ಬಂಟ್ವಾಳ : ಮಂಗಳೂರಿನ ಕೆನರಾ ಪ.ಪೂ. ಕಾಲೇಜಿನ ಬಿ.ಎಸ್. ಬಿ.ಎ. ವಾಣಿಜ್ಯ ವಿಭಾಗದ ವಿದ್ಯಾರ್ಥಿ,ಬಂಟ್ವಾಳ ನಿವಾಸಿ ಎನ್. ಪ್ರತೀಕ್ ಮಲ್ಯ ಅವರು 600 ರಲ್ಲಿ 595ಅಂಕಗಳಿಸಿ (ಶೇ.99.17) ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾರೆ.
ಬಂಟ್ವಾಳ ತ್ಯಾಗರಾಜ ರಸ್ತೆಯ ನಿವಾಸಿ ಎನ್. ವೆಂಕಟೇಶ್ ಮಲ್ಯ,ಎನ್.ರಾಧಿಕಾ ಮಲ್ಯ ಅವರ ಪುತ್ರನಾಗಿರುವ ಪ್ರತೀಕ್ ಮಲ್ಯ ಅವರು ಸಂಸ್ಕೃತದಲ್ಲಿ 100, ಇಂಗ್ಲೀಷ್ ನಲ್ಲಿ 96, ಬಿಸಿನೆಸ್ ಸ್ಟಡಿಸ್ ನಲ್ಲಿ 99, ಅಕೌಂಟೆನ್ಸಿಯಲ್ಲಿ 100, ಸ್ಟೆಟಟಿಕ್ಸ್ ನಲ್ಲಿ 100,ಗಣಿತ 100ಅಂಕ ಗಳಿಸಿದ್ದಾನೆ.
ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಎಸ್. ಎಸ್ .ಎಲ್ .ಸಿ ಪರೀಕ್ಷೆಯಲ್ಲು
ಪ್ರತೀಕ್ ಬಂಟ್ವಾಳ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದ.
ಇದೀಗ ಈ ಸಾಲಿನ ಪಿ.ಯು.ಸಿ.ಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದು,ಫಲಿತಾಂಶ ಹೊರಬೀಳುತ್ತಿದ್ಧಂತೆ ತಾಯಿ ರಾಧಿಕಾ ಮಲ್ಯ ಅವರು ಮಗ ಪ್ರತೀಕ್ಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಈತ ಭವಿಷ್ಯದಲ್ಲಿ ಸಿ.ಎ. ಆಗಬೇಕೆನ್ನುವ ಆಸೆಯನ್ನು ಹೊಂದಿರುವುದಾಗಿ ತಿಳಿಸಿದ್ದಾನೆ.