Thursday, January 23, 2025
ಸುದ್ದಿ

ಕಾಂಗ್ರೆಸ್ ಪಕ್ಷದಿಂದ ಮರಳಿ ಮಾತೃ ಪಕ್ಷಕ್ಕೆ ವಾಪಾಸ್ಸಾದ ಉದಯ ದಂಪತಿ –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎ.17 ರಂದು ಸಂಜೆ ಕಾಂಗ್ರೇಸ್ ಗೆ ಸೇರ್ಪಡೆಗೊಂಡಿದ್ದ ಸಂಗಬೆಟ್ಟು ಗ್ರಾ.ಪಂ.ಬಿಜೆಪಿ ಸದಸ್ಯೆ ಶಾಂತ ಹಾಗೂ ಅವರ ಪತಿ ಉದಯ ಅವರು ಮರಳಿ ಮಾತೃಪಕ್ಷಕ್ಕೆ ವಾಪಾಸು ಆಗಿದ್ದಾರೆ.
ಅವರ ಜೊತೆಯಲ್ಲಿ ಇನ್ನಿಬ್ಬರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಶಾರದ ,ಜಯ ಅವರು ಬಿಜೆಪಿಗೆ ಸೇರ್ಪಡೆ ಮಾಡಲಾಗಿದೆ.
ಶಾರದ ಅವರು ಕಳೆದ ಬಾರಿ ಸಂಗಬೆಟ್ಟು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು .ಅವರು ಪ್ರಸ್ತುತ ಬಿಜೆಪಿ ಅಡಳಿತ ವೈಖರಿ, ಪ್ರಧಾನಿ ಮೋದಿಯವರ ಸಂಘಟನೆ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರ ಅಭಿವೃದ್ಧಿ ಯನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆ ಯಾಗಿದ್ದಾರೆ
ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ಅವರ ಸಮ್ಮುಖದಲ್ಲಿ ಬಿಜೆಪಿ ಧ್ವಜ ಹಾಗೂ ಶಾಲು ನೀಡಿ ಪಕ್ಷಕ್ಕೆ ಬರಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕ್ಷೇತ್ರ ಪ್ರಧಾನಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿಗಳಾದ ಗಣೇಶ್ ರೈ,ಪುರುಷೋತ್ತಮ ಶೆಟ್ಟಿ ವಾಮದಪದವು, ಸೀತಾರಾಮ ಪೂಜಾರಿ, ಪ್ರಮುಖರಾದ ರತ್ನಕುಮಾರ್ ಚೌಟ, ಸತೀಶ್ ಪೂಜಾರಿ, ಮಂದಾರತಿ ಶೆಟ್ಟಿ, ನವೀನ್ ಹೆಗ್ಡೆ, ಉಮೇಶ್ ಗೌಡ, ಗಣೇಶ್ ಕೋಟ್ಯಾನ್, ಭರತ್,ಸತೀಶ್ ಸಂದೇಶ್ ಶೆಟ್ಟಿ, ಮೊಡಂಕಾಪು, ಸಂತೋಷ್ ರಾಯಿಬೆಟ್ಟು, ದಿನೇಶ್ ರಾಯಿ ಮತ್ತಿತರರು ಉಪಸ್ಥಿತರಿದ್ದರು.