Thursday, January 23, 2025
ಸುದ್ದಿ

“ಕಾಂಗ್ರೆಸ್ ಪಕ್ಷದವರು ಹೆಲಿಕಾಪ್ಟರ್‌ನಲ್ಲಿ ದುಡ್ಡು ಕಳಿಸಿರುವುದನ್ನು ಮರೆತಿರಬಹುದು”; ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ –ಕಹಳೆ ನ್ಯೂಸ್

ಅಣ್ಣಮಲೈ ಹೆಲಿಕಾಪ್ಟರ್‌ನಲ್ಲಿ ದುಡ್ಡು ತಂದಿದ್ದಾರೆ ಎಂಬ ಸೊರಕೆ ಆರೋಪಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ತಿರುಗೇಟನ್ನು ನೀಡಿದ್ದಾರೆ. ಉಡುಪಿಯಲ್ಲಿ ಮಾತಾನಾಡಿದ ಇವರು, ಸೊರಕೆಯವರು ವಿಚಲಿತರಾಗಿ ಮಾತನಾಡುತ್ತಿದ್ದಾರೆ. ಅವರ ಪಕ್ಷದವರು ಹೆಲಿಕಾಪ್ಟರ್‌ನಲ್ಲಿ ದುಡ್ಡು ಕಳಿಸಿರುವುದನ್ನು ಮರೆತಿರಬಹುದು. ಅದ್ರೆ ಸಿದ್ದರಾಮಯ್ಯ ಇರುವಾಗ ದೆಹಲಿಗೆ ಯಾವ ರೀತಿ ದುಡ್ಡು ಹೋಗುತ್ತಿದೆ ಎಂಬ ಪಟ್ಟಿಯೇ ಬಂದಿತ್ತು. ಅದಲ್ಲದೇ ಅವರದ್ದೇ ಪಕ್ಷದ ಮಂಜುನಾಥ್ರ ಪೂಜಾರಿ ಕೂಡಾ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಡಿಕೆಶಿಗೆ ಹಣ ಕೊಟ್ಟು ಟಿಕಟ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಜೊತೆಗೆ ಸೊರಕೆ ಜಿಲ್ಲೆಯಲ್ಲಿ ಕಾಂಗ್ರೆಸ್‌ನ್ನು ಮುಗಿಸುತ್ತಾರೆ ಎಂದು ಹೇಳಿದ್ರು. ಸೊರಕೆಯವರು ಮೊದಲು ಇದಕ್ಕೆ ಉತ್ತರಿಸಲಿ, ಆ ಬಳಿಕ ಬಿಜೆಪಿ ಕುರಿತು ಮಾತನಾಡಲಿ ಎಂದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು