Friday, January 24, 2025
ದಕ್ಷಿಣ ಕನ್ನಡಬಂಟ್ವಾಳರಾಜಕೀಯರಾಜ್ಯಸುದ್ದಿ

ಬಂಟ್ವಾಳ ಕ್ಷೇತ್ರದ ಗ್ರಾಮ ಗ್ರಾಮಗಳನ್ನು ತಲುಪಿ ಶಕ್ತಿ ಕೇಂದ್ರದ ಪ್ರಮುಖರ ಜತೆ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸಮಾಲೋಚನೆ – ಕಹಳೆ ನ್ಯೂಸ್

ಬಂಟ್ವಾಳ: ಕಾರ್ಯಕರ್ತರೂ ಯಾವತ್ತೂ ಕೂಡ ನಾಯಕರ ಹಿಂದೆ ಹೋಗದೆ ಪಕ್ಷದ ಹಿಂದೆ ಹೋದಾಗ ಆ ಕ್ಷೇತ್ರದಲ್ಲಿ ಪಕ್ಷ ಗಟ್ಟಿಯಾಗುತ್ತದೆ, ಯಾರೂ ಸ್ಪರ್ಧಿಸಿದರೂ ಗೆಲುವು ನಮ್ಮದಾಗುತ್ತದೆ ಎಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಪ್ರತಿ ಬಾರಿಯೂ ಪಕ್ಷದ ಕುರಿತು ಅಭಿಮಾನದ ಮಾತು ಹೇಳಿ, ಅಭ್ಯರ್ಥಿ ಘೋಷಣೆಗೆ ಮುನ್ನಾ ಬಂಟ್ವಾಳ ಕ್ಷೇತ್ರದ ಎಲ್ಲಾ ಬಿಜೆಪಿ ಶಕ್ತಿ ಕೇಂದ್ರಗಳಿಗೂ ತೆರಳಿ ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಕಾರ್ಯ ಮಾಡಿದ್ದಾರೆ ಎಂದು ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೇವಲ ಒಂದು ವಾರದ ಅಂತರದಲ್ಲಿ ಬಂಟ್ವಾಳದ ಎಲ್ಲ 59 ಗ್ರಾಮಗಳ ಪೈಕಿ 56 ಗ್ರಾಮಗಳನ್ನು ತಲುಪಿ ಶಕ್ತಿ ಕೇಂದ್ರದ ಪ್ರಮುಖರ ಜತೆ ಸಮಾಲೋಚನೆಯನ್ನು ನಡೆಸಿದ್ದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್‌ ಶೆಟ್ಟಿ ಕರ್ಕಳ, ಜಿಲ್ಲೆ, ಕ್ಷೇತ್ರದ ಎಲ್ಲಾ ಪದಾಧಿಕಾರಿಗಳು, ಗ್ರಾಮದ ಪ್ರಭಾರಿ ಸೇರಿದಂತೆ ಎಲ್ಲಾ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯಲ್ಲಿ ಈ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದರು.

ಶಾಸಕ ರಾಜೇಶ್‌ ನಾೖಕ್‌ ಅವರು ಪಕ್ಷವು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದೆ ಯಾವತ್ತೂ ಕೂಡ ತಾನು ಅಭ್ಯರ್ಥಿ ಎಂಬುದನ್ನು ಹೇಳದೆ ಪಕ್ಷ ಯಾರಿಗೆ ಅವಕಾಶ ನೀಡುತ್ತದೋ ಅದರ ಪರವಾಗಿ ಕೆಲಸ ಮಾಡೋಣ ಎಂಬುದನ್ನು ಹೇಳಿ ಪ್ರತಿ ಸಭೆಗಳಲ್ಲೂ ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯ ಮಾಡಿದ್ದರು.
ಅವರೇನೇ ಹೇಳಿದರೂ ಕಾರ್ಯಕರ್ತರು ಮಾತ್ರ ರಾಜೇಶ್‌ ನಾೖಕ್‌ ಅವರೇ ತಮ್ಮ ಅಭ್ಯರ್ಥಿ ಎಂದು ನಿರ್ಧರಿಸಿ ಬಿಟ್ಟಿದ್ದರು. ಅದಕ್ಕೆ ಪೂರಕ ಎಂಬಂತೆ ಶಕ್ತಿಯ ಕೇಂದ್ರದ ಪ್ರಮುಖರ ಅಂತಿಮ ಸಭೆಗಳ ಸಂದರ್ಭ ಪಕ್ಷದ ವರಿಷ್ಠರು ಕೂಡ ಬಂಟ್ವಾಳ ಕ್ಷೇತ್ರಕ್ಕೆ ರಾಜೇಶ್‌ ನಾೖಕ್‌ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಪಕ್ಷ ಸಂಘಟನೆಗಾಗಿ ದುಡಿದ ಕಾರಣಕ್ಕಾಗಿಯೇ ಅವರು ಸರ್ವರ ಅಭ್ಯರ್ಥಿಯಾಗಿ ಮೂಡಿಬಂದಿದ್ದರು ಎಂದರು.

ಪ್ರತಿ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರ ಬೇಡಿಕೆಗಳನ್ನು ಆಲಿಸಿ ನಾವು ಬಂಟ್ವಾಳದಲ್ಲಿ ಪಕ್ಷವನ್ನು ಗಟ್ಟಿಗೊಳಿಸೋಣ. ಮುಂದಿನ ದಿನಗಳಲ್ಲಿ ವಿರೋಧಿಗಳು ಎಷ್ಟೇ ಬಲಿಷ್ಠ ಅಭ್ಯರ್ಥಿಗಳನ್ನು ತಂದರೂ ಬಂಟ್ವಾಳದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ಸ್ಥಿತಿಗೆ ಪಕ್ಷವನ್ನು ತಂದು ನಿಲ್ಲಿಸಬೇಕು ಎಂದು ಪ್ರತಿ ಬಾರಿಯೂ ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯ ಮಾಡುತ್ತಿದ್ದರು.

ಕಷ್ಟ ಸುಖಗಳಿಗೆ ಸ್ಪಂದನೆ
ಶಕ್ತಿ ಕೇಂದ್ರದ ಸಭೆಗಳಲ್ಲಿ ಶಾಸಕ ರಾಜೇಶ್‌ ನಾೖಕ್‌ ಅವರು ಮಾತನಾಡುತ್ತಾ, ಕಳೆದ 5 ವರ್ಷಗಳಲ್ಲಿ ಕ್ಷೇತ್ರದಾದ್ಯಂತ ಸಂಚಾರ ಮಾಡಿ ಜನತೆಯ ಕಷ್ಟ ಸುಖಗಳಿಗೆ ಸ್ಪಂದನೆ ನೀಡುವ ಜತೆಗೆ ಗರಿಷ್ಠ ಪ್ರಮಾಣದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡಿದ್ದೇನೆ. ದೇಶದ ಸಂಸ್ಕೃತಿ, ಧರ್ಮವನ್ನು ಉಳಿಸುವ ಕಾರ್ಯದ ಸಂಜೆ ಶಾಂತಿಯ ಬಂಟ್ವಾಳ ನಿರ್ಮಾಣ ಮಾಡಿದ ತೃಪ್ತಿ ಇದೆ ಎಂದರು.

ಚುನಾವಣೆ ಹತ್ತಿರ ಬರುವಾಗ ಕಾಂಗ್ರೆಸ್‌ಗೆ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರ ನೆನಪಾಗುತ್ತದೆ. ಚುನಾವಣೆಯ ಸಂದರ್ಭ ಅವರ ನಿವಾಸಕ್ಕೆ ಬಂದು ನಾಟಕ ಮಾಡುತ್ತಾರೆ. ಸತ್ಯ, ನ್ಯಾಯದ ಸಾಕಾರಮೂರ್ತಿಯಾಗಿರುವ ರಾಜೇಶ್‌ ನಾೖಕ್‌ ಅವರನ್ನು ಬಂಟ್ವಾಳದಲ್ಲಿ ಮತ್ತೂಮ್ಮೆ ಗೆಲ್ಲಿಸಬೇಕಿದೆ ಎಂದರು.

ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಶಾಸಕ ರಾಜೇಶ್‌ ನಾೖಕ್‌ ಅವರು ಕ್ಷೇತ್ರಕ್ಕೆ ಕೇಳಿದ್ದನ್ನು ನೀಡಿದ ಕಾಮಧೇನುವಾಗಿದ್ದು, ಅವರನ್ನು ಮತ್ತೂಮ್ಮೆ ಗೆಲ್ಲಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.