Thursday, January 23, 2025
ಸುದ್ದಿ

ಆಕಸ್ಮಿಕವಾಗಿ ಕಾಲು ಜಾರಿ ನೇತ್ರಾವತಿ ನದಿಗೆ ಬಿದ್ದು ಮಹಿಳೆ ಮೃತ್ಯು –ಕಹಳೆ ನ್ಯೂಸ್

ಬಂಟ್ವಾಳ : ಬಟ್ಟೆ ತೊಳೆಯಲು ನದಿಗೆ ಹೋಗಿದ್ದ ಮಹಿಳೆಯೋರ್ವಳು ನೇತ್ರಾವತಿ ನದಿಯಲ್ಲಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಎ.19 ರಂದು ಸಂಜೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬರಿಮಾರು ಗ್ರಾಮದ ಬುರ್ದು ನಿವಾಸಿ ರಾಮಕ್ಕು (58) ಮೃತಪಟ್ಟ ಮಹಿಳೆ. ಬಡ ಕುಟುಂಬದ ಮಹಿಳೆ ಇವರಾಗಿದ್ದು, ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದರು.

‌‌ನೇತ್ರಾವತಿ ನದಿಯ ಬದಿಯಲ್ಲಿ ಇವರ ಮನೆಯಿದ್ದು,ಬಟ್ಟೆ ತೊಳೆಯುವ ಉದ್ದೇಶದಿಂದ ನದಿ ಇಳಿದವರು ಆಯತಪ್ಪಿ ಆಳವಾದ ಜಾಗದಲ್ಲಿ ನೀರಿಗೆ ಜಾರಿ ಬಿದ್ದು ಮೃತಪಟ್ಟಿರಬೇಕು ಎಂದು ಸಂಶಯಿಸಲಾಗಿದೆ.

‌‌ ಬಂಟ್ವಾಳ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಬೇಟಿ‌ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಶಿಪ್ಟ್ ಮಾಡುವ ವ್ಯವಸ್ಥೆ ಮಾಡಿದ್ದಾರೆ.