ಕುದ್ಮುಲ್ ರಂಗರಾವ್ ಸಮಾಧಿಗೆ ಗೌರವ ಸಲ್ಲಿಸಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾ.ಜ.ಪ ಅಭ್ಯರ್ಥಿ ವೇದವ್ಯಾಸ್ ಕಾಮತ್ : ಕಹಳೆ ನ್ಯೂಸ್
ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರು ಈ ಬಾರಿಯೂ ನಾಮಪತ್ರ ಸಲ್ಲಿಸುವ ಮುನ್ನ ದಲಿತೋದ್ಧಾರಕ ಕುದ್ಮುಲ್ ರಂಗರಾವ್ ಅವರ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಬಾರಿಯೂ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಪೂಜ್ಯ ಕುದ್ಮುಲ್ ರಂಗರಾವ್ ಅವರ ಸಮಾಧಿಗೆ ಗೌರವ ಸಮರ್ಪಸಿದ್ದೆ. ಕುದ್ಮುಲ್ ರಂಗರಾವ್ ಅವರು ನನಗೆ ಆದರ್ಶ. ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆ, ಹಿಂದುಳಿದ ಸಮಾಜವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುನ್ನೆಲೆಗೆ ತರಬೇಕೆಂಬ ಅವರ ಆಶಯವನ್ನು ಆದರ್ಶವಾಗಿ ಪರಿಗಣಿಸಿ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದು ಹೇಳಿದರು.
ಮಂಗಳೂರು ನಗರ ದಕ್ಷಿಣ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷರಾದ ರಘುವೀರ್ ಬಾಬುಗುಡ್ಡೆ ಮಾತನಾಡಿ, ತನ್ನ ಶಾಸಕತ್ವದ ಅವಧಿಯಲ್ಲಿ ನಮ್ಮ ಸಮುದಾಯದ ಪ್ರತಿಯೊಂದು ಬೇಡಿಕೆಗಳಿಗೂ ಪೂರಕವಾಗಿ ಸ್ಪಂದಿಸಿದ ವೇದವ್ಯಾಸ್ ಕಾಮತ್ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಶೈಲೇಶ್, ಕುದ್ಮುಲ್ ರಂಗರಾಯರ ಎಜ್ಯುಕೇಷನ್ ಟ್ರಸ್ಟ್ ನ ಸದಸ್ಯರಾದ ಶ್ಯಾಮ್ ಕರ್ಕೇರ, ಶಶಿಕಾಂತ್, ಅರವಿಂದ್, ಹಾಗೂ ಭಾರತೀಯ ಜನತಾ ಪಾರ್ಟಿ ಎಸ್.ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಬಿಲಿಂಬಿ, ಉಪಾಧ್ಯಕ್ಷರಾದ ಸಂದೀಪ್ ಬೋಳೂರು, ರಾಧಕೃಷ್ಣ, ಸದಸ್ಯರಾದ ಗಂಗಾಧರ, ಬಿಜೆಪಿ ಮುಖಂಡರಾದ ಪ್ರಮೋದ್ ಕೊಟ್ಟಾರಿ, ಅರ್ಚನಾ, ಜನಾರ್ದನ, ವಿವೇಕ್ ಶೆಟ್ಟರ್, ಲಲಿತಾ, ಅಕ್ಷತಾ, ಮೇಘ, ದಿನೇಶ್, ನಾರಾಯಣ್, ವಿಕ್ರಮ್ ಕದ್ರಿ, ರಶ್ಮಿ, ಮುಂತಾದವರು ಉಪಸ್ಥಿತರಿದ್ದರು.