Saturday, January 25, 2025
ಸುದ್ದಿ

ಮನೆಯಲ್ಲಿದ್ದ ಉಡುಗೆಯಲ್ಲೆ ನಾಪತ್ತೆಯಾಗಿದ್ದ ವೃದ್ಧ ಶವವಾಗಿ ಪತ್ತೆ – ಕಹಳೆ ನ್ಯೂಸ್

ಬಂಟ್ವಾಳ: ಮನೆಯಲ್ಲಿದ್ದ ಉಡುಗೆಯಲ್ಲೆ ವೃದ್ಧರೊಬ್ಬರು ನಾಪತ್ತೆಯಾಗಿದ್ದ ಬಗ್ಗೆ ವರದಿಯಾಗಿತ್ತು. ಇದೀಗ ಇವರು ಶವವಾಗಿ ಪತ್ತೆಯಾಗಿದ್ದಾರೆ. ಸಜೀಪ ಮುನ್ನೂರು ಗ್ರಾಮದ ಕೌಳಿಗೆ ನಿವಾಸಿ ಪರಮೇಶ್ವರ (75) ಎಂಬವರು ಮೃತಪಟ್ಟ ವ್ಯಕ್ತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆಯಲ್ಲಿದ್ದ ಉಡುಗೆಯಲ್ಲಿ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆಯ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರು ಎ.14 ರಂದು ರಾತ್ರಿ ವೇಳೆ ಕೈಯಲ್ಲಿ ಟಾರ್ಚ್ ಹಿಡಿದು ಕೊಂಡ ಮನೆಯಿಂದ ಹೊರಗೆ ಹೋದವರು ಮನೆಗೆ ಬರದೆ ನಾಪತ್ತೆಯಾಗಿದ್ದಾರೆ. ಎ. 14 ರಂದು ರಾತ್ರಿ ಸುಮಾರು 10 ಗಂಟೆ ವೇಳೆಗೆ ಮನೆಯಲ್ಲಿ ಎಲ್ಲರ ಜೊತೆ ಕುಳಿತುಕೊಂಡಿದ್ದವರು ಮನೆಯಲ್ಲಿದ್ದ ಉಡುಗೆಯಲ್ಲಿ ಮನೆಯಿಂದ ಹೊರಗೆ ಹೋದವರು ಮನೆಗೆ ಬರಲಿಲ್ಲ ಎಂದು ಇವರ ಮಗ ಶಿವಾನಂದ ಪೋಲೀಸರಿಗೆ ದೂರ ನೀಡಿದ್ದರು.

ಇವರ ಗುರುತು ಪತ್ತೆಯಾದಲ್ಲಿ ನಗರ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡುವಂತೆ ಕೋರಿದ್ದರು.
ಇಂದು ಬೆಳಿಗ್ಗೆ ಸಜೀಪ ಮುನ್ಮೂರು ಗ್ರಾಮದ ಮಡಿವಾಳಪಡ್ಪು ಎಂಬಲ್ಲಿ ಮನೆಯ ಬದಿಯಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಇವರ ಶವ ತೇಲಾಡುತ್ತಿದ್ದನ್ನು ನೋಡಿ ಮನೆಯವರಿಗೆ ತಿಳಿಸಿದ್ದಾರೆ. ನಾಪತ್ತೆಯಾದ ಪರಮೇಶ್ವರ ಅವರು ಶವವಾಗಿ ಪತ್ತೆಯಾಗಿದ್ದಾರೆ.