Recent Posts

Monday, January 20, 2025
ಉಡುಪಿರಾಜಕೀಯಸುದ್ದಿ

ಪವರ್ ಮಿನಿಸ್ಟರ್ ಆಸ್ತಿ ಎಷ್ಟು ಗೊತ್ತಾ…!? 45.16 ಲಕ್ಷ ರೂ. ಸಾಲ ಹೊಂದಿದ್ದಾರೆ ವಿ. ಸುನಿಲ್ ಕುಮಾರ್ ಕಾರ್ಕಳ – ಕಹಳೆ ನ್ಯೂಸ್

ಕಾರ್ಕಳ ;ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ಅವರು ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು ರೂ. 5.63 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುನಿಲ್‌ ಅವರ ಕುಟುಂಬದ ಬಳಿ ಒಟ್ಟು 7.98 ಕೋಟಿ ರೂ.

ಆಸ್ತಿ ಇದೆ. ಪತ್ನಿ ಪ್ರಿಯಾಂಕಾ 1.80 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ತಂದೆ ವಾಸುದೇವ ಎಂ.ಕೆ. ಅವರ 54.14 ಲಕ್ಷ ರೂ. ಮೌಲ್ಯದ ಆಸ್ತಿಯೂ ಸೇರಿದೆ. ಸುನಿಲ್‌ 45.16 ಲಕ್ಷ ರೂ. ಸಾಲ ಹೊಂದಿದ್ದಾರೆ.

24.60 ಲಕ್ಷ ರೂ. ಬೆಲೆಯ ಇನ್ನೋವಾ ಕಾರನ್ನು ಹೊಂದಿದ್ದು ವಿವಿಧ ಬ್ಯಾಂಕ್‌ಗಳಲ್ಲಿ ಇರುವ ಠೇವಣಿ ಸಹಿತ ಒಟ್ಟು 12.25 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಅವರ ಪತ್ನಿ 4.06 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಸುನಿಲ್‌ ಒಟ್ಟು 1. 60 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಅವರ ಪತ್ನಿ 1.43 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಸುನಿಲ್‌ ವಿವಿಧೆಡೆ ಒಟ್ಟು 10.27 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಇದರ ಮೌಲ್ಯ ರೂ.1.04 ಕೋಟಿ ರೂ. ಹಾಗೂ 148.97 ಸೆಂಟ್ಸ್‌ ಕೃಷಿಯೇತರ ಭೂಮಿಯನ್ನು ಹೊಂದಿದ್ದು ಅದರ ಮೌಲ್ಯ 24.96 ಲಕ್ಷ ರೂ. ಆಗಿದೆ. ಪತ್ನಿ ಕಡ್ತಲ ಗ್ರಾಮದಲ್ಲಿ ಒಟ್ಟು 4.18 ಎಕರೆ ಕೃಷಿಭೂಮಿ ಹೊಂದಿದ್ದು, ಇದರ ಮೌಲ್ಯ 37.62 ಲಕ್ಷ ರೂ. ಆಗಿದೆ.

ನಿಟ್ಟೆ ಗ್ರಾಮದಲ್ಲಿ 5014 ಚ.ಅಡಿ ವಿಸ್ತೀರ್ಣದ ವಸತಿ ಕಟ್ಟಡವನ್ನು ಹೊಂದಿದ್ದಾರೆ. ಸಂಬಳ, ಗುತ್ತಿಗೆ ಬಾಡಿಗೆ ಕೃಷಿ ಹಾಗೂ ಬ್ಯಾಂಕ್‌ ಠೇವಣಿಯ ಬಡ್ಡಿಯಿಂದ ವರ್ಷಕ್ಕೆ 77.02 ಲಕ್ಷ ರೂ. ವರಮಾನ ಹಾಗೂ ಪತ್ನಿಗೆ ಬ್ಯಾಂಕ್‌ ಬಡ್ಡಿ ಹಾಗೂ ಕೃಷಿಯಿಂದ ವಾರ್ಷಿಕ 15.26 ಲಕ್ಷ ರೂ. ವರಮಾನ ಬರುತ್ತಿದೆ. ತಂದೆಗೆ ಪಿಂಚಣಿ ಹಾಗೂ ಬ್ಯಾಂಕ್‌ ಬಡ್ಡಿಯಿಂದ ವಾರ್ಷಿಕ 6.73 ಲಕ್ಷ ರೂ. ವರಮಾನ ಬರುತ್ತಿದೆ.

ಸುನಿಲ್‌ ಬಳಿ 272.70 ಗ್ರಾಂ ಚಿನ್ನಾಭರಣವಿದ್ದು, ಅದರ ಮೌಲ್ಯ 14.31 ಲಕ್ಷ ರೂ. ಹಾಗೂ ಪತ್ನಿ ಬಳಿ 2,230 ಗ್ರಾಂ ಚಿನ್ನಾಭರಣವಿದ್ದು ಇದರ ಮೌಲ್ಯ ರೂ. 1.17 ಕೋಟಿ ರೂ. ಪತ್ನಿ 10.60 ಕೆ.ಜಿ ಬೆಳ್ಳಿಯನ್ನು ಹೊಂದಿದ್ದು ಅದರ ಮೌಲ್ಯ 7.42 ಲಕ್ಷ ರೂ. ಆಗಿದೆ.