Saturday, November 23, 2024
ಸುದ್ದಿ

Big News : ಸರ್ಕಾರ ವಶಪಡಿಸಿಕೊಂಡಿರುವ ಗೋಕರ್ಣದ ದೇವಸ್ಥಾನವನ್ನು ಪುನಃ ಶ್ರೀ ರಾಮಚಂದ್ರಪುರ ಮಠಕ್ಕೆ ನೀಡದೇ ಇದ್ದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯವ್ಯಾಪಿ ತೀವ್ರ ಆಂದೋಲನದ ಎಚ್ಚರಿಕೆ – ಕಹಳೆ ನ್ಯೂಸ್

ಗೋಕರ್ಣದ ಶ್ರೀ ಮಹಾಭಲೇಶ್ವರ ದೇವಸ್ಥಾನವನ್ನು ರಾಜ್ಯ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಮದ್ಯಂತರ ಆದೇಶದ ವಿರುದ್ಧವಾಗಿ ದೇವಸ್ಥಾನದ ಆಡಳಿತವನ್ನು ವಶಪಡಿಸಿಕೊಳ್ಳುವುದು ಕಾನೂನು ಬಾಹಿರ ಕೃತ್ಯ ಮಾತ್ರವಲ್ಲದೇ, ಅದು ಸರ್ವೋಚ್ಛ ನ್ಯಾಯಾಲಯದ ಅಪಮಾನವಾಗಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

೨೦೦೮ ರಿಂದ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ ಗೋಕರ್ಣದ ಶ್ರೀ ಮಹಾಭಲೇಶ್ವರ ದೇವಸ್ಥಾನದ ಆಡಳಿತವನ್ನು ನಡೆಸಿಕೊಂಡು ಬಂದಿದೆ ಮತ್ತು ಉತ್ತಮ ರೀತಿಯಲ್ಲಿ ದೇವಸ್ಥಾನದ ಅಭಿವೃದ್ಧಿಯೂ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಸರ್ಕಾರದ ಬಳಿ ಕರ್ನಾಟಕದಲ್ಲಿ ೩೪,೦೦೦ಕ್ಕೂ ಅಧಿಕ ದೇವಸ್ಥಾನಗಳು ಇದ್ದು, ಇದರಲ್ಲಿ ಬ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇತ್ತೀಚೆಗೆ ಮುಜರಾಯಿ ಇಲಾಖೆಯ ನಿಯಮಾವಳಿಯ ವಿರುದ್ಧವಾಗಿ ದೇವಸ್ಥಾನದ ೧೨.೫ ಕೋಟಿ ರೂಗಳನ್ನು ಮುಖ್ಯಮಂತ್ರಿಗಳ ನಿಧಿಗೆ ಮನಸ್ಸಿಗೆ ಬಂದಂತೆ ವರ್ಗಾವಣೆ ಮಾಡಲಾಯಿತು. ರಾಜ್ಯ ಸರ್ಕಾರವು ನಡೆಸುವ ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ಮಿತಿಮೀರಿ ನಡೆಯುತ್ತಿದೆ.

ಸರ್ಕಾರವು ನಡೆಸುತ್ತಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ನೂರಾರು ಕೋಟಿ ಮೌಲ್ಯದ ದೇವರ ಅಮೂಲ್ಯ ಆಭರಣಗಳು ಕಾಣೆಯಾಗಿದೆ ಎಂಬ ಪ್ರಕರಣ ಜರುಗಿತು. ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ತುಂಬಿರುವ ಸರ್ಕಾರದಿಂದ ಹಿಂದೂ ದೇವಸ್ಥಾನಗಳ ಉತ್ತಮ ಪ್ರಾಮಾಣಿಕ ಆಡಳಿತ ಮಾಡಲು ಸಾಧ್ಯವೇ? ದಿನದಿಂದ ದಿನಕ್ಕೆ ಸರ್ಕಾರವು ನಡೆಸುತ್ತಿರುವ ದೇವಸ್ಥಾನಗಳ ಸ್ಥಿತಿ ಹದಗೆಡುತ್ತಿದೆ. ಒಟ್ಟಾರೆ ಜಾತ್ಯಾತೀತ ಸರ್ಕಾರ ಕೇವಲ ಹಿಂದೂ ದೇವಸ್ಥಾನಗಳನ್ನು ಮಾತ್ರ ವಶಪಡಿಸಿಕೊಳ್ಳುತ್ತಿದೆ. ಆದರೆ ಅನ್ಯಮತೀಯರ ಧಾರ್ಮಿಕ ಸ್ಥಳಗಳ ವಿಷಯದಲ್ಲಿ ಮೂಗು ತೂರಿಸುವುದಿಲ್ಲ. ಇದು ಹಿಂದೂಗಳ ಮೇಲೆ ಮಾಡಿದ ಅನ್ಯಾಯವಾಗಿದೆ. ಹಾಗಾಗಿ ಸರ್ಕಾರವು ಕೂಡಲೇ ಗೋಕರ್ಣ ಮಹಾಭಲೇಶ್ವರ ದೇವಸ್ಥಾನವನ್ನು ಪುನಃ ಶ್ರೀ ರಾಮಚಂದ್ರಪುರ ಮಠಕ್ಕೆ ನೀಡಬೇಕು ಇಲ್ಲವಾದಲ್ಲಿ ರಾಜ್ಯವ್ಯಾಪಿ ತೀವ್ರ ಆಂದೋಲನ ಮಾಡಲಾಗುವುದು.