Saturday, January 25, 2025
ಸುದ್ದಿ

ಮನೆಯಲ್ಲಿದ್ದ ಉಡುಗೆಯಲ್ಲೆ ವೃದ್ಧರೊಬ್ಬರು ನಾಪತ್ತೆ : ಗುರುತು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಮನವಿ – ಕಹಳೆ ನ್ಯೂಸ್

ಬಂಟ್ವಾಳ: ಮನೆಯಲ್ಲಿದ್ದ ಉಡುಗೆಯಲ್ಲಿ ವೃದ್ಧರೊಬ್ಬರು ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಮುನ್ನೂರು ಗ್ರಾಮದ ಕೌಳಿಗೆ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಜೀಪ ಮುನ್ನೂರು ಗ್ರಾಮದ ಕೌಳಿಗೆ ನಿವಾಸಿ ಪರಮೇಶ್ವರ (75) ಎಂಬವರು ಮನೆಯಿಂದ ಹೊರಗೆ ಹೋದವರು ಮನೆಗೆ ಬರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಇವರ ಮಗ ಶಿವಾನಂದ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಎ. 14 ರಂದು ರಾತ್ರಿ ಸುಮಾರು 10 ಗಂಟೆ ವೇಳೆಗೆ ಮನೆಯಲ್ಲಿ ಎಲ್ಲರ ಜೊತೆ ಕುಳಿತುಕೊಂಡಿದ್ದವರು. ಮನೆಯಲ್ಲಿದ್ದ ಉಡುಗೆಯಲ್ಲಿ ಮನೆಯಿಂದ ಹೊರಗೆ ಹೋದವರು ಮನೆಗೆ ಬರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಇವರ ಗುರುತು ಪತ್ತೆಯಾದಲ್ಲಿ ನಗರ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡುವಂತೆ ಕೋರಲಾಗಿದೆ.