Friday, January 24, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ರಾಜ್ ಪೂಜಾರಿ ಮನೆ ಮೇಲೆ ಐಟಿ ದಾಳಿ ; ನನ್ನ ವ್ಯವಹಾರದ ದಾಖಲೆಪತ್ರಗಳು ಸಮರ್ಪಕವಾಗಿದೆ. ನಾನು ತೆರಿಗೆ ವಂಚಿಸಿ ವ್ಯವಹರಿಸುವುದಿಲ್ಲ. ಬಿಜೆಪಿಗರ ಕುಮ್ಮಕ್ಕಿನಿಂದ ಐಟಿ ದಾಳಿ‌ ನಡೆದಿದೆ – ಕಹಳೆ ನ್ಯೂಸ್

ಮಂಗಳೂರು: ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ರಾಜ್ ಪೂಜಾರಿ ಅವರ ನಗರದ ಎರಡು ಮನೆ ಮತ್ತು ಕಚೇರಿಗೆ ಶನಿವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗ್ಗೆ ಸುಮಾರು 7 ಗಂಟೆಗೆ 14 ಮಂದಿ ಅಧಿಕಾರಿಗಳ ತಂಡ ವಿವೇಕ್ ರಾಜ್ ಅವರಿಗೆ ಸೇರಿದ ಅತ್ತಾವರ ಮತ್ತು ಮಣ್ಣಗುಡ್ಡೆಯಲ್ಲಿರುವ ಎರಡು ಮನೆಗಳಿಗೆ ಹಾಗೂ ವಿವೇಕನಗರದಲ್ಲಿರುವ ಕಚೇರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿವೇಕ್ ರಾಜ್ ಪೂಜಾರಿ ಅವರು, ನನ್ನ ವ್ಯವಹಾರದ ದಾಖಲೆಪತ್ರಗಳು ಸಮರ್ಪಕವಾಗಿದೆ. ನಾನು ತೆರಿಗೆ ವಂಚಿಸಿ ವ್ಯವಹರಿಸುವುದಿಲ್ಲ. ಇದು ಬಿಜೆಪಿಗರ ಕುಮ್ಮಕ್ಕಿನಿಂದ ಐಟಿ ದಾಳಿ‌ ನಡೆದಿದೆ ಎಂದು ಆರೋಪಿಸಿದ್ದಾರೆ.