Thursday, January 23, 2025
ಸುದ್ದಿ

ಕೊಡಿಯಾಲ್ ಬೈಲ್ ಅಟಲ್ ಸೇವಾ ಕೇಂದ್ರದಲ್ಲಿ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು : ಕೊಡಿಯಾಲ್ ಬೈಲ್ ಅಟಲ್ ಸೇವಾ ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಚುನಾವಣಾ ಕಚೇರಿಯನ್ನು ವೇದವ್ಯಾಸ್ ಕಾಮತ್ ಉದ್ಘಾಟಿಸಿದ್ದಾರೆ.
ಬಳಿಕ ಮಾತಾನಾಡಿದ ಇವರು ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ ಕಳೆದ 5 ವರ್ಷಗಳಲ್ಲಿ 4500ಕೋಟಿ ರೂ. ಅನುದಾನ ಮಂಜೂರಾಗಿದೆ. ಇದರಲ್ಲಿ 2500 ಕೋಟಿ ರೂ. ಕಾಮಗಾರಿ ಬಾಕಿಯಿದ್ದು, ಪ್ರಧಾನಿ ಮೋದೀಜಿ ಅವರ ಸಬ್‌ಕೆ ಸಾತ್ ಸಬ್ ಕೆ ವಿಕಾಸ್’ ಪರಿಕಲ್ಪನೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು ನಗರ ಕೆರೆಗಳು, ಪಾಕ್ ಅಂತಾರಾಷ್ಟ್ರೀಯ ಮಟ್ಟ ಈಜುಕೊಳ, ಕ್ರೀಡಾಂಗಣ, ಮಹಿಳಾ- ಪುರುಷರ ಐಟಿಐ ಸೇರಿದಂತೆ ನಾನಾ ಕಾಮಗಾರಿ ಯೋಜನೆ ಹಾಕಲಾಗಿದೆ.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಐಟಿ ಪಾರ್ಕ್ ಯೋಜನೆ ರೂಪಿಸಲಾಗಿದ್ದು, ಇದೆಲ್ಲ ಯೋಜನೆಗಳು 2026ಕ್ಕೆ ಸಾಕಾರ ಗೊಳ್ಳಲಿದ್ದು, ಆಗ ಆಧುನಿಕ ಮಂಗಳೂರಿನ ವೈಭವವನ್ನು ಕಣ್ಣುಂಬಿಕೊಳ್ಳಬಹುದಾಗಿದೆ.

ಪಾರಂಪಾರಿಕ, ಸಾಂಸ್ಕೃತಿಕ, ಧಾರ್ಮಿಕ, ಔದ್ಯಮಿಕ, ಶಿಕ್ಷಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಮಂಗಳೂರು ನಗರದ ಅಭಿವೃದ್ಧಿ ಕಾರ್ಯಗಳಿಗೆ ಡಬಲ್ ಎಂಜಿನ್ ಸರಕಾರ ಬಂದ ಮೇಲೆ ವೇಗ ಸಿಕ್ಕಿದ್ದು, 2026ಕ್ಕೆ ಆಧುನಿಕ ಮಂಗಳೂರಿನ ಸೊಬಗನ್ನು ನೋಡಬಹುದಾಗಿದೆ. ಎಂದು ಮಂಗಳೂರು ದಕ್ಷಿಣರ್ ಗಳು, ವೃತ್ತಗಳು, ಮಾರುಕಟ್ಟೆ, ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.

ಈ ಸಂದರ್ಭ ಮಂಗಳೂರು ನಗರಾ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರವಿಶಂಕರ್ ಮಿಜಾರು, ಗೋವಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನರೇಂದ್ರ ಸಾವೇಕರ್, ಮಹಾ ನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ,ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ಮಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಮಾಜಿ ಸಚಿವ ನಾಗರಾ ಶೆಟ್ಟಿ, ಮೀನುಗಾರ ಮುಖಂಡ ಕುಮಾರ್, ಮುಖಂಡ ರಾದ ಸಂಜಯ್ ಪ್ರಭು, ರೂಪಾ ಡಿ. ಬಂಗೇರಾ, ಭಾಸ್ಕರ್ ಚಂದ್ರ ಶೆಟ್ಟಿ, ನರೇಶ್ ಶೆಣೈ ಹಾಗೂ ಮತ್ತಿತರರು ಉಪಸ್ಥಿತರಿದ್ದರು.