ಇಂದು ಮಧ್ಯಾಹ್ನ ಅರುಣ್ ಕುಮಾರ್ ಪುತ್ತಿಲ ಮಹತ್ವದ ಸುದ್ದಿಗೋಷ್ಠಿ ; ಪಕ್ಷೇತರ ಸ್ಫರ್ಧೆಯೇ !?? ಪಕ್ಷಕ್ಕೆ ಬೆಂಬಲವೇ..!?? – ಕಹಳೆ ನ್ಯೂಸ್
ಪುತ್ತೂರು : ಇಂದು ಮಧ್ಯಾಹ್ನ ಅರುಣ್ ಕುಮಾರ್ ಪುತ್ತಿಲ ಮಹತ್ವದ ಸುದ್ದಿಗೋಷ್ಠಿನಡೆಸುವುದಾಗಿ ತಿಳಿಸಿದ್ದಾರೆ. ಪಕ್ಷೇತರ ಸ್ವರ್ಧೆಯೇ !?? ಪಕ್ಷಕ್ಕೆ ಬೆಂಬಲವೇ..!?? ಎಂಬ ಕುತೂಹಲ ಮೂಡಿದೆ.
Facebook ಫೋಸ್ಟ್ ನಲ್ಲಿ ಏನಿದೆ..!?
ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನೆಂದು ಚಿರರುಣಿ. ಕೇವಲ ಒಂದು ವಾಟ್ಸಾಪ್ ಸಂದೇಶಕ್ಕೆ ಇಷ್ಟು ಸಂಖ್ಯೆಯಲ್ಲಿ ಬಂದು ಸೇರಿ ನಿಮ್ಮ ಮನೆಯ ಮಗನಂತೆ ನನ್ನ ಹರಸಿ, ನಿಮ್ಮ ಅಭಿಪ್ರಾಯ ಮಂಡಿಸಿದ ನನ್ನ ಸಹೋದರ ಸಹೋದರಿಯರಿಗೆ ನನ್ನ ಸಾಷ್ಟಂಗ ಪ್ರಣಾಮಗಳು . ನೀವು ಇಟ್ಟಿರುವ ನಂಬಿಕೆಗೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ. ನಿಮ್ಮೆಲ್ಲರ ಅಭಿಪ್ರಾಯದಂತೆ ನನ್ನ ತೀರ್ಮಾನವನ್ನು ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತೇನೆ