ಪುತ್ತೂರಿನಲ್ಲಿ ನಿನ್ನೆ ಪುತ್ತಿಲ ಕೇಸರಿ ಅಲೆ ; ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಅರುಣ್ ಕುಮಾರ್ ನಾಮಪತ್ರ ಸಲ್ಲಿಸುತ್ತಿದ್ದಂತೆ ಚುರುಕುಗೊಂಡ ರಾಜಕೀಯ ಲೆಕ್ಕಾಚಾರ – ಕಹಳೆ ನ್ಯೂಸ್
ಪುತ್ತೂರು : ಈ ಬಾರಿಯ ವಿಧಾನಸಭಾ ಚುನಾವಣೆ ಪುತ್ತೂರಿನಲ್ಲಿ ಚುನಾವಣಾ ಕಣವನ್ನು ರೋಚಕವಾಗಿಸಿದೆ. ಹಾಲಿ ಶಾಸಕ ಸಂಜೀವ ಮಠಂದೂರು ಬದಲು ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ಆಶಾ ತಿಮ್ಮಪ್ಪ ಗೌಡರಿಗೆ ಬಿಜೆಪಿ ಮಣೆಹಾಕಿದ್ದು, ಸಹಜವಾಗಿಯೇ ಟಿಕೆಟ್ ಆಕಾಂಕ್ಷೆಯಲ್ಲಿತ್ತ ಪುತ್ತಿಲ ಟೀಂನ ಅಸಮಾಧಾನಕ್ಕೆ ಕಾರಣವಾಗಿದೆ.
ಅಶೋಕ್ ರೈ ಕೋಡಿಂಬಾಡಿಯವರು ಕೆಲ ತಿಂಗಳುಗಳ ಹಿಂದೆ ಬಿಜೆಪಿಗೆ ಬಾಯ್ ಹೇಳಿ ಕೈ ಹಿಡಿದು, ಇಂದು ಟಿಕೆಟ್ ಪಡೆದುಕೊಂಡು, ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನು ಬಿಜೆಪಿ ಟಿಕೆಟ್ ಆಕಾಂಕ್ಷೆಯಲ್ಲಿದ್ದವರ ಪಟ್ಟಿ ಬಹು ಉದ್ದವಿದೆ.
ಇತ್ತ ಆಶಾ ತಿಮ್ಮಪ್ಪ ಗೌಡರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯ ಕೆಲ ಕಾರ್ಯಕರ್ತರಲ್ಲಿ ಸಹಜವಾಗಿಯೇ ನಿರಾಶೆ, ಆಕ್ರೋಶ, ಪುತ್ತಿಲರಿಗೆ ಜೈ ಎನ್ನುವಂತೆ ಮಾಡಿದೆ.
ಪುತ್ತಿಲ ನಾಮಪತ್ರ ಸಲ್ಲಿಕೆ :
ಸಾವಿರಾರು ಅಭಿಮಾನಿಗಳ ಜೊತೆ ಆಗಮಿಸಿ, ಪುತ್ತಿಲ ನಿನ್ನೆ ನಾಮಪತ್ರ ಸಲ್ಲಿದ್ದಾರೆ. ಪುತ್ತಿಲ ಹವಾ ಬಹಳ ಜೊರಾಗಿ ಸದ್ದು ಮಾಡಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಪುತ್ತಿಲ ಜೊತೆ ಕೇಸರಿ ಶಾಲು ಧರಿಸಿ ಭಾಗಿಯಾಗಿದ್ರು, ಪುತ್ತೂರು ನಗರದಲ್ಲಿ ಅಕ್ಷರಶಃ ಕೇಸರಿಮಯ ಮಾಡಿದ ಬೃಹತ್ ಮೆರವಣಿಗೆ ಪುತ್ತಿಲ ಜನ ಬೆಂಬಲವನ್ನು ಸಾಭಿತು ಮಾಡಿದೆ.
ಈ ಶಕ್ತಿ ಪ್ರದರ್ಶನದ ಬೆನ್ನಲ್ಲೇ ಬಿಜೆಪಿ ಲೆಕ್ಕಾಚಾರ ಆರಂಭಿಸಿದೆ. 20 ರಂದು ತಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಇದ್ದು ಅತೀ ಹೆಚ್ಚು ಜನರನ್ನು ಸೇರಿಸುವ ರಣತಂತ್ರ ಹೆಣೆಯುತ್ತಿದೆ. ಇನ್ನು ಕಾಂಗ್ರೆಸ್ ನಾಳೆ ನಾಮಪತ್ರ ಸಲ್ಲಿಸಲಿದ್ದು, ಅಶೋಕ್ ರೈ ಜನ ಸೇರಿಸಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಪುತ್ತಿಲ ಪಕ್ಷೇತರ ಸ್ಪರ್ಧೆ ಬಿಜೆಪಿ ಹಾಗೂ ಕೈ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದಂತ್ತು ಸುಳ್ಳಲ್ಲ, ಒಬ್ಬ ಪಕ್ಷೇತರ ಅಭ್ಯರ್ಥಿ ಪುತ್ತೂರಿನಲ್ಲಿ ಇದೇ ಮೊದಲಬಾರಿ ಇಷ್ಟು ಸೌಂಡ್ ಮಾಡಿದ್ದು, ಎನ್ನಲಾಗುತ್ತಿದೆ. ಕೆಲವು ರಾಷ್ಟ್ರೀಯ ಮಾಧ್ಯಮಗಳಂತೂ ಪುತ್ತಿಲ ಬಿಜೆಪಿ ಅಭ್ಯರ್ಥಿ ಎಂದೇ ಘೋಷಣೆ ಮಾಡಿದ್ದು, ಮೆರವಣಿಗೆಯ ಯಶಸ್ಸುನ್ನು ಎತ್ತಿ ತೋರಿಸುತ್ತದೆ.