Thursday, January 23, 2025
ಸುದ್ದಿ

‘ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಂಪೂರ್ಣ ಬಹುಮತಗಳಿಸಿ ಮತ್ತೆ ಅಧಿಕಾರಕ್ಕೇರಲಿದೆ’ – ಗೋವಾ ಮಾಜಿ ಸಂಸದ ನರೇಂದ್ರ ಸಾವೈಕರ್

ಬಿಜೆಪಿಯ ಜನಪರ ಆಡಳಿತವನ್ನು ಕರ್ನಾಟಕದ ಜನತೆ ಒಪ್ಪಿಕೊಂಡಿದ್ದು, ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಗಳಿಸಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಗೋವಾದ ಮಾಜಿ ಸಂಸದ ನರೇಂದ್ರ ಸಾವೈಕರ್ ಮಂಗಳೂರಿನಲ್ಲಿ ಹೇಳಿದ್ದಾರೆ.
ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಪರ ಮರೋಳಿಯಲ್ಲಿ ನಡೆದ ಮನೆ ಮನೆ ಪ್ರಚಾರದ ವೇಳೆ ಮಾತನಾಡಿದ ಅವರು, ಮನೆ ಮನೆ ಭೇಟಿಯ ವೇಳೆ ವೇದವ್ಯಾಸ್ ಕಾಮತ್ ಪರ ಜನರು ಒಲವು ತೋರುತಿದ್ದಾರೆ. ಕಳೆದ ಐದು ವರ್ಷಗಳ ಅಭಿವೃದ್ಧಿ, ಜನಸೇವೆಯನ್ನು ಬೆಂಬಲಿಸಿ ಮಂಗಳೂರಿನ ಜನತೆ ಮತ್ತೊಮ್ಮೆ ವೇದವ್ಯಾಸ್ ಕಾಮತ್ ಅವರನ್ನು ಚುನಾಯಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುಜನ್ ದಾಸ್ ಕುಡುಪು, ಭಾಸ್ಕರ್ ಚಂದ್ರ ಶೆಟ್ಟಿ, ಕಿರಣ್ ಮರೋಳಿ, ಕೃಷ್ಣ ಎಸ್ಆರ್, ಜಗದೀಶ್ ಶೆಣೈ, ಜಗನ್ನಾಥ್ ಆಡು ಮನೆ, ಪ್ರಶಾಂತ್, ರಾಘು, ಅರುಣ್ ಶೆಟ್ಟಿ,ಸರಳ ಮಾಲತಿ, ವಸಂತ್ ಜೆ ಪೂಜಾರಿ, ಬೋಜ ಅಮೀನ್, ಅನಿತಾ, ಫ್ರಾನ್ಸಿಸ್, ತೇಜಾಕ್ಷ ಸುವರ್ಣ,ಹರಿನಾಕ್ಷ ಭಂಡಾರಿ, ರಂಜಿತ್, ನವೀನ್, ಗುಣನಾಥ್ ಬಂಗೇರ, ಪುಳಿಚ, ಭರತ್, ಮೋಹನ್, ಸತೀಶ್ ರಾಜೇಶ್, ಪವನ್, ಪ್ರವೀಣ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು