ಪ್ರೇಯಸಿಯ ಬರ್ತ್ ಡೇ ಸೆಲಬ್ರೇಷನ್ : ಕೇಕ್ ಕಟ್ ಮಾಡಿಸಿ ಪ್ರಿಯತಮೆಯ ಕುತ್ತಿಗೆ ಕೊಯ್ದು ಪ್ರಿಯಕರ..! –ಕಹಳೆ ನ್ಯೂಸ್
ಬೆಂಗಳೂರು : ಪ್ರೇಯಸಿಯ ಬರ್ತ್ ಡೇ ಸೆಲಬ್ರೇಷನ್ ಮಾಡಿ, ಕೇಕ್ ಕಟ್ ಮಾಡಿಸಿದ ಪ್ರಿಯಕರ ಬಳಿಕ ಚಾಕುವಿನಿಂದ ಆಕೆಯ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.
ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯ (28) ಕೊಲೆಯಾದ ಯುವತಿ. ಹತ್ಯೆ ಮಾಡಿದ ಆರೋಪಿ ಪ್ರಶಾಂತ್.
ನವ್ಯ ಹಾಗೂ ಪ್ರಶಾಂತ್ ಇವರಿಬ್ಬರು ಕನಕಪುರ ಮೂಲದ ದೂರ ಸಂಬಂಧಿಕರಾಗಿದ್ದು, ಕಳೆದ 6ವರ್ಷದಿಂದ ಇಬ್ಬರು ಪ್ರೀತಿಸುತ್ತಿದ್ದರು. ಕಳೆದ ಮಂಗಳವಾರ ಯುವತಿಯ ಹುಟ್ಟುಹಬ್ಬವಿದ್ದು ಈ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಣೆಗೆ ಪ್ರಶಾಂತ್ ಬಾರದೆ ತಾನು ಕೆಲಸದಲ್ಲಿ ಬ್ಯುಸಿ ಇರುವುದಾಗಿ ತಿಳಿಸಿದ್ದ. ಹೀಗಾಗಿ ನಿನ್ನೆ ಬರ್ತ್ ಡೇ ಸೆಲೆಬ್ರೇಷನ್ ಪ್ಲಾನ್ ಮಾಡಿದ್ದನು. ಅದರಂತೆ ರಾತ್ರಿ ಕೇಕ್ ತರಿಸಿ ಯುವತಿಯಿಂದ ಕಟ್ ಮಾಡಿಸಿದ್ದನು. ಬಳಿಕ ಕೇಕ್ ತಿನ್ನಿಸಿದ್ದ ಆರೋಪಿ ಪ್ರಶಾಂತ್ ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಸದ್ಯ ಮೃತ ಯುವತಿಯ ಶವ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಪ್ರಶಾಂತ್ನನ್ನು ಪೊಲೀಸರು ಬಂಧಿಸಿದ್ದು ಈ ಬಗ್ಗೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ನಿಖಿರ ಕಾರಣ ಇನ್ನಷ್ಟೆ ತಿಳಿದು ಬರಬೇಕಾಗಿದೆ.