Monday, January 20, 2025
ಸುದ್ದಿ

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ : ಕಹಳೆ ನ್ಯೂಸ್

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ತಾಯಿ ಮನೆಗೆ ಹೋದವರು ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ದರ್ಖಾಸು ಎಂಬಲ್ಲಿ ನಡೆದಿದೆ
ಬಂಟ್ವಾಳ ತಾಲೂಕಿನ ಸಜಿಪಮುಡ ಗ್ರಾಮದ ಕಾರಾಜೆ ನಿವಾಸಿ ಹರಿಣಾಕ್ಷಿ ಅವರ ಪತಿ ಲೋಕನಾಥ ಪೂಜಾರಿ ನಾಪತ್ತೆಯಾಗಿದ್ದು, ಎ.17 ರಂದು ಕಾರಾಜೆಯಿಂದ ತಾಯಿ ಮನೆಯಾದ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಅನಂತಾಡಿ ದರ್ಖಾಸು ಎಂಬಲ್ಲಿಗೆ ಬಂದಿದ್ದು ಆ ದಿನ ಅಲ್ಲೇ ಉಳಿದುಕೊಂಡಿದ್ದಾರೆ. ಬಳಿಕ ಎ.18 ರಂದು ಬೆಳಿಗ್ಗೆ 8.00 ಗಂಟೆಗೆ ಅನಂತಾಡಿ ದರ್ಖಾಸಿನಿಂದ ಕಾರಾಜೆಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಈ ವೆರೆಗೂ ಮನೆಗೆ ವಾಪಸ್ ಬಂದಿರುವುದಿಲ್ಲ. ಅಲ್ಲದೇ ಲೋಕನಾಥ ಪೂಜಾರಿ ಸ್ವಲ್ಪ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಮನೆಯಿಂದ ಹೊರಡುವ ಸಮಯ ಪೊಬೈಲ್ ಫೋನ್ ಬಿಟ್ಟು ಹೋಗಿದ್ದು, ಬಳಿಕ ಸಂಬಂಧಿಕರ ಮನೆಗಳಿಗೆ ಪೋನ್ ಮಾಡಿ ವಿಚಾರಿಸಿದ್ದಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಿದ್ದಲ್ಲಿ ಪತ್ತೆಯಾಗದೇ ಇದ್ದು ಅಲ್ಲದೇ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು