Thursday, January 23, 2025
ಸುದ್ದಿ

‘50,000 ಸಾವಿರ ಮತಗಳ ಅಂತರದಿAದ ಗೆಲ್ಲುವುದೇ ನಮ್ಮ ಗುರಿ’ ; ಬಿಜೆಪಿ ಆಭ್ಯರ್ಥಿ ಡಾ. ವೈ ಭರತ್ ಶೆಟ್ಟಿ –ಕಹಳೆ ನ್ಯೂಸ್

ಮಂಗಳೂರು : ‘50,000 ಸಾವಿರ ಮತಗಳ ಅಂತರದಿಂದ ಗೆಲ್ಲುವುದೇ ನಮ್ಮ ಗುರಿ’ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಆಭ್ಯರ್ಥಿ ಡಾಕ್ಟರ್ ವೈ ಭರತ್ ಶೆಟ್ಟಿ ಹೇಳಿದರು.
ಇವರು ಚಿತ್ರಪುರ ಪರಿಸರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಬಳಿಕ ಮತಯಾಚನೆ ಸಭೆ ನಡೆಸಿದ್ದಾರೆ.
ಈ ವೇಳೆ ಮಾತಾನಾಡಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವೇ ಅತಿ ಸೂಕ್ಷ್ಮ ಮತಗಟ್ಟೆ ಕಾರ್ಯಕರ್ತರು ಈ ಬಾರಿ ಬಿಜೆಪಿ ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಈಗಾಗಲೇ ಎಲ್ಲಾ ವಾರ್ಡ್ ಸಮಿತಿ ಬೂತ್ ಮಟ್ಟದ ಕಾರ್ಯಕರ್ತರು ಮನೆಮನೆಗೆ ತೆರಳಿ ಬಿಜೆಪಿ ಪಕ್ಷದ ಸಾಧನೆಗಳನ್ನ ಮತದಾರರಿಗೆ ಮನದಟ್ಟು ಮಾಡುತ್ತಿದ್ದಾರೆ.
ಉತ್ತರ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಇವರಿಗೆ ಆಗದ ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಮಟ್ಟದ ಅನುದಾನವನ್ನು ತರುವುದರಲ್ಲಿ ನಾನು ಯಶಸ್ವಿಯಾಗಿದ್ದೇನೆ. ರಾಜ್ಯದಲ್ಲಿ ಮಾದರಿಯದ ಸುಸಜ್ಜಿತ ಬಸ್ ನಿಲ್ದಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಈ ಭಾಗದಲ್ಲಿ ಆಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆ ಮನೆ ಭೇಟಿ ಮತದಾರರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಜನರು ತೋರಿಸುತ್ತಾ ಇದ್ದಾರೆ ನಾವು ಬಿಜೆಪಿ ಪರವಾಗಿ ಇದ್ದೇವೆ ಎಂಬ ಮಾತನ್ನು ಹೇಳ್ತಾ ಇದ್ದಾರೆ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ.
ಎದುರಾಳಿ ಯಾರೇ ಆದ್ರೂ ನಮ್ಮ ಗುರಿ ಒಂದೇ 50,000 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ಗುರಿ ಒಂದೇ ಆಗಿದೆ.
ಮೈದೀನ್ ಬಾವ ಜೆಡಿಎಸ್ ಸೇರಿರೋದು ಜೆಡಿಎಸ್ ಯಾವ ರೀತಿಯ ಪಕ್ಷ ಎಂದು ಈಗಾಗಲೇ ಸಾಬೀದ್ದಾಗಿದೆ.
ಹಿಂದುಗಳ ವಿರೋಧಿ ವ್ಯಕ್ತಿಯೊಂದಿಗೆ ಮೋಯ್ದಿನ್ ಭಾವ ಪಕ್ಷವನ್ನು ತೊಡಗಿಸಿಕೊಂಡಿದ್ದಾರೆ ಮತ್ತೊಂದು ಕಡೆ ಡಿಕೆ ಶಿವಕುಮಾರ್ ಅವರ ಶಿಷ್ಯ ಅಂತ ಹೇಳಿಕೊಳ್ಳುತ್ತಾರೆ. ಮೋಯ್ದಿನ್ ಭಾವ ಹೇಳಿಕೊಳ್ಳುವಂತೆ ದೊಡ್ಡ ಮೊತ್ತದ ಹಣವನ್ನು ನೀಡಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಅಂತ ಭಾವರವರೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಕುಕ್ಕರ್ ಬಾಂಬ್ ಸ್ಪೋಟದ ಭಯೋತ್ಪಾದಕನನ್ನು ಅಮಾಯಕ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಹಾಗಾಗಿ ಡಿಕೆ ಶಿವಕುಮಾರ್ ಅವರ ಶಿಷ್ಯನಾಗಿರುವ ಈ ಅಭ್ಯರ್ಥಿ ಬಗ್ಗೆ ನಮಗೆ ಭರವಸೆ ಇಲ್ಲ ಎಂದರು.