Friday, January 24, 2025
ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಪುತ್ತೂರು ಸಿಮಾಧಿಪತಿಯ ರಥಬೀದಿ ಸ್ವಚ್ಚತೆ : ಯಮುನಾ ಬೋರ್‌ವೆಲ್ಸ್ ಹಾಗೂ ಖ್ಯಾತ ವಕೀಲರಾದ ಗಿರಿಶ್ ಮಳಿಯವರ ಮುಂದಾಳತ್ವದಲ್ಲಿ ಪುಣ್ಯ ಕಾರ್ಯ – ಕಹಳೆ ನ್ಯೂಸ್

ಇತಿಹಾಸ ಪ್ರಸಿದ್ದ ಪುತ್ತೂರು ಮಹತ್ತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ ಅತ್ಯಂತ ಸಂಭ್ರಮದಿAದ ನಡೆಯುತ್ತಿದೆ. ಹತ್ತೂರ ಒಡೆಯನಿಗೆ ಸಮರ್ಪಣೆಯಾಗಿರುವ, ಭವ್ಯವಾದ ರಥ ಸಾಗುವ ರಥಬೀದಿಯ ಸ್ವಚ್ಚತಾ ಕಾರ್ಯ ಭರದಿಂದ ಸಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾಲಿಂಗೇಶ್ವರ ದೇವಾಲಯದ ರಥ ಬೀದಿಗೆ ಕಾಂಕ್ರೀಟ್ ಆದ ಬಳಿಕ, ಜಾತ್ರೋತ್ಸವದ ಸಂದರ್ಭದಲ್ಲಿ ರಥ ಬೀದಿಯ ಸ್ವಚ್ಚತಾ ಕಾರ್ಯವನ್ನ ಯಮುನಾ ಬೋರ್‌ವೆಲ್ಸ್ನ ದಿ.ಕೃಷ್ಣ ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಸಿಕೊಂಡು ಬರಲಾಗುತ್ತಿತ್ತು. ಇಂದು ಅವರ ನೆನಪಿನಲ್ಲಿ ಪತ್ನಿ ದಿವ್ಯಾ ಕೆ. ಶೆಟ್ಟಿ ಹಾಗೂ ಮಗಳು ಯುವ ಉದ್ಯಮಿ ಕಾವ್ಯಾ ಕೆ. ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಸಲಾಗುತ್ತಿದೆ.

ನಾಳೆ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ನಡೆಯಲಿದ್ದು, ಈ ಹಿನ್ನಲೆಯಲ್ಲಿ ರಥಬೀದಿ ಸ್ವಚ್ಚತಾ ಕಾರ್ಯವೂ ಯಮುನ ಬೋರ್‌ವೆಲ್ಸ್ ಹಾಗೂ ಖ್ಯಾತ ವಕೀಲರಾದ ಗಿರಿಶ್ ಮಳಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.