ಪುತ್ತೂರು :ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯಿಂದ ನಡೆದ ದ್ವಿತೀಯ ಪಿಯುಸಿ ವಾಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವಿವೇಕಾನಂದ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಅತ್ತ್ಯುತ್ತಮ ಸಾಧನೆ ಮಾಡಿರುತ್ತಾರೆ.ವಿಜ್ಞಾನ ವಿಭಾಗದಲ್ಲಿ 592 ಅಂಕಗಳನ್ನು ಗಳಿಸುವುದರ ಮೂಲಕ ಆಶ್ರಯ ಪಿ(ಪುತ್ತೂರಿನ ಉರ್ಲಾಂಡಿಯ ಅಶೋಕ್ ಕುಂಬ್ಲೆ ಹಾಗೂ ಶೋಭ ಇವರ ಪುತ್ರಿ), ದೀಪ್ತಿಲಕ್ಷ್ಮೀ ಕೆ 592 (ಪುತ್ತೂರಿನ ಬುಳ್ಳೇರಿಕಟ್ಟೆಯ ಶಂಕರಪ್ರಸಾದ್ ಹಾಗೂ ಉಷಾ ದಂಪತಿಗಳ ಪುತ್ರಿ), ಮತ್ತು ವಾಣಿಜ್ಯ ವಿಭಾಗದಲ್ಲಿ ಅದಿತ್ಯನಾರಾಯಣ ಪಿ ಎಸ್ 595 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.(ಪುತ್ತೂರಿನ ಬನ್ನೂರಿನ ಶಂಕರ್ ಭಟ್ ಹಾಗೂ ದೇವಕಿ ಇವರ ಪುತ್ರ), ಕಲಾ ವಿಭಾಗದಲ್ಲಿ ಮಂಜುಶ್ರೀ 591ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.(ಸುಳ್ಯ ಉಬರಡ್ಕದತೀರ್ಥರಾಮ ಹಾಗೂ ಸಂಧ್ಯಾಇವರ ಪುತ್ರಿ) ಅಂಕಗಳನ್ನು ಪಡೆದು ಉತ್ತಮ ಫಲಿತಾಂಶ ನೀಡಿರುತ್ತಾರೆ.
ಕಲಾ ವಿಭಾಗದಲ್ಲಿ 1, ವಾಣಿಜ್ಯ ವಿಭಾಗದಲ್ಲಿ 11, ವಿಜ್ಞಾನ ವಿಭಾಗದಲ್ಲಿ 8 ವಿದ್ಯಾರ್ಥಿಗಳು 585 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಸುದೇಶ್ ಭಟ್ 593, ಶರಣ್ಯ ವಿ ಆರ್ 591, ಚಿತ್ತಾರ ಪಟೇಲ್‌ಎಸ್.ಪಿ 590, ದೀಪಾಶ್ರೀ 588 , ಎಸ್ ತ್ವಿಶಾ 588 , ಮಹಾಲಸ ಮಲ್ಲ್ಯ 585, ಸಿಂಧೂರ ವಿ ಎಸ್ 587, ಮಾಧರ‍್ಯ587, ಮನ್ವಿತ ಕೆ 585, ಶ್ರೀಪ್ರದ ರಮೇಶ್‌ರಾವ್ 589, ವಿಜ್ಞಾನ ವಿಭಾಗದಲ್ಲಿ ಪ್ರತೀಕ್ಷಾ ಟಿ ಕೆ 586, ಅನನ್ಯ ಲಕ್ಷ್ಮೀ 588, ಬಿ ಎಸ್ ಭಾರ್ಗವಿ 585,ಅಭಿನವ ಪಿ 588, ವರ್ಷಿತ್ ಜೆ 585, ಮನಸ್ವಿ ಭಟ್ ಕೆ 590 ಅಂಕಗಳನ್ನು ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಒಟ್ಟು 420 ಮಂದಿ ವಿದ್ಯಾರ್ಥಿಗಳಲ್ಲಿ 224 ಮಂದಿ ಡಿಸ್ಟಿಂಕ್ಷನ್, 179 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಶೇ 99.28 ಫಲಿತಾಂಶ, ವಾಣಿಜ್ಯ ವಿಭಾಗದ ಒಟ್ಟು 218 ವಿದ್ಯಾರ್ಥಿಗಳಲ್ಲಿ 107 ಮಂದಿ ಡಿಸ್ಟಿಂಕ್ಷನ್ ಹಾಗೂ 95 ಮಂದಿ ಪ್ರಥಮದರ್ಜೆಯಲ್ಲಿ ತೇರ್ಗಡೆ ಹೊಂದಿ ಶೇ 95 ಫಲಿತಾಂಶ, ಕಲಾ ವಿಭಾಗದಒಟ್ಟು35 ವಿದ್ಯಾರ್ಥಿಗಳಲ್ಲಿ 10 ಮಂದಿ ಡಿಸ್ಟಿಂಕ್ಷನ್, 15 ಮಂದಿ ಪ್ರಥಮದರ್ಜೆಯಲ್ಲಿ ತೇರ್ಗಡೆ ಹೊಂದಿ ಶೇ 97.14 ಫಲಿತಾಂಶ ಪಡೆದಿದ್ದಾರೆ. ಕಾಲೇಜಿನ ಸರಾಸರಿ ಫಲಿತಾಂಶವು 99.25 ಶೇಕಡಆಗಿರುತ್ತದೆ.