Monday, November 25, 2024
ಸುದ್ದಿ

ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ಜಕ್ರಿಬೆಟ್ಟಿನಲ್ಲಿ ವಾಹನಗಳ ವೇಗ ನಿಯಂತ್ರಣ ದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಕೆ -ಕಹಳೆ ನ್ಯೂಸ್

ಬಂಟ್ವಾಳ : ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ಜಕ್ರಿಬೆಟ್ಟಿನಲ್ಲಿ ಬಂಟ್ವಾಳ ಪೇಟೆಯಿಂದ ಆಗಮಿಸಿದ ರಸ್ತೆಯು ಹೆದ್ದಾರಿ ಸೇರುವ ಪ್ರದೇಶವು ಅಪಾಯಕಾರಿಯಾಗಿದ್ದು, ಈಗಾಗಲೇ ಹಲವು ಜೀವಗಳನ್ನು ಬಲಿ ಪಡೆದಿರುವ ಪ್ರದೇಶಕ್ಕೆ ಪ್ರಸ್ತುತ ಪೊಲೀಸ್ ಇಲಾಖೆಯು ವಾಹನಗಳ ವೇಗ ನಿಯಂತ್ರಣದ ದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಸಿದೆ.
ಜಕ್ರಿಬೆಟ್ಟು ಜಂಕ್ಷನ್ ಪ್ರದೇಶದಲ್ಲಿ ಈ ಹಿಂದೆಯೂ ಸಾಕಷ್ಟು ಅಪಘಾತಗಳು ನಡೆದಿದ್ದು, ಎ. 12 ರಂದು ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಬೈಕ್ ಗಳ ಮಧ್ಯೆ ಢಿಕ್ಕಿ ಸಂಭವಿಸಿ ಒಂದು ಬೈಕ್ ಸವಾರ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ಹೊಸ ರಿಫ್ಲೆಕ್ಟರ್‌ಗಳನ್ನು ಒಳಗೊಂಡಂತೆ ಬ್ಯಾರಿಕೇಡ್ ಇಟ್ಟಿದೆ.
ಹೀಗಾಗಿ ಎರಡು ಭಾಗದಿಂದ ತೆರಳುವ ವಾಹನಗಳು ಕೂಡ ವೇಗವನ್ನು ನಿಯಂತ್ರಿಸಿಕೊಂಡು ಬಲಕ್ಕೆ ಬಂದು ಬ್ಯಾರಿಕೇಡ್ ದಾಟಿ ಸಂಚರಿಸಬೇಕಿದೆ. ಇದರಿಂದ ಬಂಟ್ವಾಳ ಪೇಟೆಯಿಂದ ವಾಹನಗಳು ಏಕಾಏಕಿ ಹೆದ್ದಾರಿ ಪ್ರವೇಶಿಸಿದರೂ, ಹೆದ್ದಾರಿಯ ವಾಹನ ನಿಧಾನವಾಗಿ ಚಲಿಸುವುದರಿಂದ ಅಪಘಾತವನ್ನು ತಪ್ಪಿಸಲು ಅನುಕೂಲವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವೈಜ್ಞಾನಿಕತೆಯಿಂದ ಕೂಡಿರುವ ಆರೋಪ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯು ಅಭಿವೃದ್ಧಿಗೊಂಡ ದಿನಿದಿಂದಲೂ ಅಪಘಾತಗಳು ನಡೆದು ಜೀವನ ಹಾನಿ ಸಂಭವಿಸುತ್ತಲೇ ಇದ್ದು, ಜಕ್ರಿಬೆಟ್ಟುನಲ್ಲಿ ಪೇಟೆಯ ರಸ್ತೆ ಹೆದ್ದಾರಿ ಸೇರುವ ಪ್ರದೇಶವು ಅವೈಜ್ಞಾನಿಕತೆಯಿಂದ ಕೂಡಿದೆ ಎಂಬ ಆರೋಪಗಳು ಪ್ರಾರಂಭದಿಂದಲೇ ಹೇಳಿಬರುತ್ತಿದೆ.
ಬಂಟ್ವಾಳ ಪೇಟೆಯಿಂದ ಆಗಮಿಸುವ ವಾಹನಗಳು ಗೊಂದಲಕ್ಕೆ ಒಳಗಾಗಿ ಹೆದ್ದಆರಿ ಪ್ರವೇಶಿಸುತ್ತಿದ್ದು, ಇದರಿಂದ ಅಪಘಾತಗಳು ಪುನರಾವರ್ತನೆಯಾಗುತ್ತಲೇ ಇದೆ. ಈ ಹಿಂದೆ ಸಾಕಷ್ಟು ಅಪಘಾತಗಳು ನಡೆದ ಹಿನ್ನೆಲೆಯಲ್ಲಿ ಶಾಸಕರು, ಹೆದ್ದಾರಿ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ವಾಹನಗಳು ವೇಗ ನಿಯಂತ್ರಣದ ದೃಷ್ಟಿಯಿಂದ ಬಂಟ್ವಾಳ ಬೈಪಾಸ್‌ನಿಂದ ಮಣಿಹಳ್ಳದವರೆಗೂ ಸಾಕಷ್ಟು ಕಡೆ ಥರ್ಮೋ ಫ್ಲಾಸ್ಟ್ಗಳನ್ನು ಅಳವಡಿಸಿದ್ದು, ಆದರೆ ಇದು ಯಾವುದೇ ಪರಿಣಾಮವನ್ನು ಬೀರಿಲ್ಲ.
ಜತೆಗೆ ಪೇಟೆಯ ರಸ್ತೆ ಸೇರುವಲ್ಲಿ ಅಪಾಯವನ್ನು ಎಚ್ಚರಿಸುವ ಸಿಗ್ನಲ್ ಲೈಟ್ ಕೂಡ ಅಳವಡಿಸಲಾಗಿದ್ದು, ಅದರಿಂದ ಯಾವುದೇ ಪ್ರಗತಿ ಕಾಣದೆ ಅಪಘಾತಗಳು ಹಿಂದಿನಂತೆ ಮುಂದುವರಿದಿತ್ತು. ಇದೀಗ ಪೊಲೀಸ್ ಇಲಾಖೆಯು ಬ್ಯಾರಿಕೇಡ್‌ಗಳನ್ನು ಇಟ್ಟಿದ್ದು, ವಾಹನಗಳು ನಿಯಂತ್ರಣದಲ್ಲಿರಬೇಕಾದರೆ ಶಾಶ್ವತವಾಗಿ ಅದು ಹೀಗೆ ಇರಬೇಕಿದೆ.