Thursday, January 23, 2025
ಸುದ್ದಿ

ಅನ್ಯಕೋಮಿನ ವ್ಯಕ್ತಿಯೋರ್ವನ ಚಿಕನ್ ಸ್ಟಾಲ್ ನಲ್ಲಿ ಗೋ ಮಾಂಸ ಮಾರಾಟ : ಹಿಂದೂ ಕಾರ್ಯಕರ್ತರ ದಾಳಿ –ಕಹಳೆ ನ್ಯೂಸ್

ಪುತ್ತೂರು : ಅನ್ಯಕೋಮಿನ ವ್ಯಕ್ತಿಯೋರ್ವನ ಚಿಕನ್ ಸ್ಟಾಲ್ ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದುದ್ದನ್ನು ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಕಾರ್ಯಕರ್ತರು ಪತ್ತೆ ಹಚ್ಚಿದ ಘಟನೆ ಪಡೀಲ್ ಸಮೀಪ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಡೀಲ್ ಸಮೀಪವಿರುವ ಅನ್ಯಕೋಮಿನ ವ್ಯಕ್ತಿಯೋರ್ವನ ಚಿಕನ್ ಸ್ಟಾಲ್ ನಲ್ಲಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದನ್ನೆಲಾಗಿದೆ.

ಈ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುಮಾರು 1 ಕೆಜಿಯಷ್ಟು ಗೋ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದೂ ನಾಯಕ ಅರುಣ್ ಕುಮಾರ್ ರವರು ಕಾರ್ಯಕರ್ತರ ಜೊತೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.