Saturday, January 25, 2025
ಸುದ್ದಿ

ಸಂಸ್ಕಾರ ಭಾರತೀ, ಬಂಟ್ವಾಳ ಇದರ ವತಿಯಿಂದ ಮಕ್ಕಳ ಸಂಸ್ಕಾರಯುತ ಶಿಕ್ಷಣಕ್ಕಾಗಿ “ಸಂಸ್ಕಾರ ಸೌರಭ”ಕ್ಕೆ ಚಾಲನೆ –ಕಹಳೆ ನ್ಯೂಸ್

ಸಂಸ್ಕಾರ ಭಾರತೀ ,ಬಂಟ್ವಾಳ ಇದರ ವತಿಯಿಂದ ‘ಸಂಸ್ಕಾರ ಸೌರಭ” ಮಕ್ಕಳ ಹಬ್ಬವು ಬಂಟ್ವಾಳದ ಸಾಲೆತ್ತೂರಿನ ನವಚೇತನ ಯುವಕ ಮಂಡಲದ ವಠಾರದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮಕ್ಕಳ ಶಿಬಿರವನ್ನು ತಾಲೂಕು ಪಂಚಾಯತ್‌ನ ನಿಕಟ ಪೂರ್ವ ಸದಸ್ಯರಾದ ನಾರಾಯಣ ಶೆಟ್ಟಿ, ಕುಲ್ಯಾರು ದೀಪ ಬೆಳಗುವ ಮೂಲಕ ಶಿಬಿರವನ್ನು ಉಧ್ಘಾಟಿಸಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ದ.ಕ ಜಿಲ್ಲೆಯ ಸಂಸ್ಕಾರ ಭಾರತೀ ಸಂಘಟನೆಯ ಅಧ್ಯಕ್ಷರಾದ ತಾರನಾಥ ಕೊಟ್ಟಾರಿಯವರು ವಹಿಸಿದ್ರು.

ಮಕ್ಕಳ ಶಿಬಿರದಲ್ಲಿ ಮೊದಲ ದಿನ 80 ಪುಟಾಣಿಗಳು ಭಾಗವಹಿಸಿದ್ದು, ಮಕ್ಕಳಿಗೆ ಸದಾಶಿವ ಕಡಂಬಾರ್ ರವರು ಭಗವದ್ಗೀತೆ ವಾಚನ ತರಬೇತಿ ನೀಡಿದ್ದಾರೆ. ಬಾಳಪ್ಪ ಮಾಸ್ಟರ್ ಕೊಲ್ಯ ಯೋಗ ಮತ್ತು ಧ್ಯಾನ ಕಲಿಸಿದ್ದು, ಪಂಚಾAಗ ಕಲಿಕೆಯ ಬಗ್ಗೆ ಶಾಲಿನಿ ಎಸ್ ನೋಂಡ ಪಡಾರು ತಿಳಿಸಿದ್ದಾರೆ.

ಇನ್ನೂ ಮಕ್ಕಳಿಗೆ ಡಾಕ್ಟರ್ ವಾರಿಜಾ ನಿರ್ಬೈಲ್‌ರವರು ಗಮಕ ವಾಚನ ತರಬೇತಿಯನ್ನು ನೀಡಿದ್ದು, ಸಂಧ್ಯಾ ಡಿ ರೈ ಕೊಲ್ಲಾಡಿ ಇವರು ಪುಟ್ಟ ಮಕ್ಕಳಿಗೆ ಸರಳ ವ್ಯಾಯಾಮಗಳನ್ನು ಮಾಡಿಸಿದ್ದಾರೆ. ಶಿಬಿರಾರ್ಥಿಗಳಿಗೆ ಪ್ರತಿಭ ಎ.ರೈ ಪಾಣೆಮಂಗಳೂರು ಇವರು ಭಗವದ್ಗೀತೆ ಪುಸ್ತಕಗಳನ್ನು ನೀಡಿದ್ರು.

ಈ ಸಂದರ್ಭದಲ್ಲಿ ಬಂಟರ ಸಂಘ ಸಾಲೆತ್ತೂರು ವಲಯದ ಅಧ್ಯಕ್ಷರಾದ ದೇವಪ್ಪ ಶೇಖ, ಸರಕಾರಿ ಪ್ರೌಢ ಶಾಲೆ ಮಂಚಿಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಲ| ರಾಮಪ್ರಸಾದ್ ರೈ ತಿರುವಾಜೆ, ಶಿಬಿರದ ಸಂಚಾಲಕಿ ಹಾಗೂ ಸಂಸ್ಕಾರ ಭಾರತೀ ಸಂಘಟನೆಯ ಜಿಲ್ಲಾ ಸಾಹಿತ್ಯ ವಿಧಾ ಪ್ರಮುಖರಾದ ವಿಜಯಾ ಬಿ.ಶೆಟ್ಟಿ, ಸಾಲೆತ್ತೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.