Friday, January 24, 2025
ಸುದ್ದಿ

ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ : ಕರ್ನಾಟಕ ಕುಸ್ತಿ ತಂಡಕ್ಕೆ 1 ಚಿನ್ನ, 2 ಕಂಚಿನ ಗರಿ –ಕಹಳೆ ನ್ಯೂಸ್

ಉತ್ತರಪ್ರದೇಶದ ಗೊಂಡಾದಲ್ಲಿ 17 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ನಡೆಯುತ್ತಿದೆ.
ಈ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ಕುಸ್ತಿಪಟುಗಳು ಭಾಗವಹಿಸಿ, ಚಿನ್ನ ಹಾಗೂ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೌದು, ಕರ್ನಾಟಕ ರಾಜ್ಯ ಕುಸ್ತಿ ಪಟುಗಳಾದ, ಶ್ವೇತ ಅಣ್ಣಕೆರಿ ಚಿನ್ನದ ಪದಕ ಗಳಿಸಿದರೆ, ಮನಿಷ ಸಿದ್ದಿ ಹಾಗೂ ಲಕ್ಷ್ಮೀ ಪಾಟೀಲ್ ಕಂಚಿನ ಪದಕಗಳನ್ನು ಗಳಿಸುವ ಮುಖೇನ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಇನ್ನೂ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ, ಬಿ.ಗುಣರಂಜನ್ ಶೆಟ್ಟಿಯವರು ಅಧಿಕಾರ ವಹಿಸಿಕೊಂಡ ನಂತರ, ಇವರ ಅಧ್ಯಕ್ಷತೆಯಲ್ಲಿ ಕುಸ್ತಿ ಪಟುಗಳು ಈ ಸಾಧನೆ ಮಾಡಿರುವುದು ಸಂತಸದ ವಿಷಯವಾಗಿದೆ.
ಕರ್ನಾಟಕ ಕುಸ್ತಿ ತಂಡಕ್ಕೆ ಆಯ್ಕೆಯಾದ ಕುಸ್ತಿಪಟುಗಳ ಪರಿಶ್ರಮದಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟೀಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆದಿರುವುದು ಕರ್ನಾಟಕದ ಹೆಮ್ಮೆಯಾಗಿದೆ.
ಚಾಂಪಿಯನ್ ಶಿಪ್‌ನಲ್ಲಿ ಪದಕಗಳನ್ನು ಗಳಿಸಿದ ಕುಸ್ತಿಪಟುಗಳಿಗೆ ಭಾರತೀಯ ಕುಸ್ತಿ ಸಂಘದ ಅಧ್ಯಕ್ಷರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು, ಕರ್ನಾಟಕದ ಆರೂವರೆ ಕೋಟಿ ಜನತೆಯ ಹಾಗೂ ಎಲ್ಲಾ ಕುಸ್ತಿ ಪಟುಗಳ ಪರವಾಗಿ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿ ರವರು ಪದಕ ತೊಡಿಸಿ ಅಭಿನಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು