ಯಾವುದೇ ಸಂಘರ್ಷವಿಲ್ಲದ ಶಾಂತಿಯುತ ಬಂಟ್ವಾಳದ ನಿರ್ಮಾಣಕ್ಕಾಗಿ ಬಿಜೆಪಿಗೆ ಮತ ನೀಡಿ; ರಾಜೇಶ್ ನಾಯ್ಕ್ ಉಳಿಪಾಡಿಗುತ್ತು –ಕಹಳೆ ನ್ಯೂಸ್
ಬಂಟ್ವಾಳ ತಾಲೂಕಿನ ಕೊಳ್ನಾಡು, ಮಂಚಿ ಮತ್ತು ಸಾಲೆತ್ತೂರು ಗ್ರಾಮಗಳಲ್ಲಿ ಪ್ರಮುಖರ ಮನೆಗಳಿಗೆ ಹಾಗೂ ಎಸಿ ಕಾಲೋನಿಗಳಿಗೆ ಬೇಟಿ ನೀಡಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಮತಯಾಚಿಸಿದರು.
ಮತದಾರರಿಗೆ ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಮಾಡಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಶಾಸಕರು ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರಮುಖ ಯೋಜನೆಗಳ ಬಗ್ಗೆ ತಿಳಿಸಿದರು. ಬಂಟ್ವಾಳ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಯಾವುದೇ ಸಂಘರ್ಷವಿಲ್ಲದೆ, ಸರ್ವರಿಗೂ ಸಮಾನವಾದ ರೀತಿಯಲ್ಲಿ ನ್ಯಾಯ ಒದಗಿಸುವ ಆಡಳಿತ ನಡೆಸಿದ್ದೇನೆ. ಮುಂದಿನ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಜೊತೆ ಶಾಂತಿಯ ಬಂಟ್ವಾಳವನ್ನು ಮುಂದುವರಿಸಿಕೊAಡು ಹೋಗಲು ಅವಕಾಶ ನೀಡಬೇಕು. ನೀವು ನೀಡಿದ ಪ್ರತಿಯೊಂದು ಮತಕ್ಕೂ ಗೌರವ ಸಿಗುವುದರ ಜೊತೆಗೆ ನಿಮ್ಮ ಧ್ವನಿಯಾಗುತ್ತೇನೆ ಎಂದರು.
ಈ ಸಂದರ್ಭ ಪ್ರಮುಖರಾದ ಮಾಧವ ಮಾವೆ, ಪುಷ್ಪರಾಜ್ ಚೌಟ, ಶಿವಪ್ರಸಾದ್ ಶೆಟ್ಟಿ, ರಾಜರಾಮ್ ಹೆಗ್ಡೆ ಕುದ್ರಿಯ, ವಿಶ್ವನಾಥ ಪೂಜಾರಿ ಕಟ್ಟತ್ತಿಲ, ಅಭಿಷೇಕ್ ರೈ, ಲೋಹಿತ್ ಕೆಳಗಿನ ಅಗರಿ, ಹರೀಶ್ ಟೈಲರ್, ಪ್ರಶಾಂತ್ ಶೆಟ್ಟಿ ಅಗರಿ, ಸುಧಾಕರ ಕಾಡುಮಠ, ನಾರಾಯಣ ಶೆಟ್ಟಿ ಕುಲ್ಯಾರು, ಶಂಕರ್ ಟೈಲರ್, ಕೃಷ್ಣ ಪ್ರಸಾದ್ ಶೆಟ್ಟಿ, ಆನಂದ ಪೂಜಾರಿ, ನಾಗರಾಜ ಆಳ್ವ, ಪಾಪಣ್ಣ, ಗಂಗಾಧರ ಆಚಾರ್ಯ, ಮೋಹನದಾಸ್ ಹೆಗ್ಡೆ, ಪುಷ್ಪ ಕಾಮತ್, ವಿಜಯ ಪ್ರಭು, ಪ್ರಮೀಳಾ, ಗಣೇಶ್ ಐತಾಳ್, ಕೇಶವ ರಾವ್ ಮಂಚಿ, ಪ್ರಭಾಕರ ರೈ, ಕೃಷ್ಣಪ್ಪ. ಪುಷ್ಪರಾಜ್, ರಾಜೇಶ್ ಮೊದಲಾದವರು ಜೊತೆಗಿದ್ದರು.