ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ ಶೇಕಡಾ ನೂರು ಫಲಿತಾಂಶ 136 ಮಂದಿ ಡಿಸ್ಟಿಂಕ್ಷನ್, 82 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ – ಕಹಳೆ ನ್ಯೂಸ್
ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಈ ಬಾರಿಯ ಪಿಯು ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದು, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳೆರಡರಲ್ಲೂ ಶೇ.ನೂರು ಫಲಿತಾಂಶ ದಾಖಲಿಸಿವೆ. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿಂದ ಒಟ್ಟು 222 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 121 ಮಂದಿ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಹಾಗೂ 15 ಮಂದಿ ವಾಣಿಜ್ಯ ವಿಭಾಗದಲ್ಲಿ ಉನ್ನತ ಶ್ರೇಣಿ ದಾಖಲಿಸಿದ್ದಾರೆ. ಅಂತೆಯೇ 72 ಮಂದಿ ವಿಜ್ಞಾನ ವಿಭಾಗದಲ್ಲಿ ಹಾಗೂ 10 ಮಂದಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಶ್ರೇಣಿಗೆ ಭಾಜನರಾಗಿದ್ದಾರೆ. ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಿಂದ ಒಟ್ಟು 118 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ಇವರ ಪೈಕಿ 77 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 41 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯ – ವಿಜ್ಞಾನ ವಿಭಾಗ :
ಕೊಕ್ಕಡದ ಡಾ. ಕೃಷ್ಣಮೂರ್ತಿ ಹಾಗೂ ಅನುಪಮಾ ದಂಪತಿ ಪುತ್ರ ಶ್ರೀಶ ಶರ್ಮ 591 (ಭೌತಶಾಸ್ತç 99, ರಸಾಯನಶಾಸ್ತç 99, ಗಣಿತಶಾಸ್ತç 100, ಹಾಗೂ ಕಂಪ್ಯೂಟರ್ ಸೈನ್ಸ್ 100) ಅಂಕಗಳನ್ನು ಗಳಿಸಿ ಕಾಲೇಜಿಗೆ ಮೊದಲಿಗನೆನಿಸಿದ್ದಾರೆ. ಸುಳ್ಯದ ಸೀತಾರಾಮ ಎನ್.ಜಿ ಹಾಗೂ ಜಯಲಕ್ಷ್ಮೀ ಕೆ ದಂಪತಿ ಪುತ್ರ ಧೀರಜ್ ಬಿ.ಎಸ್ 590 (ಭೌತಶಾಸ್ತ100, ರಸಾಯನಶಾಸ್ತ 98, ಗಣಿತಶಾಸ್ತ 100, ಹಾಗೂ ಜೀವಶಾಸ್ತ 99) ಹಾಗೂ ಬನ್ನೂರಿನ ರವೀಂದ್ರನ್ ಸಿ ಹಾಗೂ ಶೀಜಾ ದಂಪತಿ ಪುತ್ರಿ ಲಯ ರವೀಂದ್ರನ್ ತಲಾ 590 (ಭೌತಶಾಸ್ತ 99, ರಸಾಯನಶಾಸ್ತ 100, ಗಣಿತಶಾಸ್ತ 99, ಹಾಗೂ ಜೀವಶಾಸ್ತ 100) ಅಂಕಗಳನ್ನು ದಾಖಲಿಸಿ ದ್ವಿತೀಯ ಸ್ಥಾನಿಗಳೆನಿಸಿದ್ದಾರೆ.
ಬನ್ನೂರಿನ ಗೋಪಾಲಕೃಷ್ಣ ಭಟ್ ಹಾಗೂ ಅರ್ಚನಾ ಎಂ ದಂಪತಿ ಪುತ್ರಿ ಮೇಧಾ ಭಟ್ ಕೋಟೆ 588 (ಭೌತಶಾಸ್ತ 98, ರಸಾಯನಶಾಸ್ತ 98, ಗಣಿತಶಾಸ್ತ 100, ಹಾಗೂ ಜೀವಶಾಸ್ತ 97) ಬೆಟ್ಟಂಪಾಡಿಯ ದಿನೇಶ್ ಮರಡಿತ್ತಾಯ ಹಾಗೂ ಸಂಧ್ಯಾ ಪಿ ದಂಪತಿ ಪುತ್ರಿ ಶ್ರಾವಣಿ ಬಿ 587 (ಭೌತಶಾಸ್ತ 98, ರಸಾಯನಶಾಸ್ತ 99, ಗಣಿತಶಾಸ್ತ 99, ಹಾಗೂ ಜೀವಶಾಸ್ತ 100), ಕಬಕದ ಕಿರಣ್ ಕಜೆ ಹಾಗೂ ವೀಣಾ ಕಿರಣ್ ದಂಪತಿ ಪುತ್ರಿ ಹಿತಾ ಕಜೆ 586 (ಭೌತಶಾಸ್ತ 98, ರಸಾಯನಶಾಸ್ತ 95 , ಗಣಿತಶಾಸ್ತ 100, ಹಾಗೂ ಕಂಪ್ಯೂಟರ್ ಸೈನ್ಸ್ 99), ದರ್ಭೆಯ ಯಶೋಧರ ಎಸ್ ಹಾಗೂ ರಶ್ಮಿ ಟಿ.ಎಂ ಪುತ್ರಿ ಯಶಸ್ವೀ ಶೆಟ್ಟಿ 586 (ಭೌತಶಾಸ್ತ 98 , ರಸಾಯನಶಾಸ್ತ 96, ಗಣಿತಶಾಸ್ತ 100, ಹಾಗೂ ಜೀವಶಾಸ್ತ 100), ಮುರದ ಜಯ ಸಫಲ್ಯ ಹಾಗೂ ಅಶ್ವಿನಿ ದಂಪತಿ ಪುತ್ರಿ ನೇಹಾ 586 (ಭೌತಶಾಸ್ತ 98, ರಸಾಯನಶಾಸ್ತ 99, ಗಣಿತಶಾಸ್ತ 98, ಹಾಗೂ ಜೀವಶಾಸ್ತ 100), ಬೆಳಿಯೂರುಕಟ್ಟೆಯ ಎ.ಅಶೋಕ ಭಟ್ ಹಾಗೂ ನಯನಾ ಕೆ ದಂಪತಿ ಪುತ್ರ ಶಿವಸ್ಕಂದ ಎ 585 (ಭೌತಶಾಸ್ತ 99, ರಸಾಯನಶಾಸ್ತ 96, ಗಣಿತಶಾಸ್ತ 98 ಹಾಗೂ ಕಂಪ್ಯೂಟರ್ ಸೈನ್ಸ್ 99), ಅಳಿಕೆಯ ರಘು ಪಾಟಾಳಿ ಎಂ ಹಾಗೂ ಚೇತನಾ ದಂಪತಿ ಪುತ್ರಿ ರಕ್ಷಾ ಆರ್ 582 (ಭೌತಶಾಸ್ತ 99, ರಸಾಯನಶಾಸ್ತ 99, ಗಣಿತಶಾಸ್ತ 99, ಹಾಗೂ ಜೀವಶಾಸ್ತ 100), ದರ್ಭೆಯ ಗಣಪತಿ ಭಟ್ ಕೆ ಹಾಗೂ ರಶ್ಮೀ ಕೆ.ಆರ್ ದಂಪತಿ ಪುತ್ರಿ ನೇಹಾ ಕೆ.ಜಿ 582 (ಭೌತಶಾಸ್ತ 98, ರಸಾಯನಶಾಸ್ತ 97, ಗಣಿತಶಾಸ್ತ 99 ಹಾಗೂ ಕಂಪ್ಯೂಟರ್ ಸೈನ್ಸ್ 100), ಸಾಮೆತ್ತಡ್ಕದ ವೆಂಕಟರಾಜ್ ಪಿ.ಜಿ ಹಾಗೂ ಚಿತ್ರಾ ಮಂಗಳ ಪಿ.ಎ ದಂಪತಿ ಪುತ್ರಿ ಶ್ರೇಯಾ ಪಿ.ವಿ 581 (ಭೌತಶಾಸ್ತ 97, ರಸಾಯನಶಾಸ್ತ 96, ಗಣಿತಶಾಸ್ತ 100 ಹಾಗೂ ಕಂಪ್ಯೂಟರ್ ಸೈನ್ಸ್ 100), ವಿಟ್ಲದ ವಿನೋದ್ ಕುಮಾರ್ ಹಾಗೂ ಶೈನಿ ಟಿ.ಪಿ ದಂಪತಿ ಪುತ್ರಿ ಪ್ರಿಯದರ್ಶಿನಿ ಎಂ 581 (ಭೌತಶಾಸ್ತç 97 , ರಸಾಯನಶಾಸ್ತ 96, ಗಣಿತಶಾಸ್ತ 99 ಹಾಗೂ ಜೀವಶಾಸ್ತ 94), ಬಲ್ನಾಡಿನ ಮಹಾಬಲೇಶ್ವರ ಭಟ್ ಹಾಗೂ ಗೀತಾ ಕುಮಾರಿ ದಂಪತಿ ಪುತ್ರಿ ದಿಶಾಖಾ ವೈ ಭಟ್ 581 (ಭೌತಶಾಸ್ತ 98, ರಸಾಯನಶಾಸ್ತ 96, ಗಣಿತಶಾಸ್ತ 100, ಹಾಗೂ ಕಂಪ್ಯೂಟರ್ ಸೈನ್ಸ್ 98) ಅಂಕಗಳನ್ನು ದಾಖಲಿಸಿ ಸಾಧನೆ ಮೆರೆದಿದ್ದಾರೆ.
ವಾಣಿಜ್ಯ ವಿಭಾಗ: ಬೆಳ್ತಂಗಡಿಯ ಶಿವರಾಮ ಹಾಗೂ ಸುನಂದ ದಂಪತಿ ಪುತ್ರಿ ಮೇಘಾ ಎಸ್.ಬಿ 586 (ಅರ್ಥಶಾಸ್ತ 100 ವ್ಯವಹಾರ ಅಧ್ಯಯನ 99 ಲೆಕ್ಕಶಾಸ್ತ 97 ಸಂಖ್ಯಾಶಾಸ್ತ 100 ) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಉಪ್ಪಿನಂಗಡಿಯ ಅಂತರಾಜ್ ಕಿಣಿ ಹಾಗೂ ಲಕ್ಷ್ಮಿ ಎ ಕಿಣಿ ದಂಪತಿ ಪುತ್ರಿ ನಾಗರತ್ನಾ 584 (ಅರ್ಥಶಾಸ್ತ 100 ವ್ಯವಹಾರ ಅಧ್ಯಯನ 99 ಲೆಕ್ಕಶಾಸ್ತ 98 ಸಂಖ್ಯಾಶಾಸ್ತ 97) ಬೆಂಗಳೂರಿನ ಎಲ್.ಕೆ.ರಾಜಣ್ಣ ಹಾಗೂ ಡಿ.ಎಸ್ ನಾಗಮಣಿ ಪುತ್ರ ವಿಶ್ವಾಸ್ ಗೌಡ ಆರ್ 574 (ಅರ್ಥಶಾಸ್ತ 98 ವ್ಯವಹಾರ ಅಧ್ಯಯನ 98 ಲೆಕ್ಕಶಾಸ್ತ 91 ಸಂಖ್ಯಾಶಾಸ್ತ 99), ಪುತ್ತೂರಿನ ಸುಧೀರ್ ತೋಳ್ಪಾಡಿ ಹಾಗೂ ಸಂಧ್ಯಾ ತೋಳ್ಪಾಡಿ ದಂಪತಿ ಪುತ್ರಿ ಎಸ್.ಶರಣ್ಯಾ ತೋಳ್ಪಾಡಿ 571 (ಅರ್ಥಶಾಸ್ತ 93 ವ್ಯವಹಾರ ಅಧ್ಯಯನ 97 ಲೆಕ್ಕಶಾಸ್ತ 97 ಸಂಖ್ಯಾಶಾಸ್ತ 97) ಅಂಕ ದಾಖಲಿಸಿದ್ದಾರೆ.
ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯ – ವಿಜ್ಞಾನ ವಿಭಾಗ:
ಕಾಸರಗೋಡಿನ ಕೇಶವ ಶರ್ಮ ಹಾಗೂ ಶ್ರೀವತ್ಸಲ ದಂಪತಿಗಳ ಪುತ್ರಿ ಪ್ರಣಮ್ಯ ಬಿ 587 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. (ಭೌತಶಾಸ್ತ 99, ರಸಾಯನಶಾಸ್ತ 98, ಗಣಿತಶಾಸ್ತ 99 ಹಾಗೂ ಜೀವಶಾಸ್ತ 100 ), ಬೆಳ್ಳಾರೆಯ ಬಿ ಕೆ ಸೂರ್ಯನಾರಾಯಣ ಹಾಗೂ ವಿದ್ಯಾಕುಮಾರಿ ದಂಪತಿಗಳ ಪುತ್ರ ಆಶಿಶ್ ಗೋವಿಂದ 581 (ಭೌತಶಾಸ್ತ 100 , ರಸಾಯನಶಾಸ್ತ 95, ಗಣಿತಶಾಸ್ತ 99, ಹಾಗೂ ಜೀವಶಾಸ್ತ 97) ಹಾಗೂ ಸಕಲೇಶ್‌ಪುರದ ಸಿ ಎಸ್ ನರಹರಿ ಭಟ್ ಹಾಗೂ ಶ್ರೀಲಕ್ಷ್ಮಿ ದಂಪತಿಗಳ ಪುತ್ರಿ ವೈಭವಿ ಸಿ ಎನ್ 581 (ಭೌತಶಾಸ್ತ 97, ರಸಾಯನಶಾಸ್ತ 96, ಗಣಿತಶಾಸ್ತ 100, ಹಾಗೂ ಜೀವಶಾಸ್ತ 98) ದ್ವಿತೀಯ ಸ್ಥಾನವನ್ನು ಹಂಚಿಕೊಂಡಿರುತ್ತಾರೆ.
ಕಾಸರಗೋಡಿನ ಶಂಕರನಾರಾಯಣ ಪ್ರಸನ್ನ ಎಸ್ ಹಾಗೂ ಸೌಮ್ಯ ದಂಪತಿಗಳ ಪುತ್ರಿ ಗಾಯತ್ರಿ ಎಸ್ 580 (ಭೌತಶಾಸ್ತ 98, ರಸಾಯನಶಾಸ್ತ 93, ಗಣಿತಶಾಸ್ತ 100, ಹಾಗೂ ಜೀವಶಾಸ್ತ 100) ಮತ್ತು ಮಡಿಕೇರಿಯ ತಿಮ್ಮಯ್ಯ ಕೆ ಟಿ ಹಾಗೂ ಶಶಿ ಕೆ ಟಿ ದಂಪತಿಗಳ ಪುತ್ರ ಬಿದ್ದಪ್ಪ ಕೆ ಟಿ 580 (ಭೌತಶಾಸ್ತ 99, ರಸಾಯನಶಾಸ್ತ -92, ಗಣಿತಶಾಸ್ತ -99, ಹಾಗೂ ಜೀವಶಾಸ್ತ-99) ತೃತೀಯ ಸ್ಥಾನಿಗಳಾಗಿರುತ್ತಾರೆ.
ವಿಷಯವಾರು 100 ಅಂಕ:
ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಹಲವಾರು ಮಂದಿ ವಿಷಯಾವಾರು ನೂರು ಅಂಕ ದಾಖಲಿಸಿದ್ದಾರೆ. ಸಂಸ್ಕೃತದಲ್ಲಿ 13 ಮಂದಿ, ಗಣಿತದಲ್ಲಿ 8 ಮಂದಿ, ಕಂಪ್ಯೂಟರ್ ಸೈನ್ಸ್ ನಲ್ಲಿ 6 ಮಂದಿ, ಜೀವಶಾಸ್ತçದಲ್ಲಿ 5 ಮಂದಿ, ಭೌತಶಾಸ್ತದಲ್ಲಿ 2 ಮಂದಿ ಅರ್ಥಶಾಸ್ತದಲ್ಲಿ 3 ಮಂದಿ, ಸಂಖ್ಯಾಶಾಸ್ತದಲ್ಲಿ 2 ಮಂದಿ, ಲೆಕ್ಕಶಾಸ್ತ ರಸಾಯನಶಾಸ್ತ ಹಾಗೂ ಕನ್ನಡದಲ್ಲಿ ತಲಾ ಒಬ್ಬೊಬ್ಬರಂತೆ ಪೂರ್ಣ ಅಂಕಗಳನ್ನು ಪಡೆದಿದ್ದಾರೆ.