ಬರಿಮಾರು ಶ್ರೀಕಾನಲ್ತಾಯ ಮಹಾಕಾಳಿ ದೈವಸ್ಥಾನ ಶ್ರೀ ಮಹಾಗುರು ಸಿದ್ಧಮರದ ಬೈದ್ಯರ ಸಾನಿಧ್ಯ ಕಲ್ಲೆಟ್ಟಿಯಲ್ಲಿ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್
ಬಂಟ್ವಾಳ : ಬರಿಮಾರು ಗ್ರಾಮದ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನ ಶ್ರೀ ಮಹಾಗುರು ಸಿದ್ಧಮರದ ಬೈದ್ಯರ ಸಾನಿಧ್ಯ ಕಲ್ಲೆಟ್ಟಿಯಲ್ಲಿ ಮೇ 22ರಿಂದ 25ರ ವರೆಗೆ ಜರಗಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ನಡೆಯಲಿದೆ.
ಎ. 14ರಂದು ಶ್ರೀ ಕ್ಷೇತ್ರದಲ್ಲಿ ಸಂಕ್ರಾಂತಿ ಪೂಜೆಯ ಸಂದರ್ಭದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿರುವ ಮೋಹನ್ ಗೌಡ ಇಡ್ಯಡ್ಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಜಗದೀಶ ಎಸ್. ಪೂಜಾರಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮೋಹನದಾಸ ಎಂ ಕುರಮಜಲುಗುತ್ತು, ಕಾರ್ಯದರ್ಶಿಯಾದ ಶಾರದಾ ರತ್ನಾಕರ ಪೂಜಾರಿ ಕಲ್ಲೆಟ್ಟಿ ಗುತ್ತು ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸತೀಶ್ ಪ್ರಭು ಕನ್ನೊಟ್ಟು ಮನೆತನ, ವಿಶ್ವನಾಥ ಪೂಜಾರಿ ದರ್ಬೆ, ಬಾಲಕೃಷ್ಣ ಪೂಜಾರಿ ಕಲ್ಲೆಟ್ಟಿ, ಶಶಿಕಲಾ ಕಲ್ಲೆಟ್ಟಿ, ಬ್ರಹ್ಮ ಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಧುಕರ ಎಂ. ಕುರಮಜಲುಗುತ್ತು, ಬರಿಮಾರು ಗ್ರಾಮ ಪಂಚಾಯತಿ ಸದಸ್ಯರಾದ ಶೃತಿ ಗೋಪುಕೋಡಿ, ಪುಷ್ಪಲತಾ ಹಿರಿಯರಾದ ಸನತ್ ಕುಮಾರ್ ಜೈನ್, ಮದ್ಮೇತ್ತಿಮಾರು, ವೆಂಕಪ್ಪ ಪೂಜಾರಿ ದೇಲಬೆಟ್ಟು,ಕೂಸಪ್ಪ ಪೂಜಾರಿ ಅಲೈತ್ತಿಮಾರು, ಕಡೇಶ್ವಾಲ್ಯ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರು ಶಿವಾನಂದ ಕರ್ತಕೋಡಿ, ಹಾಗೂ ಸದಸ್ಯರು ಯಶೋದ ಸುರೇಶ್ ಪೂಜಾರಿ ದರ್ಬೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವಿಸ್ಮಿತಾ ಮಧುಕರ ಕುರಮಜಲುಗುತ್ತು ಕಾರ್ಯಕ್ರಮ ಸಂಯೋಜಿಸಿದರು.