ಕಲ್ಲಡ್ಕ : ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶ್ರೀರಾಮ ಪದವಿ ಪೂರ್ವ ಕಾಲೇಜಿಗೆ ಶೇ 95% ಫಲಿತಾಂಶ –ಕಹಳೆ ನ್ಯೂಸ್
ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಹಾಜರಾದ 301 ವಿದ್ಯಾರ್ಥಿಗಳಲ್ಲಿ 284 ವಿದ್ಯಾರ್ಥಿಗಳು ತೇರ್ಗಡೆಯಾಗಿ ಒಟ್ಟು ಶೇ 95 ಫಲಿತಾಂಶ ದಾಖಲಾಗಿದೆ.
ಕಲಾ ವಿಭಾಗದಲ್ಲಿ 31 ರಲ್ಲಿ 30, ವಾಣಿಜ್ಯ ವಿಭಾಗದಲ್ಲಿ 171 ರಲ್ಲಿ 166, ವಿಜ್ಞಾನ ವಿಭಾಗದಲ್ಲಿ 99 ರಲ್ಲಿ 88 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ 83, ಪ್ರಥಮ ಶ್ರೇಣಿಯಲ್ಲಿ 161 ವಿದ್ಯಾರ್ಥಿಗಳು ತೇರ್ಗಡೆಯಾಗಿ ಸಾಧನೆಗೈದಿದ್ದಾರೆ.
ಗ್ರಾಮಾಂತರ ಪ್ರದೇಶದ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಹೊಂದಿರುವ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಫಲಿತಾಂಶ ಬರಲು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ನಿರ್ವಹಿಸಿದ ಪರಿಶ್ರಮಕ್ಕೆ ವಿವೇಕಾನಂದ ಸಂಘದ ಅಧ್ಯಕ್ಷರು ಡಾ. ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಸಂಚಾಲಕರಾದ ವಸಂತಮಾಧವ ಹಾಗೂ ಅಧ್ಯಕ್ಷರಾದ ಬಿ ನಾರಾಯಣ ಸೋಮಯಾಜಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಯೋಗ-ನೈತಿಕ ಹಾಗೂ ಸಂಸ್ಕಾರಯುತ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ, ಸ್ಮಾರ್ಟ್‍ಕ್ಲಾಸ್, ವಸತಿನಿಲಯ, ವಿಶೇಷ ಕೋಚಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ವಿದ್ಯಾಲಯದ ಸಂಚಾಲಕರು ತಿಳಿಸಿದ್ದಾರೆ.