Sunday, January 19, 2025
ಸುದ್ದಿ

ವಿವೇಕಾನಂದ ಕಾಲೇಜಿಗೆ ನ್ಯಾಕ್‍ನಿಂದ ಮೆಂಟರ್ ಸ್ಥಾನಮಾನ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಶೈಕ್ಷಣಿಕ ಉತ್ಕøಷ್ಟತೆ, ವಿದ್ಯಾರ್ಥಿಗಳ ಗುಣಮಟ್ಟ, ಪ್ರಾಂಶುಪಾಲರ ಆಡಳಿತಾತ್ಮಕ ಹಾಗೂ ಶಿಕ್ಷಣ ಸಂಬಂಧಿ ನಾಯಕತ್ವ ಅಲ್ಲದೆ ಸಮರ್ಥ ಆಡಳಿತ ಮಂಡಳಿ ವ್ಯವಸ್ಥೆಯನ್ನು ಗಮನಿಸಿ ಶಿಕ್ಷಣ ಸಂಸ್ಥೆಯನ್ನು ಮೆಂಟರ್ ಸಂಸ್ಥೆ ಎಂದು ಗುರುತಿಸಲಾಗಿದೆ.

ಕಾಲೇಜುಗಳ ಗುಣ ಮಟ್ಟ ಪರಿವೀಕ್ಷಣಾ ಘಟಕವಾದ ನ್ಯಾಕ್ ವಿವೇಕಾನಂದ ಕಾಲೇಜಿಗೆ ಈ ಸ್ಥಾನ ನೀಡಿದೆ. ಪುತ್ತೂರು ಹಾಗೂ ಆಸುಪಾಸಿನ ಪರಿಸರದಲ್ಲಿ ಈ ಮನ್ನಣೆ ಪಡೆದಿರುವ ಏಕೈಕ ಸಂಸ್ಥೆಯಾಗಿ ವಿವೇಕಾನಂದ ಕಾಲೇಜು ಮೂಡಿಬಂದಿದೆ. ನ್ಯಾಕ್ ತಂಡ ಕಾಲೇಜುಗಳ ಗುಣಮಟ್ಟದ ಆಧಾರದಲ್ಲಿ ನೀಡುವ ಮೌಲ್ಯಾಂಕನದಲ್ಲಿ 3.26ಕ್ಕಿಂತ ಹೆಚ್ಚಿನ ಶ್ರೇಯಾಂಕ ಪಡೆದ ಕಾಲೇಜು ಮಾತ್ರ ಇಂತಹ ಸ್ಥಾನಕ್ಕೆ ಅರ್ಹವಾಗುತ್ತದೆ. ಈ ಹಿಂದಿನ ಮೌಲ್ಯಮಾಪನದಲ್ಲಿ ವಿವೇಕಾನಂದ ಕಾಲೇಜಿಗೆ 3.30 ಶ್ರೇಯಾಂಕದೊಂದಿಗೆ ಎ ಶ್ರೇಣಿ ಪ್ರಾಪ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಮೆಂಟರ್ ಸಂಸ್ಥೆಯಾಗಿ ಗುರುತಿಸಿರುವ ವಿವೇಕಾನಂದ ಕಾಲೇಜು ಮುಂದಿನ ದಿನಗಳಲ್ಲಿ ತನ್ನ ಸುತ್ತಮುತ್ತಲಿನ ಪರಿಸರದ ಕನಿಷ್ಟ 10 ಪದವಿ ಕಾಲೇಜುಗಳಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಹೊಂದಿದೆ. ತನ್ನಲ್ಲಿರುವ ಉತ್ಕøಷ್ಟತೆಯ ಆಧಾರದ ಮೇಲೆ ಈವರೆಗೆ ನ್ಯಾಕ್ ತಂಡದ ಪರಿವೀಕ್ಷಣಾ ಪ್ರಕ್ರಿಯೆಯೊಳಗೆ ಭಾಗಿಯಾಗದ ಸಂಸ್ಥೆಗಳನ್ನು ಆಯ್ಕೆ ಮಾಡಿ ಅವುಗಳಿಗೆ ತರಬೇತಿ ನೀಡುವ ಹೊಣೆಗಾರಿಕೆ ದೊರೆತಿದೆ. ಆ ಸಂಸ್ಥೆಗಳ ಗುಣಮಟ್ಟವನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ವಿವೇಕಾನಂದ ಕಾಲೇಜು ತರಬೇತಿ ನೀಡಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ಕಾಲೇಜಿನಲ್ಲಿ ನ್ಯಾಕ್ ಸಂಬಂಧಿ ಚಟುವಟಿಕೆಗಳಿಗಾಗಿ ಸಾಕಷ್ಟು ಪ್ರಬಲವಾಗಿರುವ ಐಕ್ಯುಎಸಿ ಎಂಬ ಘಟಕವಿದ್ದು, ಆ ಘಟಕದ ಮೂಲಕ ಶೈಕ್ಷಣಿಕ ಸಾಧನೆಯ ವೀಕ್ಷಣೆ ನಿರಂತರವಾಗಿ ನಡೆಯುತ್ತಿದೆ. ನ್ಯಾಕ್ ಈ ಜವಾಬ್ದಾರಿ ನೀಡುವ ಪೂರ್ವದಲ್ಲೇ ಕೆಲವೊಂದು ಕಾಲೇಜುಗಳಿಗೆ ಭೇಟಿಕೊಟ್ಟು ತರಬೇತಿ ನೀಡುವ ಕಾರ್ಯವನ್ನು ಆರಂಭಿಸಲಾಗಿತ್ತು. ಇದೀಗ ಅಧಿಕೃತವಾದ ಸ್ಥಾನಮಾನ ಬಂದಿರುವುದರಿಂದ ಪುತ್ತೂರು – ಬಂಟ್ವಾಳ ಆಸುಪಾಸಿನ ಹತ್ತು ಕಾಲೇಜುಗಳಿಗೆ ಅತ್ಯುತ್ತಮ ಮಾರ್ಗದರ್ಶನ ನೀಡುವುದಕ್ಕೆ ಅನುಕೂಲವೆನಿಸಿದೆ.

ಈ ಹಿಂದೆ ಕಾಲೇಜಿಗೆ ಸಿಪಿಯು(ಸೆಂಟರ್ ಆಫ್ ಪೊಟೆನ್ಶಿಯಲ್ ಫಾರ್ ಎಕ್ಷಲೆನ್ಸ್) ಮಾನ್ಯತೆ ದೊರೆತಿದ್ದು ಇಲ್ಲಿ ಉಲ್ಲೇಖಾರ್ಹ. ಇಡಿಯ ರಾಷ್ಟ್ರದಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಪದವಿ ಕಾಲೇಜುಗಳಲ್ಲಿ ಕೇವಲ ಮುನ್ನೂರು ಕಾಲೇಜಿಗೆ ಮಾತ್ರ ಈ ಮಾನ್ಯತೆ ದೊರೆತು ಕಾಲೇಜಿಗೆ ವಿಶೇಷ ಅನುದಾನ ಒದಗಿ ಬಂದಿದೆ. ಅದಲ್ಲದೆ ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿರುವ ನಿರ್ಫ್ ಸಂಸ್ಥೆ ವಿವೇಕಾನಂದ ಕಾಲೇಜನ್ನು ದೇಶದ ಅತ್ಯುತ್ಕøಷ್ಟ 200 ಕಾಲೇಜುಗಳಲ್ಲಿ ಒಂದು ಎಂದು ಗುರುತಿಸಿ 197ನೇ ರ್ಯಾಂಕ್ ನೀಡಿತ್ತು. ಅದರಲ್ಲೂ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿವೇಕಾನಂದ ಕಾಲೇಜಿಗೆ ಮೊದಲ ರ್ಯಾಂಕ್ ಅನ್ನು ನಿರ್ಫ್ ನೀಡಿ ಗೌರವಿಸಿದೆ.

ಮುಂದಿನ ದಿನಗಳಲ್ಲಿ ವಿವೇಕಾನಂದ ಕಾಲೇಜು ಈ ಪರಿಸರದ ಮಾರ್ಗದರ್ಶಕ ತಾಣವಾಗಿ ಕೆಲಸ ಮಾಡಲಿದೆ. ಅದಾಗಲೇ ಹತ್ತು ಕಾಲೇಜುಗಳನ್ನು ಗುರುತಿಸಲಾಗಿದ್ದು ಅಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸುವ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಲಿದೆ.
ವಿವೇಕಾನಂದ ಕಾಲೇಜು ತನ್ನ ಆರಂಭದ ದಿನಗಳಿಂದಲೂ ಉತ್ಕøಷ್ಟ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿದೆ. ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ನಾಗರಿಕರಾಗಿ ಹೊರಹೋಗಬೇಕೆಂಬ ಸಂಕಲ್ಪದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ. ಆ ಧ್ಯೇಯದಿಂದಾಗಿಯೇ ಈ ಸಂಸ್ಥೆ ಇಂದು ಮೆಂಟರ್ ಮಾನ್ಯತೆ ಪಡೆಯುವಂಥಾಗಿದೆ” – ಪಿ.ಶ್ರೀನಿವಾಸ ಪೈ, ಆಡಳಿತ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ವಿವೇಕಾನಂದ ಕಾಲೇಜಿನ ಶೈಕ್ಷಣಿಕ ಸಾಧನೆ ಬೇರೆ ಬೇರೆ ಮೌಲ್ಯಾಂಕನ ಹಾಗೂ ದೊರೆತಿರುವ ಸ್ಥಾನಮಾನದಿಂದ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಈಗ ದೊರೆತಿರುವ ಸ್ಥಾನಮಾನದ ಗೌರವ ಆಡಳಿತ ಮಂಡಳಿ, ಉಪನ್ಯಾಸಕ ವೃಂದ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಹೆತ್ತವರು ಮಾತ್ರವಲ್ಲದೆ ಶಿಕ್ಷಣ ಪ್ರೇಮಿಗಳಾದ ನಾಗರಿಕರಿಗೆ ಸಲ್ಲುತ್ತದೆ ಪ್ರಾಂಶುಪಾಲರಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು