Saturday, January 25, 2025
ಸುದ್ದಿ

ಮಕ್ಕಳಿಗೆ ರಜಾದ ಮಜಾದೊಂದಿಗೆ ಸಂಸ್ಕಾರದ ಶಿಕ್ಷಣ : ಶುಭಪ್ರದವಾದ ಬಿಸು ಕಣಿ ಇಟ್ಟು ಪುಟಾಣಿಗಳೊಂದಿಗೆ ಬಿಸು ಆಚರಣೆ – ಕಹಳೆ ನ್ಯೂಸ್

ಸಂಸ್ಕಾರ ಭಾರತೀ, ಬಂಟ್ವಾಳ ಇದರ ವತಿಯಿಂದ ‘ಸಂಸ್ಕಾರ ಸೌರಭ’ ಕಾರ್ಯಕ್ರಮ ಸಾಲೆತ್ತೂರಿನ ನವಚೇತನ ಯುವಕ ಮಂಡಲ (ರಿ.) ವಠಾರದಲ್ಲಿ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

“ಮಕ್ಕಳ ಬೇಸಿಗೆ ರಜಾ ಹಬ್ಬ” ಶೀರ್ಷಿಕೆಯೊಂದಿಗೆ ಶಿಬಿರ ನಡೆಯುತ್ತಿದ್ದು, ಮಕ್ಕಳಲ್ಲಿ ಸಂಸ್ಕೃತಿ, ಅಚಾರ-ವಿಚಾರ, ಸನಾತನ ಧರ್ಮದ ಪ್ರಾವಿತ್ರ್ಯತೆಯ ಜೊತೆಗೆ ಸಂಸ್ಕಾರವನ್ನು ಬೆಳೆಸುವ ನಿಟ್ಟಿನಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದ್ದಾರೆ. ಈ ಶಿಬಿರವು ಎ. 13ರಿಂದ ಆರಂಭಗೊಂಡಿದ್ದು, ಎ. 17 ರವರೆಗೆ ನಡೆಯಲಿದೆ.

ಶಿಬಿರದಲ್ಲಿ ಮಕ್ಕಳಿಗೆ ಭಗವದ್ಗೀತಾ ವಾಚನ, ಕುಣಿತಾ ಭಜನೆ, ಪುರಾಣದ ಕಥೆಗಳು, ರಾಮಾಯಣ, ಮಹಾಭಾರತ, ಭಾಗವತದ ಕತೆಗಳು, ಮುದ್ದು ಮಕ್ಕಳಿಗೆ ಶಾಂತಿ ನೀಡುವ ದೇವರ ನಾಮಗಳು, ಅಳಿವಿನ ಅಂಚಿನಲ್ಲಿರುವ ಪ್ರಾದೇಶಿಕ ಆಟಗಳು, ಜೀವನದ ಅವಿಭಾಜ್ಯ ವಿಚಾರಗಳಾದ ನಿತ್ಯ ಶ್ಲೋಕಗಳು, ಪಂಚಾAಗದ ಬಗ್ಗೆ ತಿಳುವಳಿಕೆ, ಯೋಗ, ಧ್ಯಾನ ಸೇರಿದಂತೆ ಹಲವಾರು ವಿಷಯಗಳನ್ನು ಕಲಿತುಕೊಳ್ಳುವ ಅವಕಾಶವಿದೆ.

ಇಂದಿನ ಮಕ್ಕಳ ಹಬ್ಬವನ್ನು ಕಸ್ತೂರಿ ಟಿ.ಶೆಟ್ಟಿ ಕೊಲ್ಲಾಡಿಯವರು ದೀಪ ಬೆಳಗಿಸುವುದರ ಉದ್ಘಾಟನೆಗೊಳಿಸಿದ್ದು, ಡಾ| ವಾರಿಜಾ ನಿರ್ಬೈಲ್, ಮಂಚಿ ಯವರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ್ರು.

ಶಿಬಿರದಲ್ಲಿ ಪುಟಾಣಿಗಳು ಬಿಸು ಹಬ್ಬದ ಪ್ರಯುಕ್ತ ಯನ್ನು ನೋಡಿ ಅದರಲ್ಲಿದ್ದ ಕನ್ನಡಿಯಲ್ಲಿ ತಮ್ಮ ಮುಖದ ಪ್ರತಿಬಿಂಬವನ್ನು ಕಂಡು ಆತ್ಮಕ್ಕೆ ಕೈಮಗಿದು, ಬಳಿಕ ಭಾರತ ಮಾತೆಗೆ ಪುಷ್ಪಾರ್ಚನೆಗೈದ್ರು.

ಶಿಬಿರಾರ್ಥಿಗಳೇ ತಮ್ಮ ಕೈತೋಟದಿಂದ ತಂದ ಮಾವು, ಗೇರು, ಗುಜ್ಜೆ, ಜೀಗುಜ್ಜೆ, ಹಣ್ಣು, ಕರಂಡೆಕಾಯಿ, ಸೋರೆಕಾಯಿ, ತೊಂಡೆಕಾಯಿ, ಬದನೆ, ಅಲಸಂಡೆ, ಇತ್ಯಾದಿಗಳಿಂದ ಬಿಸು ಕಣಿಯನ್ನು ಸಂಭ್ರಮಿಸಿದ್ರು. ಈ ಸಂದರ್ಭದಲ್ಲಿ ದ.ಕ. ಸಂಸ್ಕಾರ ಭಾರತಿ, ಶಿಬಿರದ ಸಂಚಾಲಕಿಯಾದ ವಿಜಯಾ ಬಿ.ಶೆಟ್ಟಿ. ಸಾಲೆತ್ತೂರು, ಶಿಬಿರಾರ್ಥಿಗಳು ಸೇರಿದಂತೆ ಶಿಬಿರಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.