Thursday, January 23, 2025
ಸುದ್ದಿ

ಯಶಸ್ವಿಯಾಗಿ ನಡೆದ “ಸಂಸ್ಕಾರ ಸೌರಭ” ಮಕ್ಕಳ ಹಬ್ಬ ಶಿಬಿರ –ಕಹಳೆ ನ್ಯೂಸ್

ಸಂಸ್ಕಾರ ಭಾರತೀ, ಬಂಟ್ವಾಳ ಇದರ ಆಶ್ರಯದಲ್ಲಿ ಸಾಲೆತ್ತೂರಿನ ನವಚೇತನ ಯುವಕ ಮಂಡಲದ ವಠಾರದಲ್ಲಿ ಸಂಸ್ಕಾರ ಸೌರಭ ಮಕ್ಕಳ ಹಬ್ಬವು ಯಶಸ್ವಿಯಾಗಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆ ಮಕ್ಕಳ ಹಬ್ಬದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆದಿದೆ.

ಶಿಬಿರದಲ್ಲಿ ಮಕ್ಕಳಿಗೆ ನಾರ್ಶ ಮೈದಾನ ಪ್ರೌಢಶಾಲೆಯ ಅಧ್ಯಾಪಕರಾದ ಗೋಪಾಲ ಕೃಷ್ಣ ನೇರಳಕಟ್ಟೆ ಅವರು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಅಗತ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ರಾಯಿ ಶಾಲೆಯ ಮುಖ್ಯೋಪಾಧ್ಯಾಯ ರಾದ ಜಯರಾಮ ಪಡ್ರೆಯವರು ಕಥೆಯನ್ನು ಕಾವ್ಯವಾಗಿ ವರ್ಣನೆ ಮಾಡುವುದರ ಕುರಿತು ಮಕ್ಕಳಿಗೆ ಉದಾಹರಣೆಸಹಿತವಾಗಿ ತಿಳಿಸಿದ್ದು, ನಂತರದಲ್ಲಿ ಸದಾಶಿವ ಕಡಂಬಾರ್‌ರವರು ಭಗವದ್ಗೀತೆ ವಾಚನ ತರಬೇತಿ ನೀಡಿದ್ರು.

ಮಕ್ಕಳ ಹಬ್ಬದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆದಿದ್ದು, ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ,ದ.ಕ ದ ಅಧ್ಯಕ್ಷರಾದ ತಾರಾನಾಥ ಕೊಟ್ಟಾರಿಯವರು ವಹಿಸಿದ್ರು.

ಮುಖ್ಯ ಅತಿಥಿಗಳಾಗಿ ಸಂಸ್ಕಾರ ಭಾರತೀ ,ದ.ಕ ಜಿಲ್ಲೆಯ ಗೌರವಾಧ್ಯಕ್ಷರಾದ ಸರಪಾಡಿ ಅಶೋಕ ಶೆಟ್ಟಿ, ಉದ್ಯಮಿಗಳಾದ ಉದಯ ಕುಮಾರ್ ರೈ ಅಗರಿ, ಜಾಗತಿಕ ಬಂಟರ ಸಂಘದ ಕಾ.ಸ.ಯ ಸದಸ್ಯರಾದ ಅಮರೇಶ್ ಶೆಟ್ಟಿ ತಿರುವಾಜೆ, ನವಚೇತನ ಯುವಕ ಮಂಡಲದ ಅಧ್ಯಕ್ಷರಾದ ಸೇಸಪ್ಪ ಪೂಜಾರಿ ಮಾವೆ, ಬಂಟರ ಸಂಘ ಬಂಟ್ವಾಳದ ಜೊತೆ ಕಾರ್ಯದರ್ಶಿಯವರಾದ ಪ್ರತಿಭಾ ಎ.ರೈ ಪಾಣೆಮಂಗಳೂರು, ಸದಾಶಿವ ಕಡಂಬಾರ್, ಸಂಸ್ಕಾರ ಭಾರತೀ ಬಂಟ್ವಾಳದ ಉಪಾಧ್ಯಕ್ಷರಾದ ಡಾ| ವಾರಿಜಾ ನಿರ್ಬೈಲ್ ಉಪಸ್ಥಿತರಿದ್ದರು.

ಕು| ತನ್ವಿ ರೈ ಕೊಲ್ಲಾಡಿ ಪ್ರಾರ್ಥನೆ ಹಾಗೂ ಆಶಯ ಗೀತೆಯನ್ನು ಡಾ| ವಾರಿಜಾ ನಿರ್ಬೈಲ್ ನೆರವೇರಿಸಿದರು. ಸವಿತಾ ಗಂಗಾಧರ ಶೆಟ್ಟಿ, ಪುಂಚಿಲರವರು ಸ್ವಾಗತಿಸಿದ್ದು, ಜಯಶ್ರೀ ಗಣೇಶ್ ಶೆಟ್ಟಿ ಬಾರೆಬೆಟ್ಟು ವಂದಿಸಿದರು. ಲಕ್ಷ್ಮೀ ರಾಜೇಶ್ ಆಚಾರ್ಯ ಕುಕ್ಕಾಜೆಯವರು ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.