Monday, January 20, 2025
ಸುದ್ದಿ

ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತ ನಟರಾಜ್ ಮಲ್ಪೆ : ಕಹಳೆ ನ್ಯೂಸ್

ಉಡುಪಿ : ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೀನುಗಾರಿಕಾ ವಿಭಾಗದಲ್ಲಿ ನೀಡಲಾಗುವ ದೈವ ನರ್ತಕ ಕೀರ್ತಿಶೇಷ ಶ್ರೀದೇವಯ್ಯ ಖಾರ್ವಿ ಗಂಗೊಳ್ಳಿ ದತ್ತಿನಿಧಿ ಪ್ರಶಸ್ತಿಗೆ ಉದಯವಾಣಿ ಪತ್ರಿಕೆಯ ಮಲ್ಪೆ ವರದಿಗಾರ ನಟರಾಜ ಮಲ್ಪೆ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಶಸ್ತಿಯನ್ನು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಘ ಕೊಚ್ಚಿನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವುಗಳ ಸಹಯೋಗದಲ್ಲಿ ಎ.೩೦ರಂದು ಎರ್ನಾಕುಲಂ ಟೌನ್‌ಹಾಲ್‌ನಲ್ಲಿ ನಡೆಯಲಿರುವ ಕೊಚ್ಚಿನ್ ಕನ್ನಡ ಸಂಸ್ಕೃತಿ ಉತ್ಸವದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಸಂಘದ ಸದಸ್ಯರೂ ಆಗಿರುವ ನಟರಾಜ ಮಲ್ಪೆ ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಅಭಿನಂದನೆ ಸಲ್ಲಿಸಿದೆ.