Wednesday, January 22, 2025
ಉಡುಪಿರಾಜಕೀಯಸುದ್ದಿ

ಹೆಬ್ರಿಯಲ್ಲಿ ಗೋಪಾಲ ಭಂಡಾರಿ ಪ್ರತಿಮೆ ನಿಮಾ೯ಣಕ್ಕೆ ನನ್ನ ಮೊದಲ ಆದ್ಯತೆ ; ಕಾಂಗ್ರೆಸ್ ಕಾಯ೯ಕತ೯ರ ಸಭೆಯಲ್ಲಿ ಕಾಕ೯ಳ ವಿಧಾನ ಸಭಾ ಕೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ – ಕಹಳೆ ನ್ಯೂಸ್

ಹೆಬ್ರಿ: ಸಜ್ಜನ ಪ್ರಾಮಾಣಿಕ ರಾಜಕಾರಣಿಯಾದ ಕಾಂಗ್ರೆಸ್ ಪಕ್ಷವನ್ನು ಮುನ್ನೆಡಿಸಿ ಕಾಕ೯ಳ ಜನರ ಮನಸ್ಸಿನಲ್ಲಿ ಉಳಿದ ಧೀಮಂತ ನಾಯಕ ದಿ.ಗೋಪಾಲ ಭಂಡಾರಿಯವರ ಪ್ರತಿಮೆ ನಿಮಾ೯ಣಕ್ಕೆ ನನ್ನ ಮೊದಲ ಆದ್ಯತೆ ಎಂದು ಕಾಕ೯ಳ ವಿಧಾನ ಸಭಾ ಕೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಎ.18 ರಂದು ಹೆಬ್ರಿ ಮೇಲ್ಪೇಟೆ ದಿ.ಪ್ರಸನ್ನ ಬಲ್ಲಾಳ ಅವರ ನಿವಾಸದಲ್ಲಿ ನೂತನವಾಗಿ ಆರಂಭಗೊಂಡ ಚುನಾವಣಾ ಪ್ರಚಾರ ಕಚೇರಿಯಲ್ಲಿ ಕಾಂಗ್ರೆಸ್ ಕಾಯ೯ಕತ೯ರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಯಾವುದೇ ಆಡಂಬರ ಇಲ್ಲ ಅಬ್ಬರದ ಪ್ರಚಾರ,ಸದ್ದು ಗದ್ದಲದಿಂದ ಮಾತ್ರ ಅಭಿವೃದ್ಧಿಯಲ್ಲ.ಸತ್ಯ ಧಮ೯,ಪ್ರಮಾಣಿಕತೆ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುವುದು ಮುಖ್ಯ.ಈ ಬಾರಿ ಕಾಕ೯ಳ ಜನ ಬದಲಾವಣೆ ಬಯಸಿದ್ದಾರೆ ಎನ್ನುವುದು ಜನಬೆಂಬಲದಿಂದ ಗೊತ್ತಾಗುತ್ತಿದೆ.ಒಂದು ಬಾರಿ ಅವಕಾಶ ಕೊಡಿ.ಅಭಿವೃದ್ಧಿ ಏನು ಎಂಬುವುದನ್ನ ಮಾಡಿ ತೋರಿಸುತ್ತೇನೆ.ಈಗಾಗಲೇ ನಿಮ್ಮೆಲ್ಲ ಆಶೀರ್ವಾದ ಹಾಗೂ ಕಾಕ೯ಳ ಕಾಂಗ್ರೆಸ್ ನ ಹಿರಿಯರ ಮಾಗ೯ದಶ೯ನಲ್ಲಿ ಯಾವುದು ಆಡಂಬರವಿಲ್ಲದೆ ನಾಮಪತ್ರ ಸಲ್ಲಿಸಿದ್ದೇನೆ ಎಂದರು.

ಸತ್ಯ ಧಮ೯ದ ಮತಯಾಚನೆ
ಸತ್ಯ ಧಮ೯ ನ್ಯಾಯವನ್ನು ಮುಂದಿಟ್ಟು ಮಾತವನ್ನು ಯಾಚನೆ ಮಾಡುತ್ತೇನೆ ವಿನ; ಹಣ ನೀಡಿ ಆಸೆ ಅಮಿಷಗಳನ್ನು ಒಡ್ಡಿ ಅಲ್ಲ. ಅಭ೯ಟ ಹಾಕಿ ಬಣ್ಣ ಬಣ್ಣದ ಅಲಂಕಾರ ಮಾಡಿ ದುಂದುವೆಚ್ಚ ಮಾಡುವ ಬದಲು ಜನರ ಸಮಸ್ಯೆ ಸ್ಪಂದಿಸಿ ಪ್ರೀತಿಯಿಂದ ಮಾತನಾಡಿಸುವುದೇ ಜನಪ್ರತಿನಿಧಿಯಾದವರ ಮೊದಲ ಕತ೯ವ್ಯ ಎಂದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇಪ೯ಡೆ
ಇದೇ ಸಂದರ್ಭದಲ್ಲಿ ಬಿಜೆಪಿಯ ಸಕ್ರಿಯ ಕಾಯ೯ಕತ೯ರಾದ ಚಾರ ಮೇಲಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ,ಬಾವಿ ಗದ್ದೆ ಮಿಥುನ್ ಶೆಟ್ಟಿ ,ಇಂದಿರಾ ನಗರ ದ ಸಧಾಶಿವ ಆಚಾರ್ಯ, ನಾಡ್ಪಾಲು ಉಮೇಶ ಶೆಟ್ಟಿ.,ಚಾರ ಇಂದಿರಾ ನಾಯ್ಕ್ ಮಗ ಮಹೇಶ್,ಶಿವಪುರ ನಾಗರಾಜ ಪೂಜಾರಿ,ಚಾರ ಕೆರೆಬೆಟ್ಟು ಸುರೇಶ್ ರಾವ್ ಕಾಂಗ್ರೆಸ್ ಸೇಪ೯ಡೆಗೊಂಡರು.

ಸಮಾರಂಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ ಅಲೆವೂರು, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ,ಕಾಂಗ್ರೆಸ್ ಪಕ್ಷದ ಪ್ರಮುಖರಾದ ದಿವಾಕರ ಕುಂದರ್,ನರಸಿಂಹ ಮೂತಿ೯,ಮುರುಳಿ ಶೆಟ್ಟಿ ,ದಿನೇಶ್ ಅಮೀನ್, ಶೇಖರ ಮಡಿವಾಳ,ರಾಘವ ದೇವಾಡಿಗ ,ರಂಜಿನಿ ಹೆಬ್ಬಾರ್,ದಿನೇಶ್ ಶೆಟ್ಟಿ ,ಭೂತುಗುಂಡಿ ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಹೆಬ್ರಿ ಬ್ಲಾಕ್ ಕಾಯ೯ದಶಿ೯ ಜನಾರ್ಧನ್ ಸ್ವಾಗತಿಸಿ,ಪ್ರಚಾರ ಸಮಿತಿ ಅಧ್ಯಕ್ಷ ನವೀನ್ ಅಡ್ಯಂತಾಯ ಕಾಯ೯ಕ್ರಮ ನಿರೂಪಿಸಿ,ಬ್ಲಾಕ್ ಪ್ರಭಾರ ಅಧ್ಯಕ್ಷ ಚಂದ್ರಶೇಖರ್ ಬಾಯರಿ ವಂದಿಸಿದರು.