Saturday, January 25, 2025
ಸುದ್ದಿ

ಬಿಜೆಪಿ ಅಭ್ಯರ್ಥಿಯಾಗಿ ಹರೀಶ್ ಪೂಂಜ ಎರಡನೇ ಬಾರಿಗೆ ನಾಮಪತ್ರ ಸಲ್ಲಿಕೆ – 50 ಸಾವಿರಕ್ಕೂ ಅಧಿಕ ಜನ ಭಾಗಿ -ಕಹಳೆ ನ್ಯೂಸ್

ಬೆಳ್ತಂಗಡಿ : ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಹರೇಶ್‌ಪೂಂಜ ಅವರು ಎರಡನೇ ಬಾರಿಗೆ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಕುತ್ಯಾರು ಸೋಮನಾಥ ದೇವರ ಸನ್ನಿದಿಗೆ ತೆರಳಿ ಎರಡನೇ ಬಾರಿಗೆ ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ಕಲ್ಲಿಸಲು ದೇವರಲ್ಲಿ ಪಾರ್ಥಿಸಿದರು. ನಂತರ ಸೋಮನಾಥ ದೇವರ ಸನ್ನಿದಿಯ ವಠಾರದಲ್ಲಿ ಸೇರಿದ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಬೆಳ್ತಂಗಡಿ ಆಡಳಿತ ಸೌಧಕ್ಕೆ ಮೆರವಣಿಗೆಯಮೂಲಕ ತೆರಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚೆಂಡೆ, ಕೊಂಬು ವಾದ್ಯ, ನಾಸಿಕ್, ಬ್ಯಾಂಡ್ ಸೇರಿದಂತೆ ಮಂಗಳಕರ ವಾದ್ಯಗಳೊಂದಿಗೆ ಮೆರವಣಿಗೆ ಸಾಗಿಬಂತು. ದಾರಿಯುದ್ದಕ್ಕೂ ಮೋದಿ, ಹರೇಶ್ ಪೂಂಜಾ, ಬಿಜೆಪಿ ಜಯಕಾರದ ಘೇಷಣೆಗಳು ಮುಗಿಲು ಮುಟ್ಟುತ್ತಿತ್ತು ಕಾರ್ಯಕರ್ತರೆಡೆಗೆ ಕೈ ಬೀಸುತ್ತಾ ಸಾಗಿದ ಹರೀಶ್ ಪೂಂಜಾ ಅಲ್ಲಲ್ಲಿ ತಾವೇ ಮೈಕ್ ಮೂಲಕ ಕಾರ್ಯಕರ್ತರನ್ನು ನಿಯಂತ್ರಿಸುವ, ಸಂದೇಶ ನೀಡುತ್ತಿದ್ದರು .

ಮೆರವಣಿಗೆಯ ಹಾದಿಯಲ್ಲಿ ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರನ್ನು ಹರೀಶ್ ಪೂಂಜ ಅವರು ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು. ಬೋಲೊಟ್ಟು ವಿಠಲ ಶೆಟ್ಟಿ, ರತ್ನಾಕರ ಪೂಜಾರಿ, ಸತೀಶ್ ಶೆಟ್ಟಿ, ಪವನ್ ಶೆಟ್ಟಿ, ಹಂಝ ಮಿತ್ತಬಾಗಿಲು, ಸೇಸಪ್ಪ ನಲಿಕೆ ಅಳದಂಗಡಿ, ಲೋಶನ್ ಮೇಲಂತಬೆಟ್ಟು ಸೇರಿದಂತೆ ಅನೇಕರು ಪಕ್ಷಕ್ಕೆ ಸೇರ್ಪಡೆಗೊಂಡರು.

ಕುತ್ತಾರು ದೇವಗಾನದಿಂದ ಹೊರಟ ಮೆರವಣಿಗೆ ತಾಲೂಕು ಆಡಳಿತ ಸೌಧಕ್ಕೆ ತಲುಪಿದಾಗ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟುವಂತಿತ್ತು, ತೆರೆದ ಜೀಪಿನಿಂದ ಇಳಿದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ಪ್ರಮುಖರೊಂದಿಗೆ ಆಡಳಿತ ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಮಂಡಲ ಅಧ್ಯಕ್ಷರಾದ ಶ್ರೀ ಜಯಂತ್ ಕೋಟ್ಯಾನ್, ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಮಾಜಿ ಮಂಡಲ ಅಧ್ಯಕ್ಷರಾದ ಶ್ರೀ ಕಾಲಪ್ಪ ಗೌಡ ಪವಾರ ಹಿರಿಯರಾದ ಶ್ರೀ ಸುಬ್ರಮಣ್ಯ ಅಗರ್ತ ಅವರು ಉಪಸ್ಮಿತರಿದ್ದರು.

50ಸಾವಿರಕ್ಕೂ ಅಧಿಕ ಜನರು ಶಾಸಕ ಹರೀಶ್ ಪೂಂಜ ಅವರ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. ತಾಲ್ಲೂಕಿನ ಎಲ್ಲಾ 81 ಶಕ್ತಿ ಕೇಂದ್ರಗಳಿಂದ ಕಾರ್ಯಕರ್ತರು, ಅಭಿಮಾನಿಗಳು ಭಾಗಿಯಾಗಿದ್ದರು. ನಾಮಪತ್ರ ಸಲ್ಲಿಕೆ ಹಾಗೂ ಮೆರವಣಿಗೆಯ ಸುಸಂದರ್ಭದಲ್ಲಿ ಕೇರಳ ಬಿಜೆಪಿ ರಾಜ್ಯ ಕಾರ್ಯದರ್ಶಿ ಅಡ್ಕ ಶ್ರೀಕಾಂತ್, ಬೆಳ್ತಂಗಡಿ ಬಿಜೆಪಿ ವರದ ಜೇಡ, ಕಾರ್ಯಕರ್ತ ನೇಮಿರಾಜ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಹರಿಕೃಷ್ಣ ಬಂಟ್ನಾಳ, ಕೊರಗಪ್ಪ ನಾಯ್ಕ, ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಪರಿಷತ್ ಸದಸ್ಯರಾದ ಮಾನ್ ಸಿಂಹ ನಾಯಕ್, ಮಾಜಿ

ಶಾಸಕರಾದ ಪುಭಾಕರ ಬಂಗೇರ, ಮಾಜಿ ಮಂಡಲ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ಹಿರಿಯರಾದ ಸುಬ್ರಮಣ್ಯ ಅಗರ್ತ, ಮಂಡಲ ಪದಾಧಿಕಾರಿಗಳು, ಪಕ್ಷದ ಹಿರಿಯರು, ಜನಪ್ರತಿನಿಧಿಗಳು, ಅಪಾರ ಸಂಖ್ಯೆಯ ಕಾರ್ಯಕರ್ತ ಬಂಧುಗಳು, ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದರು.