ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಎ.22 ರಂದು ಗುರುವಾರ ಪೆರಾಜೆ ಗ್ರಾಮದ ಪ್ರಮುಖರ ಮನೆಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿದರು. ಬಳಿಕ ಕಾರ್ಯಕರ್ತರ ಜೊತೆಯಲ್ಲಿ ಕೆಲ ಹೊತ್ತು ಚುನಾವಣೆಯ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದರು.
ಕಾರ್ಯಕರ್ತರು ಚುನಾವಣೆಯವರೆಗೆ ವಿಜಯಕ್ಕಾಗಿ ವಿರಮಿಸದೆ ಕೆಲಸ ಮಾಡಿ ಎಂದರು .ಸತ್ಯ, ಧರ್ಮ, ನ್ಯಾಯಕ್ಕಾಗಿ ಚುನಾವಣೆ ಎಂಬ ನಿಲುವಿನಲ್ಲಿ ಮತಯಾಚನೆ ಮಾಡಿ, ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತಿ ಮನೆಗೂ ತಿಳಿಸುವ ಕೆಲಸ ಮಾಡಿ, ಶಾಂತಿಯ ಬಂಟ್ವಾಳವಾಗಿ ಮುಂದುವರಿಯಬೇಕು ಎಂಬ ನಿಟ್ಟಿನಲ್ಲಿ ಒಂದಾಗಿ ಬಿಜೆಪಿ ಗೆ ಮತ ನೀಡಿ ಎಂದು ಮನವಿ ಮಾಡಿ ಎಂದು ಅವರು ತಿಳಿಸಿದರು.
ಗ್ರಾಮದಲ್ಲಿ ಪ್ರತಿ ಮನೆಯನ್ನು ಬೇಟಿ ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಲು ಪ್ರಯತ್ನ ಮಾಡಿ, ನಿರಂತರವಾಗಿ ಸಂಪರ್ಕದಲ್ಲಿ ಇರುವಂತೆ ನೋಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ,ಪಕ್ಷದ ಸಂಘಟನೆಯ ದೃಷ್ಟಿಯಿಂದ ಜತೆಯಾಗಿ ಕೆಲಸ ಮಾಡಿ ಎಂದು ಅವರು ತಿಳಿಸಿದರು.
ಗ್ರಾಂ.ಪ. ಸದಸ್ಯರುಗಳಾದ ಹರಿಶ್ ರೈ ಪಾಣುರು ರಾಜರಾಮ್ ಕಡೂರು ಮಮತತಿಲಕ್ ಗೌಡ ಶಶಿಕುಮಾರಿ ಬುತ್ ಅಧ್ಯಕ್ಷರುಗಳಾದ ಪುರುಶೋತ್ತಮ ಸಾದಿಕುಕ್ಕು ರಾಘವ ಗೌಡ, ಏನಾಜೆ ಪ್ರಮುಖರಾದ ಶರತ್ ಕಡೆಶ್ವಲ್ಯ ಚಿದನಂದ ಉಮೇಶ್ ಎಸ್.ಪಿ. ಪ್ರಶಂತ್ ನಡುಗುಡ್ದೆ ಯತಿರಾಜ್ ಪೆರಾಜೆ ಗಣೇಶ್ ಕೋಂಕಣ ಪದವು ನಾಗೇಶ್ ಕೋಂಕಣಪದವು ಕ್ರಿಷ್ಣಪ್ಪ ನಾಯ್ಕ ಹಿರಿಯರಾದ ಬೊಮ್ಮನ್ನ ಗೌಡ,ದೆವದಾಶ್. ದಿವಕರ್.ಶಾಂತಿಲ ವಿನಿತ್ ಶೆಟ್ಟಿ ಪಣೂರು ಮತ್ತಿತರರು ಉಪಸ್ಥಿತರಿದ್ದರು