Friday, January 24, 2025
ಪುತ್ತೂರುಸುದ್ದಿ

ಪುಣಚದಲ್ಲಿ ತಲೆ ಎತ್ತಿದ ಮುಸ್ಲಿಂ ವ್ಯಕ್ತಿಯ ಅಕ್ರಮ ಗೋ ಫಾರ್ಮ್; ಪಿಡಿಓ ರವಿ ವಿರುದ್ಧ ಪ್ರಕರಣ ದಾಖಲು- -ಕಹಳೆ ನ್ಯೂಸ್

ವಿಟ್ಲ: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಚಡ್ಕ ಬೈರಿಕಟ್ಟೆ ಎಂಬಲ್ಲಿ ಗೋ ಫಾರ್ಮ್ ಎಂಬ ನೆಪದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಅಕ್ರಮ ಕಟ್ಟಡವೊಂದು ನಿರ್ಮಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯರ ವ್ಯಾಪಕ ವಿರೋಧದ ನಡುವೆಯೂ ಶೇಕಡಾ 70 ರಷ್ಟು ಕೆಲಸ ಪೂರ್ತಿಗೊಂಡಿದೆ.
ಇದು ಕೇರಳ ಗಡಿಗೆ ಹೊಂದಿಕೊಂಡು ಇದ್ದುದರಿಂದ ಇಲ್ಲಿನ ಪರವಾನಿಗೆಯ ಮೂಲಕ ಕೇರಳ ಕಸಾಯಿಖಾನೆಗೆ ಅಕ್ರಮ ಗೋಸಾಗಾಟ ನಡೆಸುವ ಸಾಧ್ಯತೆ ಹೆಚ್ಚಿದ್ದು ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪುಣಚ ಗ್ರಾಮ ಪಂಚಾಯತ್ ಹಾಗೂ ಪಿ ಡಿ ಓ ಗೆ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸ್ಥಳೀಯರನ್ನು ಮತ್ತಷ್ಟು ಕೆರಳಿಸಿದೆ.

ಸದ್ಯ ಪಿಡಿಓ ರವಿ ವಿರುದ್ಧ ಹಾಗೂ ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಲೋಕಯುಕ್ತರಿಗೆ ದೂರು ನೀಡಲಾಗಿದೆ.

ಕಟ್ಟಡದ ಎಲ್ಲಾ ಕೆಲಸ ಪೂರ್ತಿಗೊಂಡ ನಂತರ ಪುಣಚ ಗ್ರಾಮ ಪಂಚಾಯತ್ ವಾಣಿಜ್ಯ ಕಟ್ಟಡದ ಪರವಾನಿಗೆ ನೀಡಿದೆ.

ಅಲ್ಲದೆ ಕಟ್ಟಡದ ಕಂಪೌಂಡ್ ಮತ್ತು ರಸ್ತೆಗೆ ಮಧ್ಯೆ ಕೇವಲ 2ಫೀಟ್ ಜಾಗ ಬಿಟ್ಟಿದ್ದಾರೆ. ಹೈನುಗಾರಿಕೆ ಹೆಸರಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಅಕ್ರಮವಾಗಿ ನಿರ್ಮಿಸುತ್ತಿರುವ ಈ ಕಟ್ಟಡಡಲ್ಲಿ ಗ್ರೀನ್ ಗ್ಯಾಸ್ ಉತ್ಪಾದನೆಯಾಗುವ ಸಂಭವವು ಇದೆ.

9/11 ರ ಪರವಾನಿಗೆ ಪಡೆಯುವುದಕ್ಕೆ ಮುಂಚೆನೇ ಕಟ್ಟಡ ನಿರ್ಮಾಣ ಪೂರ್ತಿಗೊಂಡಿದ್ದು ಇದರಲ್ಲಿ ಪಂಚಾಯತ್ ಅಧಿಕಾರಿಗಳು ಶಾಮಿಲಾಗಿರುವ ಸಾಧ್ಯತೆ ಇದೆ ಹಾಗೂ ಇದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ.