Saturday, November 23, 2024
ಸುದ್ದಿ

Breaking News : ರವೀಷ ತಂತ್ರಿಯವರ ಸಹವರ್ತಿ, ಕಾಸರಗೋಡು ಹಿಂದೂ ಐಕ್ಯ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಉಡುಪ ವಿರುದ್ಧ ಮತೀಯ ಗೂಂಡಾಶೀಟ್ ತೆರೆಯಲು ಮುಂದಾದ ಎಸ್ಪಿ ರವಿಕಾಂತೇಗೌಡ ಕ್ರಮಕ್ಕೆ ವ್ಯಾಪಕ ಖಂಡನೆ – ಕಹಳೆ ನ್ಯೂಸ್

ವಿಟ್ಲ, ಸೆ 22 : ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಇತ್ತೀಚೆಗೆ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವೊಂದರಲ್ಲಿ ಇಸ್ಲಾಂ ಧರ್ಮದ ಬಗ್ಗೆ ನಿಂದನೆ ಹಾಗೂ ಕೋಮು ಪ್ರಚೋದನಾತ್ಮಕ ಭಾಷಣ ಮಾಡಿರುವ ಕಾಸರಗೋಡ್ ಹಿಂದೂ ಐಕ್ಯ ವೇದಿಕೆಯ ಮುಖಂಡನನ್ನು ವಿಟ್ಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಸರಗೋಡು ಬಿಜೆಪಿ ಪ್ರಮುಖ ರವೀಷ ತಂತ್ರಿಯವರ ಸಹವರ್ತಿ, ಕಾಸರಗೋಡ್ ಹಿಂದೂ ಐಕ್ಯ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಉಡುಪ (32) ಬಂಧಿತ ಆರೋಪಿ.
ಈತ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದು, ಸೆ.19ರಂದು ನ್ಯಾಯಾಲಯದಿಂದ ಜಾಮೀನು ಪಡೆದು ಠಾಣೆಗೆ ಹಾಜರಾದವನನ್ನು ದಸ್ತಗಿರಿ ಮಾಡಲಾಗಿದೆ. ಈತನ ವಿರುದ್ಧ ಮತೀಯ ಗೂಂಡಾಶೀಟ್ ತೆರೆಯಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ರವಿಕಾಂತೇಗೌಡ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲ ಠಾಣಾ ವ್ಯಾಪ್ತಿಯ ಕಡಂಬು ಗ್ರಾಮದಲ್ಲಿ ಸೆ. 9ರಂದು ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಖಾಸಗಿ ಜಾಗದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಕೇರಳದ ಕಾಸರಗೋಡು ಜಿಲ್ಲಾ ಹಿಂದೂ ಐಕ್ಯವೇಧಿ ಕಾರ್ಯದರ್ಶಿ ಮಂಜುನಾಥ ಉಡುಪ ಯಾನೆ ಪುಷ್ಪರಂಗ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ದಿಕ್ಸೂಚಿ ಭಾಷಣದಲ್ಲಿ ಅನ್ಯಧರ್ಮದವರನ್ನು ಹೀಯಾಳಿಸಿ, ಕೋಮು ಪ್ರಚೋಧನಕಾರಿಯಾಗಿ ಭಾಷಣ ಮಾಡಿದ್ದಾನೆ. ಅಲ್ಲದೆ, ಈ ಕಾರ್ಯಕ್ರಮಕ್ಕೆ ಅನುಮತಿ ಪಡೆಯದೆ ಧ್ವನಿವರ್ಧಕವನ್ನು ಉಪಯೋಗಿಸಿದ್ದು, ಈ ಕುರಿತು ಭಾಷಣ ಮಾಡಿದ ಮಂಜುನಾಥ ಉಡುಪ, ಕಾರ್ಯಕ್ರಮದ ಸಂಘಟಕ ಚೇತನ್ ಪೆಡಿಮಲೆ, ನಿರೂಪಕ ಭಾಸ್ಕರ್ ಟೇಲರ್ ಮತ್ತು ವೇದಿಕೆ ಮೇಲೆ ಹಾಜರಿದ್ದ ಸುರೇಶ ಕೊಟ್ಟಾರಿ, ವರದರಾಜ ಕೊಟ್ಟಾರಿ, ಬಿ.ಕೆ ಕೃಷ್ಣಪ್ಪ ಸಾಲಿಯಾನ, ರಮೇಶ ಪೂಜಾರಿ ಎಂಬವರ ವಿರುದ್ಧ ಕಡಂಬು ಜುಮಾ ಮಸೀದಿಯ ಆಡಳಿತ ಸಮಿತಿ ಈ ದೂರು ನೀಡಿದ್ದರು.

ಪ್ರಕರಣ ದಾಖಲಾದ ದಿನದಿಂದ ಆರೋಪಿತರೆಲ್ಲರೂ ತಲೆ ಮರೆಸಿಕೊಂಡಿದ್ದು, ಮಂಜುನಾಥ ಉಡುಪ ಮತ್ತು ಬಿ.ಕೆ ಕೃಷ್ಣಪ್ಪ ಸಾಲಿಯಾನ ಎಂಬವರನ್ನು ಹೊರತು ಪಡಿಸಿ ಉಳಿದ ಆರೋಪಿಗಳು ಸೆ. 11ರಂದು ನ್ಯಾಯಾಲಯದಲ್ಲಿ ಜಾಮೀನು ಪಡೆದು ಠಾಣೆಗೆ ಹಾಜರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಂಜುನಾಥ ಉಡುಪ ಪತ್ತೆಗೆ ಕೇರಳದ ಕಾಸರಗೋಡು ಜಿಲ್ಲೆಯ ಅದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳ್ಳೇರಿಯಾ, ಗಾಡಿಗುಡ್ಡೆ, ಕುಂಟಾರು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಈತನು ಕಣಿಯೂರು ಮಠ ಶಾಖೆ ಗಾಡಿಗುಡ್ಡೆ ಮೇಲ್ವಿಚಾರಕನಾಗಿ ಕೆಲಸ ಮಾಡಿಕೊಂಡಿದ್ದು, ಈತನ ಮೇಲೆ ಅದೂರು ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

ಆದರೆ, ಈಗ ರವಿಕಾಂತೇ ಗೌರ ಅವರ ಈ ಕ್ರಮಕ್ಕೆ ಜಿಲ್ಲೆಯಾದ್ಯಂತ ಹಿಂದೂ ಸಂಘಟನೆಗಳು  ವ್ಯಪಕ ವಿರೋಧ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದೆ.