Recent Posts

Monday, January 27, 2025
ಸುದ್ದಿ

ಕಾಂತಾರದ ‘ವರಾಹ ರೂಪಂ’ ಹಾಡಿಗೆ ಕೋರ್ಟ್ ತಡೆಯಾಜ್ಞೆ – ಕಹಳೆ ನ್ಯೂಸ್

ತಿರುವನಂತಪುರಂ : ಕನ್ನಡದ ದಂತಕಥೆ ಕಾಂತಾರ ಚಿತ್ರದ ವಿವಾದಾತ್ಮಕ ‘ವರಾಹ ರೂಪಂ’ ಹಾಡನ್ನು ಚಿತ್ರಮಂದಿರ, ಒಟಿಟಿ ಮತ್ತು ಮತ್ತು ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್ ಫಾಮ್ ಗಳಲ್ಲಿ ಬಳಸುವುದನ್ನು ನಿಬರ್ಂದಿಸುವಂತೆ ಕೇರಳದ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
ಇದು ಮೇಲ್ನೋಟಕ್ಕೆ ಕೃತಿಚೌರ್ಯ ಕಾಯ್ದೆ ಉಲ್ಲಂಘನೆ ಎಂದು ನ್ಯಾಯಾಲಯ ಹೇಳಿದ್ದು, ಕಳೆದ ವರ್ಷ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಕಾಂತಾರದ ವರಾಹ ರೂಪಂ ಹಾಡನ್ನ ‘ನವರಸಂ’ ಗೀತೆಯಿಂದ ನಕಲು ಮಾಡಿರುವುದಾಗಿ ಆರೋಪಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಆ ಹಾಡಿನ ಹಕ್ಕುಸ್ವಾಮ್ಯ ಹೊಂದಿರುವ ಜನಪ್ರಿಯ ಮ್ಯೂಸಿಕ್ ಬ್ಯಾಂಡ್, ಥೈಕುಡಮ್ ಬ್ರಿಡ್ಜ್ ಮತ್ತು ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂಪನಿ ಲಿಮಿಟೆಡ್ ಗೆ ಬಾಕಿ ಕ್ರೆಡಿಟ್ ನೀಡುವಂತೆ ಪ್ರಥಮ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕೆ.ಇ. ಕೆ ಇ ಸಾಲಿಹ್ ನಿರ್ದೇಶಿಸಿದ್ದಾರೆ.

ವೈಯಕ್ತಿಕ ಶೈಲಿ, ಗತಿ ಮತ್ತು ಮಧುರವನ್ನು ಉಳಿಸಿಕೊಂಡು ಭಾರತೀಯ ಶಾಸ್ತ್ರೀಯ ಜೊತೆ ರಾಕ್ ಸಂಗೀತದ ಸಮ್ಮಿಲನಕ್ಕಾಗಿ ಜನಪ್ರಿಯವಾಗಿರುವ ಥೈಕ್ಕುಡಮ್ ಬ್ರಿಡ್ಜ್ನ ನವರಸಂ (2015) ನಿಂದ ಸ್ಫೂರ್ತಿ ಪಡೆದಿರುವುದಾಗಿ ಟ್ರ್ಯಾಕ್ನ ಸಂಗೀತ ನಿರ್ದೇಶಕರು ಸ್ವತಃ ಒಪ್ಪಿಕೊಂಡಿದ್ದು, ಇದನ್ನ ಪರಿಗಣಿಸಿದ ನ್ಯಾಯಾಲಯ, ಈ ಹಾಡನ್ನು ಥಿಯೇಟರ್ ಹಾಗೂ ಓಟಿಟಿಯಲ್ಲಿ ಬಳಸದಂತೆ ಮಧ್ಯಂತರ ಆದೇಶ ನೀಡಿದೆ.

ನವರಸಂ ಹಾಡನ್ನು ನಕಲು ಮಾಡುವ ಮೂಲಕ ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಕೃತಿಸ್ವಾಮ್ಯ ಕಾಯ್ದೆ 1957 (ಹಕ್ಕುಸ್ವಾಮ್ಯ ಉಲ್ಲಂಘನೆ) ಸೆಕ್ಷನ್ 64 ರ ಅಡಿಯಲ್ಲಿ ಕೃತಿಚೌರ್ಯ ಹಾಡಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಕಳೆದ ವಾರ ಕೋಝಿಕ್ಕೋಡ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪೆÇಲೀಸರಿಗೆ ಸೂಚನೆ ನೀಡಿತ್ತು. ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಆರೋಪಿಸಿ ಮಾತೃಭೂಮಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಪ್ರಕರಣದ ಪ್ರಗತಿ ವರದಿಯನ್ನು ಮೇ 4 ರೊಳಗೆ ನ್ಯಾಯಾಲಯಕ್ಕೆ ನೀಡುವಂತೆ ಕೋಝಿಕ್ಕೋಡ್ ನ್ಯಾಯಾಲಯ ತನಿಖಾಧಿಕಾರಿಗೆ ಸೂಚಿಸಿದೆ.