ಯಶಪಾಲ್ ಜೊತೆಯಲ್ಲಿ ಚುನಾವಣೆಯ ದಿನದವರೆಗೂ ಪ್ರಚಾರ ಕಾರ್ಯ ನಡೆಸುತ್ತೇನೆ ; ಯಶುಪಾಲ್ ಜೊತೆ ರಘುಪತಿ ಭಟ್ ವಿಕ್ಟರಿ ಫೋಟೋ ಸಕತ್ತ್ ವೈರಲ್ – ಕಹಳೆ ನ್ಯೂಸ್
ಉಡುಪಿ, ಏ 14 : ಯಶಪಾಲ್ ಸುವರ್ಣ ಅವರ ಜೊತೆಯಲ್ಲಿ ನಾನು ಚುನಾವಣೆಯ ದಿನದವರೆಗೂ ನನ್ನದೇ ಚುನಾವಣೆ ಎಂಬ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ.
ಇಂದು ಯಶಪಾಲ್ ಸುವರ್ಣ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 60,000 ಮತಗಳ ಅಂತರದಲ್ಲಿ ಯಶಪಾಲ ಸುವರ್ಣ ಗೆಲ್ಲುತ್ತಾರೆ. ಇವತ್ತಿನಿಂದ ಸಂಘಟನಾತ್ಮಕ ಕಾರ್ಯ ಚಟುವಟಿಕೆ ಪ್ರಾರಂಭ. ಪ್ರತಿ ಮಟ್ಟದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುತ್ತೇನೆ. ಎಲ್ಲರೂ ಕೂಡ ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತೇವೆ. ಎಲ್ಲಾ ಗೊಂದಲಗಳನ್ನು ಮರೆತು ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ ಎಂದರು.ಇನ್ನು ನಿನ್ನೆ ನಾನು ಭಾವನಾತ್ಮಕವಾಗಿ ಬೇಸರದಿಂದ ಮಾತನಾಡಿದ್ದೆ. ಅಪ್ಪ ಅಮ್ಮ ಬೈದಾಗ ಬೇಸರ ಆಗುತ್ತೆ, ಅಮ್ಮನಿಗೆ ವಾಪಸ್ ಬೈತೇವೆ. ಬಳಿಕ ಅವರ ಜೊತೆಯಾಗಿ ಮಲಗುತ್ತೇನೆ. ನನ್ನ ಅಭಿಮಾನಿಗಳು ಬಿಜೆಪಿ ಅಭಿಮಾನಿಗಳಲ್ಲಿ ವಿನಂತಿ ಏನೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಬೇಡ ನಿಲ್ಲಿಸೋಣ. ಇನ್ನು ಮುಂದೆ ಸುವರ್ಣರನ್ನು ಗೆಲ್ಲಿಸುವ ವಾಟ್ಸಪ್ ಮೆಸೇಜ್ ಮಾಡೋಣ.ನೂರಕ್ಕೆ ನೂರು ಉಡುಪಿ ವಿಧಾನಸಭಾ ಕ್ಷೇತ್ರ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.ಮಾಜಿ ಸಿಎಂ ಯಡಿಯೂರಪ್ಪ ನನಗೆ ಕರೆ ಮಾಡಿದ್ದರು. ಸಿಎಂ ಮಾತನಾಡಿ ಸರಿಪಡಿಸುವ ವಿಷಯ ಏನು ಇಲ್ಲ. ಯಾವುದೇ ಟ್ರಬಲ್ ಇಲ್ಲ ಟ್ರಬಲ್ ಶೂಟರ್ ಕೂಡ ಇಲ್ಲ. ಪಕ್ಷ ಕೊಟ್ಟ ಅಭ್ಯರ್ಥಿಯ ಜೊತೆ ಕೆಲಸ ಮಾಡುವ ಎರಡನೇ ಅವಕಾಶ ಸಿಕ್ಕಿದೆ. ನಾನು ಅಭ್ಯರ್ಥಿಯಾದರೆ ಎಷ್ಟು ಸ್ಪೀಡ್ ನಲ್ಲಿ ಕೆಲಸ ಮಾಡುತ್ತೇನೋ ಅದೇ ರೀತಿ ಕೆಲಸ ಮಾಡುತ್ತೇನೆ. ಪಕ್ಷ ನಮಗೆ ಒಳ್ಳೆಯ ಅಭ್ಯರ್ಥಿ ಕೊಟ್ಟಿದ್ದಾರೆ. ಪಕ್ಷ ನನಗೆ ಮೂರು ಬಾರಿ ಶಾಸಕನಾಗುವ ಅವಕಾಶ ಕೊಟ್ಟಿದೆ. ಸಾಮಾನ್ಯ ಕುಟುಂಬದಿಂದ ಬಂದವ ಮೂರು ಬಾರಿ ಶಾಸಕನಾಗಿದ್ದು ದೊಡ್ಡ ವಿಷಯ. ಇನ್ನು ಮುಂದೆ ನಾನು ಅಸಮಾಧಾನದ ಮಾತನಾಡುವುದು ಸರಿಯಲ್ಲ ಎಂದರು.ಯಡಿಯೂರಪ್ಪ ಅವರು ಕರೆಮಾಡುವ ಮುಂಚೆ ನಾನು ಕೆಲಸ ಆರಂಭಿಸಿದ್ದೆ. ನೀನು ಒಳ್ಳೆ ಕಾರ್ಯಕರ್ತ, ನಿನಗೆ ಒಳ್ಳೆ ಭವಿಷ್ಯ ಇದೆ ಎಂದು ಭರವಸೆ ನೀಡಿದ್ದಾರೆ. ಬಿ ಎಲ್ ಸಂತೋಷ್ ಟ್ವೀಟ್ ಮೂಲಕ ನನ್ನ ನಡೆಯನ್ನು ಪ್ರಶಂಶಿಸಿದ್ದಾರೆ. ಇದು ನನಗೆ ತುಂಬಾ ಹೆಮ್ಮೆಯ ವಿಷಯ ಎಂದರು.ಯಶಪಾಲ ಸುವರ್ಣ ಮಾತನಾಡಿ, ನಮ್ಮ ಒಗ್ಗಟ್ಟನ್ನು ಜನರ ಮುಂದೆ ಪ್ರದರ್ಶಿಸಿದ್ದೇನೆ. ರಘುಪತಿ ಭಟ್ ಸಂಘದ ಶಿಕ್ಷಣ ಪಡೆದವರು. ಅವರ ಅಭಿವೃದ್ಧಿ ಕಾರ್ಯ ಜನರ ಮುಂದೆ ತೋರಿಸಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.