Recent Posts

Friday, November 22, 2024
ಅಂತಾರಾಷ್ಟ್ರೀಯಸುದ್ದಿ

ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡ ಎಲಾನ್ ಮಸ್ಕ್ ಸ್ಪೇಸ್‌ಎಕ್ಸ್ ರಾಕೆಟ್ – ಕಹಳೆ ನ್ಯೂಸ್

ಟೆಕ್ಸಾಸ್: ಉದ್ಯಮಿ ಎಲಾನ್​ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ನಿರ್ಮಿಸಿದ ಜಗತ್ತಿನ ಅತಿದೊಡ್ಡ ರಾಕೆಟ್ ಸ್ಪೇಸ್ಎಕ್ಸ್ನ ರಾಕೆಟ್ ಗುರುವಾರ ಪ್ರಾಯೋಗಿಕ ಉಡಾವಣೆಯಲ್ಲೇ ಸ್ಫೋಟಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಟೆಕ್ಸಾಸ್ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್ಎಕ್ಸ್ ಕಂಪೆನಿಯ ಸ್ಟಾರ್ಬೆಸ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಈ ದೈತ್ಯಾಕಾರದ ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು. ಆದರೆ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡಿದ್ದು, ಗಲ್ಫ್ ಆಫ್ ಮೆಕ್ಸಿಕೊಗೆ ಅಪ್ಪಳಿಸಿದೆ.

ಗಗನಯಾತ್ರಿಗಳನ್ನು ಚಂದ್ರ, ಮಂಗಳ ಹಾಗೂ ಅದರಾಚೆಗಿನ ಗ್ರಹಗಳಿಗೆ ಕಳುಹಿಸುವ ಉದ್ದೇಶದಿಂದ ಸ್ಟಾರ್ಶಿಪ್ ರಾಕೆಟ್ಅನ್ನು ಅಭಿವೃದ್ಧಿಪಡಿಸಲಾಗಿತ್ತು. ಉಡಾವಣೆಯಾದ ಮೂರು ನಿಮಿಷದಲ್ಲಿ ಮೊದಲ ಹಂತದಿಂದ ಸ್ಟಾರ್ಶಿಪ್ ಕ್ಯಾಪ್ಸುಲ್ ಬೇರ್ಪಡಬೇಕಿತ್ತು. ಬೇರ್ಪಡಲು ವಿಫಲವಾದ್ದರಿಂದ ರಾಕೆಟ್ ಮಧ್ಯದಲ್ಲಿಯೇ ಸ್ಟೋಟಗೊಂಡಿದೆ. ಸ್ಟೋಟಗೊಂಡ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.