Thursday, January 23, 2025
ಸುದ್ದಿ

ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ವಶಕ್ಕೆ ಪಡೆದ ಬಂಟ್ವಾಳ ಪೊಲೀಸರು – ಕಹಳೆ ನ್ಯೂಸ್

ಬಂಟ್ವಾಳ: ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಖಚಿತ ಮಾಹಿತಿಯನ್ವಯ ಬಂಟ್ವಾಳ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿ, ಎರಡು ಜಾನುವಾರುಗಳನ್ನು ರಕ್ಷಿಸಲಾಗಿದೆ. ಆರೋಪಿ ಕಾರಾಜೆಯ ಪ್ರದೀಪ್ ಸಿಕ್ವೇರ ಚಲಾಯಿಸುತ್ತಿದ್ದ ಪಿಕಪ್ ನಲ್ಲಿ ಎರಡು ಜಾನುವಾರುಗಳಿದ್ದು, ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಬಿ.ಸಿ.ರೋಡ್ ನ ನಾರಾಯಣಗುರು ವೃತ್ತದ ಸಮೀಪ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ವಿಶೇಷ ಪತ್ತೆ ತಂಡ ಕಾರ್ಯಾಚರಣೆ ನಡೆಸಿದೆ. ಈ ಸಂಬಂಧ ಕಾರಾಜೆಯ ಪ್ರದೀಪ್ ಸಿಕ್ವೇರ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ಸೂಚನೆಯಂತೆ ಉಪನಿರೀಕ್ಷಕರಾದ ರಾಮಕೃಷ್ಣ, ಎಚ್.ಸಿ.ಗಳಾದ ಮನೋಹರ, ಜಯಕುಮಾರ್, ಪಿಸಿಗಳಾದ ಜಮೀರ್ ಮತ್ತು ರಂಗನಾಥ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.