Monday, January 20, 2025
ಸುದ್ದಿ

ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ 132ನೇ ಜಯಂತಿ ಆಚರಣೆ : ಕಹಳೆ ನ್ಯೂಸ್

ಲಿಟ್ಲ್ ಫ್ಲವರ್ ಶಾಲೆ ದರ್ಬೆ, ಪುತ್ತೂರು.ಇಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ರವರ 132 ನೇ ಜಯಂತಿ ಆಚರಣೆಯನ್ನು ಶಾಲಾ ಹಿರಿಯ ಶಿಕ್ಷಕಿ ಭಗಿನಿ. ವಿನೀತಾ ಪಿರೇರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಡಾ ಬಿ ಆರ್ ಅಂಬೇಡ್ಕರ್ರವರ ಜೀವನ, ಶಿಕ್ಷಣ, ಸಾಧನೆ ಹಾಗೂ ಈ ದೇಶಕ್ಕೆ ಅವರ ಕೊಡುಗೆಯ ಬಗ್ಗೆ ಶಾಲಾ ಶಿಕ್ಷಕರಾದ ಬಾಲಕೃಷ್ಣ ಪೊರ್ದಾಲ್ ಮಾಹಿತಿ ನೀಡಿದರು. ವೇದಿಕೆಯಲ್ಲಿ ಶಾಲಾ ಹಿರಿಯ ಶಿಕ್ಷಕಿಯರಾದ ಶ್ರೀಮತಿ ವಿಲ್ಮಾ ಫೆರ್ನಾಂಡೀಸ್ ಹಾಗೂ ಎಲಿಜ್ ಅಂದ್ರಾದೆ ಉಪಸ್ಥಿತರಿದ್ದರು .ಶಿಕ್ಷಕಿ ಶ್ರೀಮತಿ ಭವ್ಯ ಸ್ವಾಗತಿಸಿ.ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಂದಿಸಿ. ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು