ಮಂಗಳೂರು : ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದ ಚಾರಿಯೊಬ್ಬರಿಗೆ ಕಾರು ಢಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ರಾತ್ರಿ ಮುಕ್ಕ ಬಳಿ ನಡೆದಿದೆ.
ಬೆಳಾಲು ನಿವಾಸಿ ರಾಘವ ಯಾನೆ ಜೀವನ್(35)ಮೃತರು. ಢಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಹಳೆಯಂಗಡಿ ಬಳಿ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಜೀವನ್ ಧರ್ಮಸ್ಥಳ ಮೇಳದಲ್ಲಿ ಟೆಂಟ್ ಮತ್ತಿತರ ಕೆಲಸಗಳನ್ನು ನಿರ್ವಹಿಸುವ ವೃತ್ತಿಯಲ್ಲಿದ್ದು, ಯಕ್ಷಗಾನದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಮೃತ ಜೀವನ್ ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ