ

ಸಾಗರ ಬಿಜೆಪಿಯಲ್ಲಿ ಬಂಢಾಯದ ಬಿಸಿ..!! ಹಾಲಿ ಶಾಸಕ ಹಾಲಪ್ಪ ಕರ್ಮಕಾಂಡಕ್ಕೆ ಕಾರ್ಯಕರ್ತರು ಸುಸ್ತು..! ಪಕ್ಷೇತರ ಸ್ಪರ್ಧೆಗಿಳಿತಾರಾ ಪ್ರಸನ್ನ ಕೆರೆಕೈ..?? – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಗರ ಬಿಜೆಪಿಯಲ್ಲಿ ಕಾರ್ಯಕರ್ತರ ವಿರೋಧದ ನಡುವೆಯೂ ಹಾಲಿ ಶಾಸಕ ಹಾಲಪ್ಪಗೆ ಟಿಕೆಟ್ ದಕ್ಕಿದೆ‌.
ಈ ಮಧ್ಯೆ ಬಲವಾಗಿ ಕೇಳಿ ಬಂದಿದ್ದ ಹೆಸರು ಪ್ರಸನ್ನ ಕೆರೆಕೈ. ಕೊನೆ ಘಳಿಗೆಯಲ್ಲಿ ಪ್ರಸನ್ನರಿಗೆ ಟಿಕೆಟ್ ತಪ್ಪಿ ತಮಗೆ ಟಿಕೆಟ್ ಸಿಗುವಲ್ಲಿ ಹಾಲಪ್ಪ ಯಶಸ್ಸಾಗಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ ಪಕ್ಷದ ಹಲವಾರು ಜನ ಮೂಲ ಕಾರ್ಯಕರ್ತರು ಪ್ರಸನ್ನ ಅವರನ್ನು ಸಂಪರ್ಕಿಸಿ ಪಕ್ಷೇತರ ಸ್ಪರ್ಧೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಧಿಕಾರವಿದ್ದಾಗ ಮೂಲ ಕಾರ್ಯಕರ್ತರನ್ನು ಹಾಲಪ್ಪ ಕಡೆಗಣಿಸಿದ್ದು, ಬೆಂಬಲಿಗರ ಹಲ್ಲೆ ದೌರ್ಜನ್ಯ ಇವೇ ಮುಂತಾದ ಕಾರಣಗಳಿಂದ ಬೇಸತ್ತು ಕಾರ್ಯಕರ್ತರು ಹಾಲಪ್ಪ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಬೇಕೆಂದು ಬಹಿರಂಗವಾಗೇ ಆಗ್ರಹಿಸಿದ್ದರು.
ಸಾಗರದಂತಹ ಕ್ಷೇತ್ರದಲ್ಲಿ ನಿಶ್ಚಿತವಾಗಿ ಅಭ್ಯರ್ಥಿ ಬದಲಾವಣೆಯಾಗುತ್ತದೆ ಎಂದು ಪಕ್ಷದ ಕಾರ್ಯಕರ್ತರು ಕುತೂಹಲದಿಂದ ಕಾದಿದ್ದರು. ಆದರೇ ಪಕ್ಷ ಅದೇ ಹಳೇ ಮುಖಕ್ಕೇ ಮಣೆ ಹಾಕಿದ ಪರಿಣಾಮ ಕಾರ್ಯಕರ್ತರು ಬೇಸರಿಸಿಕೊಂಡಿದ್ದು, ಪ್ರಸ್ತುತ ಬಿಜೆಪಿ ರೈತಮೋರ್ಚಾದ ರಾಜ್ಯಕಾರ್ಯದರ್ಶಿಯಾಗಿರುವ ಪ್ರಸನ್ನ ಕೆರೆಕೈ ರವರಿಗೆ ಹಿತೈಶಿಗಳು ಸಾಕಷ್ಟು ಜನ ಮತದಾರರು ಪಕ್ಷದ ಕಾರ್ಯಕರ್ತರು ಪಕ್ಷೇತರ ಕಣಕ್ಕಿಳಿಯುವಂತೆ ಒತ್ತಡ ಹಾಕುತ್ತಿದ್ದಾರೆ.
ಬಂಡಾಯ ಅಥವಾ ಪಕ್ಷೇತರರಾಗಿ ಪ್ರಸನ್ನ ಚುನಾವಣಾ ಕಣಕ್ಕಿಳಿಯುತ್ತಾರಾ ಕಾದು ನೋಡಬೇಕಿದೆ. ಒಟ್ಟಿನ್ನಲ್ಲಿ ಸಾಗರ ಬಿಜೆಪಿ ಒಡೆದ ಮನೆಯಾಗಿದ್ದು, ಕಾಂಗ್ರೇಸ್‌ಗೆ ಅನುಕೂಲಕರ ವಾತಾವರಣ ಗೋಚರವಾಗುತ್ತಿದೆ