ಪುತ್ತೂರು : ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಸಂಪ್ಯ ಇಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಆಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿಜಯ ಬ್ಯಾಂಕ್‍ನ ನಿವೃತ್ತ ಮ್ಯಾನೇಜರ್ ಶ್ರೀ ಜಯರಾಮ್ ರೈ ನುಳಿಯಾಲ್ ಇವರು ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸಕ್ಕೆ ಸಂಬಂಧಪಟ್ಟ ಸಾಲಸೌಲಭ್ಯದ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಕೆರಿಯರ್ ಕೌನ್ಸಿಲರ್ ಆಗಿ ಆಗಮಿಸಿದ ಶ್ರೀ ಮಹಮ್ಮದ್ ರಫೀಕ್ ಮಾತನಾಡಿ, ವಿದ್ಯಾರ್ಥಿಗಳು ಕೋರ್ಸ್ ಆಯ್ಕೆ ಮಾಡುವಾಗ ಇನ್ನೊಬ್ಬರಿಂದ ಪ್ರೇರಿತಗೊಳ್ಳಬಾರದು, ವಿದ್ಯಾರ್ಥಿ ತನ್ನ ಸಾಮಥ್ರ್ಯವನ್ನು ಅರಿತುಕೊಂಡು ಕೋರ್ಸ್ ಆಯ್ಕೆ ಮಾಡಿಕೊಂಡರೆ ಮಾತ್ರ ನಿಮ್ಮ ಇಚ್ಛೆಯ ಕ್ಷೇತ್ರಕ್ಕೆ ಕಾಲಿಡಬಹುದು ಮತ್ತು ಸಾಧನೆ ಮಾಡಬಹುದು. ಸಾಮಾನ್ಯ ಕೋರ್ಸ್‍ಗಿಂತ ವೃತ್ತಿಯಾಧಾರಿತ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಂಡರೆ ವೃತ್ತಿ ಕ್ಷೇತ್ರದಲ್ಲಿ ವಿವಿಧ ಅವಕಾಶಗಳನ್ನು ಗಳಿಸಬಹುದು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಡಾಟಾ ಎಂಟ್ರಿ ವಿಭಾಗದ ಅವರು ವಿದ್ಯಾರ್ಥಿವೇತನಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಸ್ವಾಗತಿಸಿ, ಉಪನ್ಯಾಸಕಿ ಆಶಿಕಾ ಫರ್ಝಾನಾ ವಂದಿಸಿದರು.
ವಾಣಿಜ್ಯ ಉಪನ್ಯಾಸಕಿ ಭವ್ಯಶ್ರೀ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಎಂ.ಡಿ ಶ್ರೀಮತಿ ಕಲಾವತಿ ನಡುಬೈಲು, ಗವರ್ನಿಂಗ್ ಕೌನ್ಸಿಂಗ್ ಸದಸ್ಯರು, ಬೋಧಕ-ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.